Sripatiya naivedya

Composer : Shri Vijaya dasaru

Smt.Nandini Sripad , Blore..

ಶ್ರೀ ವಿಜಯದಾಸಾರ್ಯ ವಿರಚಿತ ನೈವೇದ್ಯ ಪ್ರಮೇಯ
(ನೈವೇದ್ಯ ಪ್ರಕಾರ ಮತ್ತು ಅಲ್ಲಿ ಚಿಂತಿಸಬೇಕಾದ ದೇವತೆಗಳನ್ನು ,
ತೋರಿಸಬೇಕಾದ ಮುದ್ರೆಗಳನ್ನು ಸಂಕ್ಷಿಪ್ತವಾದ ಶಬ್ದಗಳಲ್ಲಿ ,
ವಿಸ್ತಾರವಾದ ವಿಚಾರಗಳನ್ನು ದಾಸಾರ್ಯರು ತಿಳಿಸಿದ್ದಾರೆ.)

ರಾಗ: ಅಭೋಗಿ, ಭಾಮಿನಿ ಷಟ್ಪದಿ

ಶ್ರೀಪತಿಯ ನೈವೇದ್ಯ ಕೊಡುವದು ।
ಧೂಪದಾಂತರ ಭೂಮಿ ಶೋಧನ ।
ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ।
ಸೂಪ ಅನ್ನವು ಅಗ್ನಿಕೋಣದಿ ।
ಆ ಪರಮ ಅನ್ನವನು ಈಶಾ ।
ನ್ಯಾಪೆಯಾ ಲೇಹ್ಯಗಳ ನೈರುತ್ಯದಲಿ ಇಟ್ಟು ತಥಾ ॥ 1 ॥

ವಾಯುದಿಶದಲಿ ಉಪಸುಭೋಜ್ಯವು ।
ಪಾಯಸನ್ನದ ಮಧ್ಯ ಘೃತ ಸಂ – ।
ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ।
ಬಾಯಿಯಿಂದಲಿ ದ್ವಾದಶ ಸ್ತುತಿ ।
ಗಾಯನದಿ ನುಡಿಯುತಲಿ ಈ ಕಡೆ ।
ಆಯಾ ಅಭಿಮಾನಿಗಳು ದೇವತಿಗಳನು ಚಿಂತಿಸುತ ॥ 2 ॥

ಓದನಕ ಅಭಿಮಾನಿ ಶಶಿ ಪರ – ।
ಮೋದನಕ ಅಭಿಮಾನಿ ಭಾರತಿ ।
ಆ ದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ।
ಸ್ವಾದುಕ್ಷೀರಕೆ ವಾಣಿ ಮಂಡಿಗಿ – ।
ಲೀ ದ್ರುಹಿಣ ನವನೀತ ಪವನಾ – ।
ದಾದಧಿಗೆ ಶಶಿ ವರುಣ ಸೂಪಕೆ ಗರುಡ ಅಭಿಮಾನಿ ॥ 3 ॥

ಶಾಕದಲಿ ಶೇಷಾಮ್ಲ ಗಿರಿಜಾ ।
ನೇಕನಾಮ್ಲದಿ ರುದ್ರ ಸಿತದಲಿ ।
ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ।
ಈ ಕಟು ಪದಾರ್ಥದಲಿ ಯಮ ಬಾ – ।
ಹ್ಲೀಕ ತಂತುಭದಲ್ಲಿ ಮನ್ಮಥ -।
ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ ॥ 4 ॥

ಕೂಷುಮಾಂಡದ ಸಂಡಿಗೆಲಿ ಕುಲ ।
ಮಾಷದಲಿ ದಕ್ಷ ಪ್ರಜಾಪತಿ ।
ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ।
ಈ ಸುಫಲ ಷಡ್ರಸದಿ ಪ್ರಾಣ ವಿ – ।
ಶೇಷ ತಾಂಬೂಲದಲಿ ಗಂಗಾ ।
ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ ॥ 5 ॥

ಸಕಲ ಭಕ್ಷಗಳಲ್ಲಿ ಉದಕದಿ ।
ಭುಕು ಪದಾರ್ಥಕೆ ವಿಶ್ವ ಮೂರುತಿ ।
ಮುಖದಲೀ ನುಡಿ ಅಂತಿಲೀ ಶ್ರೀಕೃಷ್ಣ ಮೂರುತಿಯ ।
ನಖ ಚತು ಪದಾರ್ಥದಲಿ ಆ ಸ – ।
ಮ್ಯಕು ಚತುರವಿಂಶತಿ ಅಭಿಮಾ – ।
ನಿಕರ ಚಿಂತಿಸಿ ಸರ್ಪಿ ಸಹ ಶ್ರೀತುಳಸಿಯನು ಹಾಕಿ ॥ 6 ॥

ಕ್ಷೀರ ದಧಿ ಕರ್ಪೂರ ಸಾಕ – ।
ರ್ಜೀರ ಪನಸ ಕಪಿಥ್ಥ ಪಣ್ಕದ – ।
ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ।
ಪೂರ ಶಂಖದಿ ಉದಕ ಓಂ ನಮೊ ।
ನಾರೆಯಣಾ ಅಷ್ಟಾಕ್ಷರವು ತನ ।
ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ ॥ 7 ॥

ಸೌರಭೀ ಮಂತ್ರದಲಿ ಪ್ರೇಕ್ಷಿಸಿ ।
ತೋರಿ ತೀವ್ರದಿ ಮುದ್ರಿ ನಿರ್ವಿಷ ।
ಮೂರೆರಡು ಮೊದಲಾಗಿ ಶಂಖವು ಅಂತಿ ಮಾಡಿ ತಥಾ ।
ಪೂರ್ವ ಆಪೋಶನವು ಹೇಳಿ ಅ – ।
ಪೂರ್ವ ನೈವೇದ್ಯವು ಸಮರ್ಪಿಸಿ ।
ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ ॥ 8 ॥

ಪೂಗ ಅರ್ಪಿಸಿದಂತರದಿ ಅತಿ ।
ಬ್ಯಾಗದಲಿ ಲಕ್ಷ್ಯಾದಿ ನೈವೇ – ।
ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ।
ಸಾಗಿಸೀ ಶ್ರೀಹರಿಯ ಸಂಪುಟ – ।
ದಾಗ ನಿಲ್ಲಿಸಿ ವೈಶ್ವದೇವವು ।
ಸಾಗಿಸೀ ಶ್ರೀವಿಜಯವಿಠಲನ ಧೇನಿಸುತ ಮುದದಿ ॥ 9 ॥


SrI vijayadAsArya viracita naivEdya pramEya ,
BAmini ShaTpadi..

SrIpatiya naivEdya koDuvadu |
dhUpadAMtara BUmi SOdhana |
ApadiM maMDalava mADuta raMgavali hAki |
sUpa annavu agnikONadi |
A parama annavanu ISA |
nyApeyA lEhyagaLa nairutyadali iTTu tathA || 1 ||

vAyudiSadali upasuBOjyavu |
pAyasannada madhya GRuta saM – |
stUyamAna nivEdanavu I kramadi hIMgiTTu |
bAyiyiMdali dvAdaSa stuti |
gAyanadi nuDiyutali I kaDe |
AyA aBimAnigaLu dEvatigaLanu ciMtisuta || 2 ||

Odanaka aBimAni SaSi para – |
mOdanaka aBimAni BArati |
A divAkara BakSha kShIrAbdhIje sarpiyali |
svAdukShIrake vANi maMDigi – |
lI druhiNa navanIta pavanA – |
dAdadhige SaSi varuNa sUpake garuDa aBimAni || 3 ||

SAkadali SEShAmla girijA |
nEkanAmladi rudra sitadali |
pAkaSAsana SEShupaskaradalli vAkpatiyU |
I kaTu padArthadali yama bA – |
hlIka taMtuBadalli manmatha -|
nEka vyaMjana taila pakvadi saumyanAmakanU || 4 ||

kUShumAMDada saMDigeli kula |
mAShadali dakSha prajApati |
mASha BakShadi brahmaputranu lavaNadali ni^^Ruti |
I suPala ShaDrasadi prANa vi – |
SESha tAMbUladali gaMgA |
A sukarmake puShkaranu aBimAni dEvateyU || 5 ||

sakala BakShagaLalli udakadi |
Buku padArthake viSva mUruti |
muKadalI nuDi aMtilI SrIkRuShNa mUrutiya |
naKa catu padArthadali A sa – |
myaku caturaviMSati aBimA – |
nikara ciMtisi sarpi saha SrItuLasiyanu hAki || 6 ||

kShIra dadhi karpUra sAka – |
rjIra panasa kapiththa paNkada – |
LIrasAla drAkSha tAMbUladali ciMtaneyU |
pUra SaMKadi udaka OM namo |
nAreyaNA aShTAkSharavu tana |
mOre mucci SatAShTavartili maMtarisi teredU || 7 ||

sauraBI maMtradali prEkShisi |
tOri tIvradi mudri nirviSha |
mUreraDu modalAgi SaMKavu aMti mADi tathA |
pUrva ApOSanavu hELi a – |
pUrva naivEdyavu samarpisi |
sArvaBaumaga uttarApOSanavu hELi tathA || 8 ||

pUga arpisidaMtaradi ati |
byAgadali lakShyAdi naivE – |
dyAga arpisi tAratamyadi uLida dEvarige |
sAgisI SrIhariya saMpuTa – |
dAga nillisi vaiSvadEvavu |
sAgisI SrIvijayaviThalana dhEnisuta mudadi || 9 ||

Leave a Reply

Your email address will not be published. Required fields are marked *

You might also like

error: Content is protected !!