Composer : Shri Hayavadana vittala
ಶ್ರೀ ವಿಜಯದಾಸರ ಅನುಜರಾದ
ಶ್ರೀ ಆನಂದದಾಸಾರ್ಯ ವಿರಚಿತ
(ಹಯವದನವಿಟ್ಠಲ ಅಂಕಿತ)
ಶ್ರೀ ವಿಜಯದಾಸರ ಸಂಕ್ಷೇಪ ಚರಿತ್ರೆ
ರಾಗ: ಭೌಳಿ, ವಾರ್ಧಿಕ ಷಟ್ಪದಿ
ನೆನೆಸಿದವರಘನಾಶನಾ || ಪ ||
ನೆನೆಸಿದವರಘನಾಶ ಅನುಮಾನವಿಲ್ಲದಕೆ
ವನಜನಾಭನು ಒಲಿದು ಘನವಾಗಿ ಪಾಲಿಸುವ
ದಿನದಿನದಲಿ ಬಿಡದೆ ವಿಜಯರಾಯರ ದಿವ್ಯ
ಗುಣ ಕರ್ಮ ಕೊಂಡಾಡಿರೊ || ಅ ಪ ||
ಆದಿಯಲಿ ಸುರಮುನಿಯ ಪಾದಸೇವೆಯ ಮಾಡಿ
ಮೋದದಲಿ ಸುರಲೀಲ ಎಂಬ ಕಪಿ ತ್ರೇತೆಯಲಿ
ಆ ದ್ವಾಪರದಿ ನಿಕಂಪನ ಎಂಬ ನಾಮದಲಿ
ಶ್ರೀಧರನ ಸೇವಿಸುತಿದ್ದು ||
ಕಾದಿದ್ದ ಕಲಿಯುಗದಿ ಪುರಂದರದಾಸರ
ಸ್ವಾದು ವಚನವ ಕೇಳಿ ತುರುಕರುವು ಆಗಿದ್ದು
ಖೇದವಿಲ್ಲದೆ ಜನಿಸಿ ಬರುತ ಬರುತ ಮತ್ತೆ
ಮೇದಿನೀಸುರ ಜನ್ಮದಿ || ೧ ||
ವರತುಂಗಭದ್ರತೀರದ ಗ್ರಾಮ ಅಶ್ವತ್ಥ –
ನರಸಿಂಹ ಚೀಕನಬರವಿ ಎಂಬ ಗ್ರಾಮದಲಿ
ಇರುತಿಪ್ಪ ಶ್ರೀನಿವಾಸಪ್ಪ ಕೂಸಮ್ಮ ಶ್ರೀ
ಗುರುಸೇವೆ ಮಾಡಿ ಸತತ ||
ವರವ ಪಡೆದಳೈ ಎರಡೊಂದು ಪುತ್ರರನು
ಹಿರಿಯ ಮಗನಾದ ದಾಸಪ್ಪನೆಂದಿರುವ ನಾಮದಿ
ಕರೆದು ಮುದ್ದಿಸಿ ಸಾಕಿ ಮುಂಜಿ ಮದುವೆ ಮಾಡಿ
ಇರುತಿರಲು ಕೆಲವು ಕಾಲ || ೨ ||
ಲೋಕಜನರಂತೆ ಲೌಕಿಕದೊಳು ಸಂಚರಿಸಿ
ಈ ಕಾಯಗೋಸುಗಾನೇಕ ಜನರ ಸೇವೆ
ಕಾಕಪ್ಪಿಯಾಗಿ ವಸ್ತ್ರಾನ್ನ ಕಾಣದೆ ಮರುಗಿ
ಸಾಕುವಾರಿಲ್ಲೆನುತಲಿ ||
ಬೇಕಾದ ದೇಶವನು ಚರಿಸುತಿರೆ ಒಂದುಕಡೆ
ತಾಕಿ ಚೋರರು ವಸ್ತ್ರಾದಿಗಳನಪಹರಿಸೆ ಯಿ –
ನ್ಯಾಕೆ ಬಂಧುಬಳಗವೆಂದೆನಿಸುತ ಅಲ್ಲಿಂದ
ನಾಕನದಿಮೀವೆನೆಂದು || ೩ ||
ಹಿರಿಯರಿಗೆ ಪೇಳದಲೆ ತೆರಳಿ ಯಾತ್ರೆಗೆ ಪೋಗಿ
ಎರಡೆಂಟು ವತ್ಸರದ ತರುಳಪ್ರಾಯದಲಿಂದ
ಸರುವ ತೀರ್ಥಕ್ಷೇತ್ರದಲಿ ಮಿಂದು ವಿಂಶತಿ ವ –
ತ್ಸರಕೆ ತಿರುಗಿ ಬಂದು ||
ವರ ಮಾತೃ ಪಿತೃ ಸಹೋದರರ ಸಹವಾಗಿ
ಬೆರತು ಮಾನವರಂತೆ ಸಂಸಾರವೃತ್ತಿಯಲಿ
ಎರಡೇಳು ವರುಷ ಇರುತಿರ್ದು ಮೆಲ್ಲನೆ ಹರಿ
ವರ ಕೃಪೆಯು ಆಗೆ ತಿಳಿದು || ೪ ||
ಮತ್ತೆ ಪೊರಟರು ಶ್ರೀಉತ್ತಮಶ್ಲೋಕಹರಿ
ಪೆತ್ತ ಗಂಗೆಯ ಸ್ನಾನ ಗಯದಲ್ಲಿ ಪಿಂಡವ –
ನಿತ್ತು ಮರಳಿ ಬಂದು ವಾರಣಾಸಿಯಲ್ಲಿ
ಉತ್ತಮರ ಸಂಗದಿಂದ ||
ನಿತ್ಯ ಸ್ನಾನ ಸಂಧ್ಯ ಶುಚಿಯಾಗಿ ಮಲಗಿರಲು
ಸತ್ಯವಾಗಿ ಸ್ವಾಪದಲಿ ನರಹರಿ ಪಡೆದ
ಪುತ್ರನೆಬ್ಬಿಸಿದಂತೆ ದಾಸರ ರೂಪಿನಲಿ
ಹತ್ತೆಗರೆದು ಕರುಣದಿ || ೫ ||
ಸುರನದಿಯ ದಾಟಿಸಿ ಆಚೆಯಲಿ ಇರುತಿಪ್ಪ
ವರ ವ್ಯಾಸಕಾಶಿಯ ಪುರದ ದೊರೆಯಾದ
ಸಿರಿವಾಸುದೇವ ಬಲು ಸುರರ ಸಂದಣಿಯೊಳಗೆ
ಮೆರೆವುತಲಿ ಕುಳಿತುಯಿರಲು ||
ಭರದಿಂದ ತೋರಿಸಿ ಶಿರವಾಗಿ ತುತಿಸೆನುತ
ಕರದು ಪೇಳಿ ಅವರ ಕರದಿಂದ ಆದರಿಸಿ
ಸರಸದಿಂದಲಿ ನೀನು ಹರಿಚರಿತೆ ಪೇಳೆನುತ
ಕರುಣರಸದಿಂದರುಹಲು || ೬ ||
ಎಚ್ಚೆತ್ತುನೋಡೆ ಸಿರಿ ಅಚ್ಯುತನ ಮಹಿಮೆಯನು
ಬಿಚ್ಚುವುದನರಿದೆನು ಹೆಚ್ಚು ಸಂತೋಷದಲಿ
ಕೊಚ್ಚಿಪೋದವು ಮನದಿ ಹೆಚ್ಚಿದ್ದ ಪಾಪಗಳು
ಸ್ವಚ್ಛಚಿತ್ತದಲಿ ಹರಿಯ ||
ನಿಚ್ಚಮನ ಬಂದಂತೆ ಸಚ್ಚರಿತ ಸಿದ್ಧಾಂತ
ಅಚ್ಚಸುಖತೀರ್ಥಮತ ನೆಚ್ಚಿ ಕವನವ ಪೇಳಿ
ನುಚ್ಚುಮನವುಳ್ಳವರ ತಿದ್ದಿ ಜ್ಞಾನಭಕುತಿ
ಮುಚ್ಚುಗಾಣಿಕೆನಿತ್ತರು || ೭ ||
ತೃತೀಯ ಕಾಶಿಯಾತ್ರೆ ಮಾಡಬಂದಾಗ ಉ –
ನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ
ಅತಿಶಯದಿ ಬಂದು ಮಚ್ಛೋದರಿಯ ನಾಮದಲಿ
ಪ್ರತಿಯಿಲ್ಲದಂತೆ ತೋರೆ ||
ನುತಿಸಿ ಅಲ್ಲಿಗೆ ಸೇತುಸ್ನಾನಗೈತಂದು
ರತಿಯಿಂದ ಮಾಡಿ ಸರ್ವರನ ಉದ್ಧರಿಸುತ್ತ
ಮಿತಿಯಿಲ್ಲದಲೆ ಕಾಶಿಸೇತು ಪರಿಯಂತರ
ಕಥೆಯಿಂದ ಕೀರ್ತಿಪಡೆದು || ೮ ||
ಲೋಕೋಪಕಾರಕ್ಕೆ ಹದಿನೆಂಟುವತ್ಸರಾ –
ನೇಕ ತೀರ್ಥಯಾತ್ರೆ ತಿರುಗಿ ವೈರಾಗ್ಯದಲಿ
ಶ್ರೀಕಾಂತ ಹರಿಯ ಮನದೊಳಗೆ ಧೇನಿಸಿಕೊಳುತ
ಪ್ರಾಕೃತರ ಸಂಗ ತೊರೆದು ||
ವೈಕುಂಠಯಾತ್ರೆ ಯುವಸಂವತ್ಸರದ ಶುದ್ಧ
ಆ ಕಾರ್ತಿಕದಶಮಿ ಗುರುವಾರ ಪ್ರಹರದಲಿ
ರಾಕೇಂದುಬಿಂಬ ಹಯವದನವಿಟ್ಠಲನಂಘ್ರಿ
ಜೋಕೆಯಲಿ ಸೇರಿದವರು || ೯ ||
SrI vijayadAsara anujarAda
SrI AnaMdadAsArya viracita
(hayavadanaviTThala aMkita)
SrI vijayadAsara saMkShEpa caritre
rAga: BauLi, vArdhika ShaTpadi
nenesidavaraGanASanA || pa ||
nenesidavaraGanASa anumAnavilladake
vanajanABanu olidu GanavAgi pAlisuva
dinadinadali biDade vijayarAyara divya
guNa karma koMDADiro || a pa ||
Adiyali suramuniya pAdasEveya mADi
mOdadali suralIla eMba kapi trEteyali
A dvAparadi nikaMpana eMba nAmadali
SrIdharana sEvisutiddu ||
kAdidda kaliyugadi puraMdaradAsara
svAdu vacanava kELi turukaruvu Agiddu
KEdavillade janisi baruta baruta matte
mEdinIsura janmadi || 1 ||
varatuMgaBadratIrada grAma aSvattha –
narasiMha cIkanabaravi eMba grAmadali
irutippa SrInivAsappa kUsamma SrI
gurusEve mADi satata ||
varava paDedaLai eraDoMdu putraranu
hiriya maganAda dAsappaneMdiruva nAmadi
karedu muddisi sAki muMji maduve mADi
irutiralu kelavu kAla || 2 ||
lOkajanaraMte laukikadoLu saMcarisi
I kAyagOsugAnEka janara sEve
kAkappiyAgi vastrAnna kANade marugi
sAkuvArillenutali ||
bEkAda dESavanu carisutire oMdukaDe
tAki cOraru vastrAdigaLanapaharise yi –
nyAke baMdhubaLagaveMdenisuta alliMda
nAkanadimIveneMdu || 3 ||
hiriyarige pELadale teraLi yAtrege pOgi
eraDeMTu vatsarada taruLaprAyadaliMda
saruva tIrthakShEtradali miMdu viMSati va –
tsarake tirugi baMdu ||
vara mAtRu pitRu sahOdarara sahavAgi
beratu mAnavaraMte saMsAravRuttiyali
eraDELu varuSha irutirdu mellane hari
vara kRupeyu Age tiLidu || 4 ||
matte poraTaru SrI^^uttamaSlOkahari
petta gaMgeya snAna gayadalli piMDava –
nittu maraLi baMdu vAraNAsiyalli
uttamara saMgadiMda ||
nitya snAna saMdhya SuciyAgi malagiralu
satyavAgi svApadali narahari paDeda
putranebbisidaMte dAsara rUpinali
hattegaredu karuNadi || 5 ||
suranadiya dATisi Aceyali irutippa
vara vyAsakASiya purada doreyAda
sirivAsudEva balu surara saMdaNiyoLage
merevutali kuLituyiralu ||
BaradiMda tOrisi SiravAgi tutisenuta
karadu pELi avara karadiMda Adarisi
sarasadiMdali nInu haricarite pELenuta
karuNarasadiMdaruhalu || 6 ||
eccettunODe siri acyutana mahimeyanu
biccuvudanaridenu heccu saMtOShadali
koccipOdavu manadi heccidda pApagaLu
svacCacittadali hariya ||
niccamana baMdaMte saccarita siddhAMta
accasuKatIrthamata necci kavanava pELi
nuccumanavuLLavara tiddi j~jAnaBakuti
muccugANikenittaru || 7 ||
tRutIya kASiyAtre mADabaMdAga u –
nnatavAgi naBagaMge ukkEri gaganakke
atiSayadi baMdu macCOdariya nAmadali
pratiyilladaMte tOre ||
nutisi allige sEtusnAnagaitaMdu
ratiyiMda mADi sarvarana uddharisutta
mitiyilladale kASisEtu pariyaMtara
katheyiMda kIrtipaDedu || 8 ||
lOkOpakArakke hadineMTuvatsarA –
nEka tIrthayAtre tirugi vairAgyadali
SrIkAMta hariya manadoLage dhEnisikoLuta
prAkRutara saMga toredu ||
vaikuMThayAtre yuvasaMvatsarada Suddha
A kArtikadaSami guruvAra praharadali
rAkEMdubiMba hayavadanaviTThalanaMGri
jOkeyali sEridavaru || 9 ||
Leave a Reply