Virata rupa dhyana

Composer : Shri Vadirajaru

Smt.Nandini Sripad,Blore.

ಶ್ರೀವಾದಿರಾಜಕೃತ ವಿರಾಡ್ರೂಪಧ್ಯಾನ ,
ರಾಗಮಾಲಿಕೆ , ಆದಿತಾಳ
ರಾಗಗಳು : ಭೌಳಿ , ಹಂಸವಿನೋದಿನಿ , ದೇಶ್ , ಸಿಂಧುಭೈರವಿ

ಪದ್ಮನಾಭನ ಪಾದ ಪದ್ಮಗಳಿಗೆ ನಮೋ ಎಂಬೆ
ವಿದ್ಯಾ ಬುದ್ಧಿ ಕೊಡುವ ಹರಿಯ ಪಾದ ಪದ್ಮಕ್ಕೆರಗುವೆ
ಬ್ರಹ್ಮ ವಾಯು ಸರಸ್ವತಿ ಭಾರತೀಯ ಉಮಾಪತಿ
ಗರುಡ ಶೇಷಾದಿಗಳಿಗೆ ನಮೋ ಎಂಬೆನು ||೧||

ಲೇಸು ಕೊಡುವ ಗುರುಗಳಾಶೇಷರಿಗೆ ವಂದಿಸುವೆ
ವಾಸುದೇವರ ಕಥೆಯ ಪೇಳ್ವೆ ದ್ವಿತೀಯ ಸ್ಕಂಧದಲ್ಲಿ
ರಾಯ ಪ್ರಶ್ನೆ ಮಾಡಿದಾ ಉಪಾಯ ಬಂಧ ಮೋಕ್ಷಗಳಿಗೆ
ಧೇಯ ವಸ್ತು ದಾವುದು ಜಪ್ಯಾದಾವುದು ||೨||

ಪ್ರಶ್ನವಚನ ಕೇಳಿ ಶುಕನು ಬಹಳ ಸಂತೋಷದಿಂದ
ಉತ್ತರವ ನೀಡಲು ದ್ಯುಕ್ತನಾದನು
ಅಣುರೂಪಿ ಪರಮಾತ್ಮ ಗುಣಗಳನರಿಯದೆ
ಗೃಹಸ್ತ ಕರ್ಮಂಗಳಿಗೆ ಗೃಹಸ್ತರಿಗೆ ||೩||

ಕೇಳ ಬೇಕಾದ ವಸ್ತುಗಳಿಗೆ ಸಾರ ಭೂತನಾದ
ಪರಕೆ ಪರಮಾತ್ಮ ಪರರಿಗೆ ಸಂಭೂತ
ಪರೋಪಕಾರ ಪುಣ್ಯ ಶ್ಲೋಕ ಇಂಥಾ ಪ್ರಶ್ನ-ವನ್ನು
ಹೇಳಲಿಕ್ಕೆ ಅತ್ಯಾವಶ್ಯ ಕಾದದ್ದು ||೪||

ನಿದ್ರೆ ಭಾಗದಿಂದ ಅರ್ಧ ಆಯಸ್ಸು ಹೋಯಿತು
ಹಗಲು ಹೋಯಿತು ವ್ಯರ್ಥ ಉದರಂಭರಣದಲಿ
ತನಗೆ ದೈನ್ಯ ತಂದು ಕೊಡುವ ದೇಹಪತ್ಯದಾರರಲ್ಲಿ
ಆಸಕ್ತ ನಾಗಿರೋದು ಕಂಡು ಕಾಣದೀಹನು ||೫||

ಸರ್ವರಂತರ್ಯಾಮಿ ಸರ್ವೈಶ್ವರ್ಯ ಸಂಪನ್ನ
ಸರ್ವರಿಗೆ ಬಂಧ ಮೋಕ್ಷದ ಕಾರಣ
ಬಂಧ ಮೋಕ್ಷೇಚ್ಚುಗಳಿಗೆ ಸೇವ್ಯ ಕೀರ್ತ್ಯ ಸ್ಮರ್ತ್ಯವ್ಯವು
ಶ್ರವಣದಿಂದ ಸಕಲ ದೋಷವನ್ನು ಕಳೆವೋದು ||೬||

ಹರಿಯಾನುಗ್ರಹವಿಲ್ಲದೆ ಹುಟ್ಟು ಬಂಧ ಹೋಗದು
ಭಕ್ತರಿಗೆ ಹರಿಯಾನುಗ್ರಹವೆಂಬುದು ಸಿದ್ದವು
ಶಾಸ್ತ್ರ ತತ್ವ ಜ್ಞಾನ ಯೋಗ ನಿಷ್ಠೆ ಉಳ್ಳವರಿಗೆ
ಜನ್ಮ ಸಫಲವಾಗುವುದು ಹರಿಯ ಸ್ಮರಣೆಯಿಂದ ||೭||

ಮುನಿಗಳು ಕೇಳುರಾಯ ಬಹಳ ವೈರಾಗ್ಯದಿಂದ
ಮುಕ್ತರಾಗಿ ಹರಿಯ ಕಥಾದ ರತಿಯಲೀಹರು
ದ್ವಾಪರ ಯುಗದಲ್ಲಿ ಕೃಷ್ಣಾವತಾರ ಮೊದಲು
ಕೃಷ್ಣ ದ್ವೈಪಾಯನರಿಂದ ಈ ಭಾಗವತ ಓದಿದೆ||೮||

ಎಷ್ಟು ಓದಿದೆ ರಾಯ ಅಷ್ಟು ನಿನಗೆ ಹೇಳುವೆನು
ಭಕ್ತ ಶ್ರೇಷ್ಠನೆಂದು ತಿಳಿದು ಮಹಾ ಭಕ್ತಿಯಿಂದಲಿ
ಎಂಥಾ ಶಾಸ್ತ್ರ ಭಕ್ತಿಯಲ್ಲಿ ಹರಿ ರತಿ ಹುಟ್ಟುವುದು
ಆ ಶಾಸ್ತ್ರ ಹೇಳುವೆ ಆಲಸ್ಯವಿಲ್ಲದೆ ||೯||

ಇದರಿಂದ ಕೇಳುರಾಯ ಹರಿಯ ನಾಮ ಕೀರ್ತನೆಯು
ಅಂತ್ಯ ಕಾಲಕ್ಕೆ ಸ್ಮರಣೆಗೆ ಕಾರಣ ಅಂತ ತಿಳಿದುಕೋ
ಭಕ್ತಿ ಪರವಶವಾದ ಭಕ್ತಿ ಜ್ಞಾನ ಶಾಸ್ತ್ರ ಬೇಕು
ದಿವಸಗಳು ಹತ್ತವು ದೇವ ಪ್ರಿಯಾಗೆ ||೧೦||

ಒಂದಿಷ್ಟು ಘಳಿಗೆ ಸಾಧನದಿಂದ ಹರಿಯ ತೃಪ್ತಿ
ಅಷ್ಟು ವೈರಾಗ್ಯದಿಂದ ಮುಕ್ತನಾಗುವ
ಖಟ್ವಾಂಗರಾಯನು ನಷ್ಟ ಆಯಸ್ಸು ತಿಳಿದು
ಎರಡು ಘಳಿಗೆ ವಿಷಯ ಬಿಟ್ಟು ಹರಿಯ ನೈದಿದ ||೧೧||

ರಾಯ ನಿನಗೆ ಸಪ್ತ ದಿನದ ಕ್ಲಪ್ತ ಆಯಸ್ಸು ಉಂಟು
ಮುಕ್ತಿ ಪಥಕ್ಕೆ ಸಾಧನಾಗೊದೇನು ಮಾಡಿಕೋ
ಅಂತ್ಯಕಾಲ ತಿಳಿದು ದೇಹಂತಕ್ಕೆ ನೀನಂಜದೆ
ವೈರಾಗ್ಯ ಶಾಸ್ತ್ರ ವಿಷಯದಿಂದ ಹರಿಯ ಸಂಘ ಯೈದಿಸು ||೧೨||

ಸನ್ಯಾಸ ಧರ್ಮದಿಂದ ಚೆನ್ನಾಗಿ ಧೀರನಾಗಿ
ಪುಣ್ಯ ಜಲದ ತೀರದಲ್ಲಿ ಪೂತ ದೇಹವು
ಏಕಾಂತದಲ್ಲಿ ಏಕಾಸನವು ನೇಮಿಸಿ
ಏಕ ಚಿತ್ತನಾಗಿ ಏಕ ಭಕ್ತಿಯಿಂದಲಿ ||೧೩||

ಶ್ರವಣಜನ್ಯ ಜ್ಞಾನದಿಂದ ಶುದ್ಧವಾದ ಮನಸ್ಸನ್ನು
ವಿಷಯಗಳಿಗೆ ಯೆರಗದೆ ಇಂದ್ರಿಯ ನಿಗ್ರಹಿಸಿ
ಬಾಹ್ಯ ವಿಷಯದಿಂದ ಬಹು ಚಂಚಲಾದ ಮನಸ್ಸನ್ನು
ದೇಹವಾದರೂ ಹರಿಯ ಅಂಗದಲ್ಲಿ ಇಡಬೇಕು ||೧೪||

ಹರಿಯ ಅಂಗಗಳವಳಗ್ ಒಂದಂಗ ಧ್ಯಾನ ಮಾಡಬೇಕು
ಅನ್ಯ ಮನಸ್ಕನಾಗದೆ ನಿಶ್ಚಿಂತೆಯಲ್ಲಿರಬೇಕು
ಮನಸು ವಿಷ್ಣು ಪಾದದಲ್ಲಿ ನಿಲಿಸಿ ಶ್ವಾಸ ನಿಗ್ರಹಿಸಿ
ಶ್ರೀಕಾರ ಬ್ರಹ್ಮ ವೇದ್ಯನೊಳಗೆ ನಮಿಸಿ ||೧೫||

ಹಿಂಗ ಹೇಳಲು ಶುಕನ ಮಾತು ಕೇಳಿ ರಾಯನ
ಮತ್ತೆ ಪ್ರಶ್ನೆ ಮಾಡಿದ ಉತ್ತರವನ್ನು
ಯೆಂಥ ವಿಷ್ಣು ಪಾದದಲ್ಲಿ ಮನಸು ತಾ ನಿಲ್ಲೋದು
ಧ್ಯಾನವಾದರೂ ಹ್ಯಾಂಗೆ ಮಾಡಬೇಕಾದದ್ದು ||೧೬||

ಯೆಂಥಾ ಭಗವತ್ ಪಥದಲ್ಲಿ ಮನಸು ಸ್ವಸ್ಥ ನಿಲ್ಲೊದು
ಇದಷ್ಟು ಹೇಳು ಎಂದು ರಾಯ ಪ್ರಶ್ನೆ ಮಾಡಿದ
ಪ್ರಶ್ನ ವಚನ ಕೇಳಿ ಶುಕನು ಬಹಳ ಸಂತೋಷದಿಂದ
ಉತ್ತರವ ನೀಡಲುದ್ಯುಕ್ತನಾದನು ||೧೭||

ಅಸನ ಶ್ವಾಸಜಯ ವಿಷಯ ಇಂದ್ರೀಯ ಜಯಗಳಿಗೆ
ಸ್ಥೂಲ ಭಗವದ್ ರೂಪದಲ್ಲಿ ಮನಸ್ಸು ನಿಲ್ಲೋದು
ಸ್ತೂಲಕ್ಕಿಂತ ಸ್ಥೂಲ ಬ್ರಹ್ಮಾಂಡ ಶರೀರವು
ಶೀಲಾ ಪ್ರತಿಮೆಯಂತೆ ಹರಿಯ ಶರೀರವೆಂಬುದು ||೧೮||

ಪಂಚ ಮಹಾಭೂತ ಮಹತತ್ವಹಂಕಾರ ತತ್ವ
ವಿಕೃತವಾಗದ ದೇಹ ವಿರಾಟ್ ದೇಹವು
ವಿರಾಟ್ ಧ್ಯಾನ ಹೇಳಿದವರಿಗೆ ವೈಧವ್ಯ ದೋಷ ಹೋಗೊದು
ಮಾನದೋಷ ಹೋಗುವುದು ಮುಕ್ತಿಬಾಹೊದು ||೧೯||

ಪಾದ ಮೂಲದಲ್ಲಿ ಪಾತಾಳ ಲೋಕ ಹುಟ್ಟಿತು
ಪಾದ ಅಗ್ರದಲ್ಲಿ ರಸಾತಳ ಹುಟ್ಟಿತು
ಮಹಾತಳ ಹುಟ್ಟಿತು ಪಾದ ದ್ವಯಗಳಿಂದ
ತಳತಳ ಹರಿಯ ಜಂಘೆ ಯಿಂದ ಹುಟ್ಟಿತು ||೨೦||

ಸುತ್ತಲವು ಹುಟ್ಟಿತು ಹರಿಯ ಜಾನು ದ್ವಯಗಳಿಂದ
ತೊಡೆಗಳಿಂದ ಹುಟ್ಟಿದವು ಅತಲ ವಿತಲವು
ಭೂಪ ನಿಮ್ಮ ಜಘ್ನದಿಂದ ಭೂರ್ಲೊಕ ಹುಟ್ಟಿತು
ನಾಭಿಯಿಂದ ಅಂತರಿಕ್ಷ ಒಂದೇ ಹುಟ್ಟಿತು ||೨೧||

ಹರಿಯ ವಕ್ಷಸ್ಥಳದಿಂದ ಜ್ಯೋತಿರ್ಲೋಕ ಹುಟ್ಟಿತು
ಕಂಠದಿಂದ ಹುಟ್ಟಿತು ಮಹಾರ್ಲೋಕವು
ಹರಿಯ ವದನದಿಂದಲಿ ಜನೋಲೋಕ ಹುಟ್ಟಿತು
ಲಾಲಾಟದಿಂದ ಹುಟ್ಟಿತು ತಪೋಲೋಕವು ||೨೨||

ಸತ್ಯ ಲೋಕ ಹರಿಯ ಶಿರಸಿನಿಂದ ಹುಟ್ಟಿತು
ಲೋಕ ಪಾಲಕರು ಹುಟ್ಟಿದರು ಬಾಹುಗಳಿಂದಲಿ
ಕರ್ಣ ಗೋಲಿಕದಿಂದ ದಿಕ್ಕುಗಳು ಹುಟ್ಟಿದವು
ಶೋತ್ರದಿಂದ ಹುಟ್ಟಿದಾವು ಬಹಳ ಶಬ್ದಗಳು ||೨೩||

ಅಶ್ವಿನಿಗಳು ಹರಿಯ ನಾಶಿಕದಿಂದ ಹುಟ್ಟಿದರು
ಗಂಧಗಳು ಹುಟ್ಟಿದವು ಘ್ರಣದಿಂದಲಿ
ವಿಷ್ಣು ಮುಖದಿಂದ ಇಂದ್ರಾಗ್ನಿಯು ಜನಿಸಿದರು
ಚಕ್ಷು ಗೋಲಾಕದಿಂದ ದೌರ್ಲೋಕ ಹುಟ್ಟಿತು ||೨೪||

ಚಕ್ಷುರಿಂದ್ರಿಯದಿಂದ ಸೂರ್ಯ ತಾ ಜನಿಸಿದ
ಎವಿಗಳಿಂದ ದೇವ ಮಾನುಶಾಧಿಗಳಾದವು
ಬ್ರೂ ಭ್ರಮಣಗಳಿಂದ ಬ್ರಹ್ಮಸ್ಥಾನ ಹುಟ್ಟಿತು
ತಾಲುನಿಂದ ಹುಟ್ಟಿದವು ಸಕಲ ಉದಕವು ||೨೫||

ಜಿಹೆಂದ್ರಿಯದಿಂದ ರಸಗಳು ಹುಟ್ಟಿದಾವು
ದಂತದಿಂದ ಹುಟ್ಟಿದವು ನಕ್ಷತ್ರಗಳು
ದಮ್ಸ್ಟ್ರದಿಂದ ಆರ್ಯಮೇಂದು ದೇವತೆಗಳುಜನಿಸಿದ
ಹರಿಯ ವಾಕ್ಯದಿಂದ ಜನಿಸಿದವು ವೇದರಾಶಿಯು ||೨೬||

ಹಾಸದಿಂದ ಜನರ ಉನ್ಮಾದ ಶಕ್ತಿ ಹುಟ್ಟಿತು
ಅಪಂಗದಿಂದ ವಿಶ್ವ ಸೃಷ್ಟಿಯಾಯಿತು
ಉತ್ತರೋಷ್ಠದಿಂದ ಲಜ್ಜೆ ಅಪರದಿಂದ ಲೋಭವು
ಧರ್ಮವೆಂಬುದು ಹರಿಯ ಸ್ಥನದಿಂದ ಆಯಿತು ||೨೭||

ಅಧರ್ಮ ಮಾರ್ಗಗಳು ಹಿಂಭಾಗದಿಂದ ಹುಟ್ಟಿದವು
ಗುಹೆಂದ್ರಿಯದಿಂದ ಪ್ರಜಾಪತಿ ದಕ್ಷ ಹುಟ್ಟಿದರು
ಹರಿಯ ವೃಷಣದಿಂದಲಿ ಭಿನ್ನ ತಾ ಹುಟ್ಟಿತು
ಶಬ್ದದಿಂದ ವೈದಿಕ ಲೌಕಿಕ ವಾಕ್ಯ ಹುಟ್ಟಿತು ||೨೮||

ಆದ್ರಿಗಳು ಹುಟ್ಟಿದಾವು ಅಸ್ತಿ ಸಮುದಾಯದಿಂದ
ನದಿಗಳು ಹುಟ್ಟಿದವು ನಾಡಿಯಿಂದಲಿ
ಹರಿಯ ರೋಮಗಳಿಂದ ವೃಕ್ಷಗಳು ಹುಟ್ಟಿದವು
ಅನ್ನಗಳು ಹುಟ್ಟಿದಾವು, ವೀರ್ಯದಿಂದಲಿ ||೨೯||

ಶ್ವಾಸದಿಂದ ವಾಯುವು ಗಮನದಿಂದ ಆಯಸ್ಸು
ಕರ್ಮದಿಂದ ಗುಣತ್ರಯ ಪ್ರವಾಹ ಹುಟ್ಟಿತು
ಕುಕ್ಷಿಯಿಂದ ಹುಟ್ಟಿದಾವು ಸಪ್ತ ಸಮುದ್ರಗಳು
ವಿಚಾರದಿಂದ ಸ್ವಯಂಭುವ ಮನುವು ಹುಟ್ಟಿದ ||೩೦||

ಹರಿಯ ಕೇಶಗಳಿಂದ ಮೇಘಗಳು ಹುಟ್ಟಿದವು
ಸಂಧ್ಯಾ ಕಾಲಗಳು ಹರಿಯ ವಸನದಿಂದಲಿ
ಹರಿಯ ಹೃದಯದಿಂದ ಅವ್ಯಕ್ತ ತತ್ವ ಹುಟ್ಟಿತು
ದೇವ ಮನಸ್ಸಿನಿಂದ ಚಂದ್ರಮನು ಹುಟ್ಟಿದ ||೩೧||

ಹರಿಯ ಬುದ್ಧಿಯಿಂದ ವಿಜ್ಞಾನ ತತ್ವ ಹುಟ್ಟಿತು
ಅಂತಕರಣದಿಂದ ರುದ್ರನು ಹುಟ್ಟಿದ
ಹರಿಯ ನಖರಗಳಿಂದ ಅಶ್ವತ್ಥ ವೃಕ್ಷಗಳು
ಗಜಗಳು ಅಶ್ವಗಳು ಜನನವಾದವು ||೩೨||

ಸಿಂಹ ಮೊದಲಾದ ಸರ್ವ ಮೃಗಗಳು ಹುಟ್ಟಿದವು
ಪಶುಗಳು ಹುಟ್ಟಿದವು ಶ್ರೋಣಿ ದೇಶದಿ
ಗಂಧರ್ವರು ವಿದ್ಯಾಧರರು ಚಾರಣ ಅಪ್ಸರ ಸ್ತ್ರೀಯರು
ಹರಿಯಸ್ವರ ಸ್ಮರಣೆಯಿಂದ ಜನಿಸಿದರು ||೩೩||

ಹರಿಯ ಮುಖದಿಂದಲಿ ಬ್ರಾಹ್ಮಣ ಜಾತಿ ಹುಟ್ಟಿತು
ಬಹುದ್ದ್ವಯಗಳಿಂದ ಕ್ಷತ್ರಿಯ ಜಾತಿ ಹುಟ್ಟಿತು
ಹರಿಯ ತೊಡೆಗಳಿಂದಲಿ ವೈಶ್ಯ ಜಾತಿ ಹುಟ್ಟಿತು
ಪಾದದ್ವಯಗಳಿಂದ ಶೂದ್ರ ಜಾತಿ ಹುಟ್ಟಿತು ||೩೪||

ಹರಿಯ ಮಧ್ಯ ದೇಹದಿಂದ ಹವ್ಯಕವ್ಯ ಹುಟ್ಟಿತು
ಸಾಧನವು ಹುಟ್ಟಿದವು ಸರ್ವ ದೇಹದಿ
ಹರಿಯ ವೀರ್ಯದಿಂದಲಿ ಸ್ವಾಹಾಸ್ವಾದ ಹುಟ್ಟಿದವು
ಪಾಯದಿಂದ ಸರ್ವ ಯಜ್ಞಗಳು ಹುಟ್ಟಿದವು ||೩೫||

ಹೀಂಗೆ ರಾಯಗೆ ಶುಖರು ವಿರಾಟ್ ಮೂರ್ತಿ ಧ್ಯಾನ ಹೇಳಿ
ದ್ವಿತೀಯ ಸ್ಕಂದದಲಿ ಪ್ರಥಮ ಅಧ್ಯಾಯ ಮುಗಿಸಿದ
ವಿರಾಟ್ ಮೂರ್ತಿ ಧ್ಯಾನಕಿಂತ ಉತ್ತಮಾತು ಇಲ್ಲವೆಂದು
ನಾನು ನಿನಗೆ ಹೆಳುವೇನು ಏಲೊ ರಾಯನೆ ||೩೬||

ವಿರಾಟ್ ಮೂರ್ತಿ ಧ್ಯಾನವನ್ನು ಹೇಳಿ ಕೇಳಿದವರಿಗೆ
ಸಾಯುಜ್ಯ ಪದವನೀವ ನಮ್ಮ ಹಯವದನನು ||


SrIvAdirAjakRuta virADrUpadhyAna ,
rAgamAlike , AditALa
rAgagaLu : BauLi , haMsavinOdini , dES , siMdhuBairavi

padmanABana pAda padmagaLige namO eMbe
vidyA buddhi koDuva hariya pAda padmakkeraguve
brahma vAyu sarasvati BAratIya umApati
garuDa SEShAdigaLige namO eMbenu ||1||

lEsu koDuva gurugaLASESharige vaMdisuve
vAsudEvara katheya pELve dvitIya skaMdhadalli
rAya praSne mADidA upAya baMdha mOkShagaLige
dhEya vastu dAvudu japyAdAvudu ||2||

praSnavacana kELi Sukanu bahaLa saMtOShadiMda
uttarava nIDalu dyuktanAdanu
aNurUpi paramAtma guNagaLanariyade
gRuhasta karmaMgaLige gRuhastarige ||3||

kELa bEkAda vastugaLige sAra BUtanAda
parake paramAtma pararige saMBUta
parOpakAra puNya SlOka iMthA praSna-vannu
hELalikke atyAvaSya kAdaddu ||4||

nidre BAgadiMda ardha Ayassu hOyitu
hagalu hOyitu vyartha udaraMBaraNadali
tanage dainya taMdu koDuva dEhapatyadAraralli
Asakta nAgirOdu kaMDu kANadIhanu ||5||

sarvaraMtaryAmi sarvaiSvarya saMpanna
sarvarige baMdha mOkShada kAraNa
baMdha mOkShEccugaLige sEvya kIrtya smartyavyavu
SravaNadiMda sakala dOShavannu kaLevOdu ||6||

hariyAnugrahavillade huTTu baMdha hOgadu
Baktarige hariyAnugrahaveMbudu siddavu
SAstra tatva j~jAna yOga niShThe uLLavarige
janma saPalavAguvudu hariya smaraNeyiMda ||7||

munigaLu kELurAya bahaLa vairAgyadiMda
muktarAgi hariya kathAda ratiyalIharu
dvApara yugadalli kRuShNAvatAra modalu
kRuShNa dvaipAyanariMda I BAgavata Odide||8||

eShTu Odide rAya aShTu ninage hELuvenu
Bakta SrEShThaneMdu tiLidu mahA BaktiyiMdali
eMthA SAstra Baktiyalli hari rati huTTuvudu
A SAstra hELuve Alasyavillade ||9||

idariMda kELurAya hariya nAma kIrtaneyu
aMtya kAlakke smaraNege kAraNa aMta tiLidukO
Bakti paravaSavAda Bakti j~jAna SAstra bEku
divasagaLu hattavu dEva priyAge ||10||

oMdiShTu GaLige sAdhanadiMda hariya tRupti
aShTu vairAgyadiMda muktanAguva
KaTvAMgarAyanu naShTa Ayassu tiLidu
eraDu GaLige viShaya biTTu hariya naidida ||11||

rAya ninage sapta dinada klapta Ayassu uMTu
mukti pathakke sAdhanAgodEnu mADikO
aMtyakAla tiLidu dEhaMtakke nInaMjade
vairAgya SAstra viShayadiMda hariya saMGa yaidisu ||12||

sanyAsa dharmadiMda cennAgi dhIranAgi
puNya jalada tIradalli pUta dEhavu
EkAMtadalli EkAsanavu nEmisi
Eka cittanAgi Eka BaktiyiMdali ||13||

SravaNajanya j~jAnadiMda SuddhavAda manassannu
viShayagaLige yeragade iMdriya nigrahisi
bAhya viShayadiMda bahu caMcalAda manassannu
dEhavAdarU hariya aMgadalli iDabEku ||14||

hariya aMgagaLavaLag oMdaMga dhyAna mADabEku
anya manaskanAgade niSciMteyallirabEku
manasu viShNu pAdadalli nilisi SvAsa nigrahisi
SrIkAra brahma vEdyanoLage namisi ||15||

hiMga hELalu Sukana mAtu kELi rAyana
matte praSne mADida uttaravannu
yeMtha viShNu pAdadalli manasu tA nillOdu
dhyAnavAdarU hyAMge mADabEkAdaddu ||16||

yeMthA Bagavat pathadalli manasu svastha nillodu
idaShTu hELu eMdu rAya praSne mADida
praSna vacana kELi Sukanu bahaLa saMtOShadiMda
uttarava nIDaludyuktanAdanu ||17||

asana SvAsajaya viShaya iMdrIya jayagaLige
sthUla Bagavad rUpadalli manassu nillOdu
stUlakkiMta sthUla brahmAMDa SarIravu
SIlA pratimeyaMte hariya SarIraveMbudu ||18||

paMca mahABUta mahatatvahaMkAra tatva
vikRutavAgada dEha virAT dEhavu
virAT dhyAna hELidavarige vaidhavya dOSha hOgodu
mAnadOSha hOguvudu muktibAhodu ||19||

pAda mUladalli pAtALa lOka huTTitu
pAda agradalli rasAtaLa huTTitu
mahAtaLa huTTitu pAda dvayagaLiMda
taLataLa hariya jaMGe yiMda huTTitu ||20||

suttalavu huTTitu hariya jAnu dvayagaLiMda
toDegaLiMda huTTidavu atala vitalavu
BUpa nimma jaGnadiMda BUrloka huTTitu
nABiyiMda aMtarikSha oMdE huTTitu ||21||

hariya vakShasthaLadiMda jyOtirlOka huTTitu
kaMThadiMda huTTitu mahArlOkavu
hariya vadanadiMdali janOlOka huTTitu
lAlATadiMda huTTitu tapOlOkavu ||22||

satya lOka hariya SirasiniMda huTTitu
lOka pAlakaru huTTidaru bAhugaLiMdali
karNa gOlikadiMda dikkugaLu huTTidavu
SOtradiMda huTTidAvu bahaLa SabdagaLu ||23||

aSvinigaLu hariya nASikadiMda huTTidaru
gaMdhagaLu huTTidavu GraNadiMdali
viShNu muKadiMda iMdrAgniyu janisidaru
cakShu gOlAkadiMda daurlOka huTTitu ||24||

cakShuriMdriyadiMda sUrya tA janisida
evigaLiMda dEva mAnuSAdhigaLAdavu
brU BramaNagaLiMda brahmasthAna huTTitu
tAluniMda huTTidavu sakala udakavu ||25||

jiheMdriyadiMda rasagaLu huTTidAvu
daMtadiMda huTTidavu nakShatragaLu
damsTradiMda AryamEMdu dEvategaLujanisida
hariya vAkyadiMda janisidavu vEdarASiyu ||26||

hAsadiMda janara unmAda Sakti huTTitu
apaMgadiMda viSva sRuShTiyAyitu
uttarOShThadiMda lajje aparadiMda lOBavu
dharmaveMbudu hariya sthanadiMda Ayitu ||27||

adharma mArgagaLu hiMBAgadiMda huTTidavu
guheMdriyadiMda prajApati dakSha huTTidaru
hariya vRuShaNadiMdali Binna tA huTTitu
SabdadiMda vaidika laukika vAkya huTTitu ||28||

AdrigaLu huTTidAvu asti samudAyadiMda
nadigaLu huTTidavu nADiyiMdali
hariya rOmagaLiMda vRukShagaLu huTTidavu
annagaLu huTTidAvu, vIryadiMdali ||29||

SvAsadiMda vAyuvu gamanadiMda Ayassu
karmadiMda guNatraya pravAha huTTitu
kukShiyiMda huTTidAvu sapta samudragaLu
vicAradiMda svayaMBuva manuvu huTTida ||30||

hariya kESagaLiMda mEGagaLu huTTidavu
saMdhyA kAlagaLu hariya vasanadiMdali
hariya hRudayadiMda avyakta tatva huTTitu
dEva manassiniMda caMdramanu huTTida ||31||

hariya buddhiyiMda vij~jAna tatva huTTitu
aMtakaraNadiMda rudranu huTTida
hariya naKaragaLiMda aSvattha vRukShagaLu
gajagaLu aSvagaLu jananavAdavu ||32||

siMha modalAda sarva mRugagaLu huTTidavu
paSugaLu huTTidavu SrONi dESadi
gaMdharvaru vidyAdhararu cAraNa apsara strIyaru
hariyasvara smaraNeyiMda janisidaru ||33||

hariya muKadiMdali brAhmaNa jAti huTTitu
bahuddvayagaLiMda kShatriya jAti huTTitu
hariya toDegaLiMdali vaiSya jAti huTTitu
pAdadvayagaLiMda SUdra jAti huTTitu ||34||

hariya madhya dEhadiMda havyakavya huTTitu
sAdhanavu huTTidavu sarva dEhadi
hariya vIryadiMdali svAhAsvAda huTTidavu
pAyadiMda sarva yaj~jagaLu huTTidavu ||35||

heeMge rAyage shukharu virAT moorti dhyAna hELi
dvitIya skaMdadali prathama adhyAya mugisida
virAT moorti dhyAnakiMta uttamAtu illaveMdu
nAnu ninage heLuvEnu Elo rAyane ||36||

virAT moorti dhyAnavannu hELi kELidavarige
sAyujya padavanIva namma hayavadananu ||

Leave a Reply

Your email address will not be published. Required fields are marked *

You might also like

error: Content is protected !!