Composer : Shri Uragadrivasa vittala
ಉರಗಾದ್ರಿವಾಸ ವಿಠಲದಾಸರ ಸೃಷ್ಟಿ ಪ್ರಕರಣ |
ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ |ಪ|
ಧೇನಿಸು ಶ್ರೀಹರಿಯ ಲೀಲಾ, ಸೃಷ್ಟಿ
ಮಾನಸದಲಿ ನೆನೆಯೋ ಪರಿಯಾ ||ಆಹಾ||
ತಾನೆ ತನ್ನಯ ಲೀಲಾಜಾಲತನದಿ ತನ್ನ
ಆನಂದದೊಳಿಪ್ಪ ಶ್ರೀ ಮುಕುಂದ ನನ್ನ ||ಅ.ಪ||
ಮೂಲ ನಾರಾಯಣ ದೇವ ತಾನು
ಆಲದೆಲೆಯೊಳು ಲೀಲಾ, ತೋರಿ
ಬಾಲತನದಿ ತಾ ನಲಿವಾ, ಅನೇಕ
ಕಾಲ ಪರ್ಯಂತರದಿ ಸರ್ವ ||ಆಹಾ||
ಎಲ್ಲ ಜಗವ ತನ್ನ ಒಡಲೊಳು ಅಡಗಿಸಿ
ಲೋಲನಾಗಿ ಬಾಲಕ್ರೀಡೆಯಾಡುವಪರಿಯಾ (೧)
ಇಂತು ಶಯನಗೈದ ಹರಿಯ ಅ-
ನಂತ ವೇದಗಳಿಂದ ತ್ವರಿಯಾ, ದುರ್ಗ
ಸಂತಸದಿಂದ ಸಂಸ್ತುತಿಯ, ಮಾಡೆ
ಕಂತುಪಿತನು ತಾನೆಚ್ಚರಿಯ ||ಆಹಾ||
ಅಂತೆ ತೋರ್ದ ವಾಸುದೇವಾದಿ ಚತುರಾ-
ನಂತವತಾರ ಸಿರಿ ರೂಪಗಳ ಸಹಿತ (೨)
ಸಕಲ ರೂಪಗಳ ತನ್ನೊಳೈಕ್ಯಾ ಮಾಡಿ
ಸಕಲ ಲಕುಮಿ ರೂಪಗಳಲಿ ಐಕ್ಯಾ ಇಟ್ಟು
ಸಕಲ ಮರುತರ್ಗೆ ತನುಮುಖ್ಯಾ ಇತ್ತು
ಸಕಲ ಕ್ರೀಡೆಯೊಳು ಸೌಖ್ಯಾ ||ಆಹಾ||
ಲಕುಮಿಯ ಸ್ತುತಿಗೆ ಒಲಿದು ತಾನೇತ-
ನ್ನ ಕಡೆಗಣ್ಣಿಂದ ಪಂಚಜೀವರ ನೋಡಿದಾ (೩)
ಶುದ್ಧ ಸೃಷ್ಟಿಯೆಂಬುದೊಂದು ಪರಾ-
ಧೀನ ವಿಶೇಷವು ಎಂದು ಮತ್ತೆ
ಮಿಶ್ರ ಸೃಷ್ಟಿಯೆಂದು-ಒಂದು
ಕೇವಲ ಸೃಷ್ಟಿಯೆಂದೂ ||ಆಹಾ||
ಮೋದದಿಂದೆಸಗೆ ದುರ್ಗಾರೂಪವಾದ
ತಮಾಂಧಕಾರವ ಪ್ರಾಶಿಸಿದ ವಿವರಾ (೪)
ತನ್ನೊಳೈಕ್ಯವಾಗಿದ್ದ ಮಹ
ಘನ್ನ ಚತುರ ಮೂರುತಿ ತೋರ್ದ, ಇನ್ನು
ತಾನೆ ಪ್ರಕಟನಾಗಿ ನಿಂದ ಆಗ
ಉನ್ನಂತ ಚತುರ ನಾಮದಿಂದ ||ಆಹಾ||
ಜನುಮ ಸ್ಥಿತಿ ಮೃತಿ ಮೋಕ್ಷದನಾಗಿರ್ಪ
ಅನಿರುದ್ಧಾದಿ ಚತುರಮೂರ್ತಿಗಳ ವ್ಯಾಪಾರ (೫)
ಪುರುಷನಾಮಕ ಪರಮಾತ್ಮ ತಾ
ಹರುಷದಿ ಪ್ರಕೃತಿಯ ಸೂಕ್ಷ್ಮವೆಲ್ಲವ
ತರವರಿತು ಘನಮಾಡ್ದ ಮಹಿಮಾ ಸೃಷ್ಟಿ
ತರತರ ಮಾಡ್ದ ಮಾಹಾತ್ಮ ||ಆಹಾ||
ಪ್ರಾಕೃತ ವೈಕೃತ ದೇವತೆ ಸಮಾನ ಈ
ಮೂರುವಿಧ ಸೃಷ್ಟಿಯಾನೆಸಗಿದ ಪರಿಯ ನೀ (೬)
ಮಹದಹಂಕಾರ ತತ್ವ ಪಂಚ
ಮಹಭೂತಗಳು ಮನಸ್ತತ್ವ ಇನ್ನು
ಮಹದಶೇಂದ್ರಯಗಳ ತತ್ವ ಮತ್ತೆ
ಮಹತಾಮಿಶ್ರಾಂಧ ತಾಮಸ ತತ್ವ ||ಆಹಾ||
ಇಹುದು ಈ ಪರಿಯಲ್ಲಿ ಪ್ರಾಕೃತ ಸೃಷ್ಟಿಯು
ಮುಹುರ್ಮುಹು ಇದನೆ ಆಲಿಸಿ ನಿನ್ನೊಳು (೭)
ವೈಕೃತದೋಳು ಸಕಲ ವೃಕ್ಷಾ ತಿರ್ಯಕ್
ಸಕಲ ಪ್ರಾಣಿಗಳ್ ಮನುಜ ಕಕ್ಷಾ ಎಲ್ಲ
ವಿಕೃತ ಸೃಷ್ಟಿಯ ಮಾಡ್ದ ಅಧ್ಯಕ್ಷಾ ಇನ್ನು
ಸುರಸಮಾನ ಸೃಷ್ಟಿಯ ಅಪೇಕ್ಷಾ ||ಆಹಾ||
ಸಕಲ ಸುರಾಸುರ ಅಪ್ಸರ ಗಂಧರ್ವರು
ಪಿತೃಗಳು ಯಕ್ಷರಾಕ್ಷಸರ ಪರಿಯವರಾ (೮)
ಪುನ್ನಾಮ ವಿರಂಚಿ ಬ್ರಹ್ಮಾನು ಅಂದು
ಘನ್ನವಾಸುದೇವ ತಾನು ಸೃಷ್ಟಿ
ಯನ್ನ ಪ್ರಕಟಮಾಡಿದನು ಮುಂದೆ
ಅನಿಲದೇವನ ಸಂಕರುಷಣನ ||ಆಹಾ||
ಅನಿಲನೆ ಸೂತ್ರನಾಮಕವಾಯುವಾಗಿಹ
ಭಾವೀ ಬ್ರಹ್ಮನೀತನೆ ನಿತ್ಯಗುರುವೆಂದು (೯)
ಪ್ರದ್ಯುಮ್ನನಿಂದ ಸರಸ್ವತಿ ಇನ್ನು
ಶ್ರಧ್ದಾನಾಮಕಳು ಭಾರತಿ ಸೃಷ್ಟಿ-
ಯಾದ ವಿವರ ತಿಳಿಯೊ ಪೂರ್ತೀ ಇದೇ
ಪ್ರದ್ಯುಮ್ನನ ಸೃಷ್ಟಿಯ ಕೀರ್ತಿ ||ಆಹಾ||
ಶ್ರದ್ಧಾದೇವಿಯೊಳು ಸೂತ್ರನ ವೀರ್ಯದಿಂ-
ದುದ್ಭವಿಸಿದ ಜೀವ ಕಾಲನಾಮಕರನು (೧೦)
ವಿರಂಚಿ ಬ್ರಹ್ಮಗಾಯತ್ರೀರಿಂದ
ಈರ ಬ್ರಹ್ಮರ ಸೃಷ್ಟಿ ಚರಿತ್ರೆ ಚಿತ್ರ
ವರ ಮಹತ್ತತ್ವದ ಗಾತ್ರ ಇವರ
ತರವೆಲ್ಲ ವಿಚಿತ್ರ ||ಆಹಾ||
ವಿರಿಂಚಿ ಬ್ರಹ್ಮ ಸರಸ್ವತಿಯಿಂದ ವೈ-
ಕಾರಿಕ ರುದ್ರ ಶೇಷ ಗರುಡರ ನೀ (೧೧)
ಸೂತ್ರ ಶ್ರದ್ಧಾ ದೇವೇರಿಂದ ಪವಿ
ತ್ರತೈಜಸ ರುದ್ರ ಬಂದಾ ಪ-
ವಿತ್ರ ಶೇಷ ಗರುಡರೆಂದೂ ವರ
ಪುತ್ರರಾಗಿಹರತಿ ಚೆಂದಾ ||ಆಹಾ||
ಪುತ್ರನಾದ ಶೇಷ ಸಾವಿತ್ರಿ ಬ್ರಹ್ಮರಿಗೆ
ಪೌತ್ರನಾದ ತಾಮಸ ರುದ್ರ ಶೇಷಗೆ (೧೨)
ಪ್ರದ್ಯುಮ್ನ ಸೂಕ್ಷಶರೀರ ಕೊಟ್ಟು
ಉದ್ಧಾರ ಮಾಡಿದ ಜೀವರ ಅನಿ
ರುದ್ಧನ ಕೈಲಿ ಕೊಡಲವರಾ ಅನಿ
ರುಧ್ದನು ಮಾಡ್ದ ವಿಸ್ತಾರಾ ||ಆಹಾ||
ತದಪೇಕ್ಷ ಮೂಲಪ್ರಕೃತಿಯಿಂದ ಗುಣತ್ರಿ-
ವಿಧ ಕೊಂಡು ಮಹತ್ತತ್ವ ನಿರ್ಮಿಸಿದಾ (೧೩)
ಮಹತ್ತತ್ವದಿಂದಹಂಕಾರ ತತ್ವ
ಮಹದಹಂಕಾರವು ಮೂರುತರ ಇದ-
ರೊಳು ಬ್ರಹ್ಮವೈಕಾರಿಕ ಶರೀರವಾಗಿ
ಹುದು ಈ ಪರಿ ಈ ರೂಪ ವಿವರಾ ||ಆಹಾ||
ಅಹುದು ತೈಜಸದಿಂದ ಶೇಷನ ದೇಹವು
ತಾಮಸದಿಂದಲಿ ರುದ್ರ ತಾನಾದನು (೧೪)
ಎರಡನೆಯ ಸಾರಿ ಪ್ರದ್ಯುಮ್ನ ಅರ್ಧ
ನಾರೀ ರೂಪನಾಗಿ ಇನ್ನು ಎಡದಿ
ಸ್ತ್ರೀರೂಪ ಜೀವರುಗಳನ್ನು ಬಲದಿ
ಪುರುಷ ಜೀವರೆಲ್ಲರನ್ನು ||ಆಹಾ||
ಧರಿಸಿ ಅವರವರ ದೇಹಗಳನಿತ್ತು ಅ
ನಿರುದ್ಧನ ಕೈಯೊಳಿತ್ತ ಪರಿಯನ್ನು (೧೫)
ಅದರಂತೆ ಅನಿರುಧ್ದದೇವ ತಾ
ನದಕಿಂತ ಸ್ಥೂಲದೇಹವ ಮೂಲ
ಪ್ರಕೃತಿಯಿಂದ ಗುಣವಾ ಕೊಂಡು
ಅದುಭುತ ಮಹತ್ತತ್ವತೋರ್ವ ||ಆಹಾ||
ಅದುಭುತ ಮಹತ್ತತ್ವದಿಂದಹಂಕಾರ
ಉದಿಸಿದ ಪರಿಯನು ಮುದದಿಂದಲಿ ಅರಿತು (೧೬)
ಪರಮ ಕರುಣಿಯಲೀ ರುದ್ರನು ಅರ್ಧ
ನಾರೀರೂಪ ತಾಳಿ ಇನ್ನೂ ಎಡದಿ
ಸುರರ ಸ್ತ್ರೀಗಳನ್ನು ಬಲದೀ
ಸುರ ಪುರುಷರಗಳನ್ನೂ ||ಆಹಾ||
ಭರದಿ ಪುಟ್ಟಿಸಿ ಪ್ರದ್ಯುಮ್ನನ ಕೈಲಿತ್ತು
ಪರಿಪರಿ ಸೃಷ್ಟಿಯ ಕ್ರಮವರಿತು ನೀನೀಗ (೧೭)
ಅನಿರುಧ್ದ ದೇವನು ಜೀವರ ಸ್ಥೂಲ
ತನುವ ಕೊಟ್ಟು ಪಾಲಿಪ ತದಭಿ-
ಮಾನಿ ಶ್ರೀ ಭೂ ದುರ್ಗಾ ಮಾಡಿ
ತಾನೆಲ್ಲರ ಸತತ ಪೊರೆವಾ ||ಆಹಾ||
ಅನವರತ ವಾಯು ಬ್ರಹ್ಮಸತಿಯರ
ಮಹತ್ತತ್ತ್ವಾಭಿಮಾನಿಗಳೆನಿಸಿದ ದೇವನ (೧೮)
ಅಹಂಕಾರ ತತ್ತ್ವಾಭಿಮಾನಿ ಅದಕೆ
ಅಹಿಗರುಡರು ಅಭಿಮಾನಿ ಇನ್ನು
ಅನಿರುದ್ಧಾದಿ ರೂಪತ್ರಯವು ಇದಕೆ
ಇನ್ನು ನಿಯಾಮಕನು ಎನ್ನು ||ಆಹಾ||
ಮಹತ್ತತ್ವಾ ನಿಯಾಮಕ ವಾಸುದೇವನಿಂದ-
ನವರತ ಈ ಸೂಕ್ಷ್ಮಪ್ರಮೇಯ ಗ್ರಹಿಸಿ ನೀನು (೧೯)
ಮನಸ್ತತ್ವಾಭಿಮಾನಿ ಸುರರಾ ಸೃಷ್ಟಿ
ಯನ್ನೆ ವೈಕಾರಿಕದಿಂದಲವರಾ ಮಾಡಿ
ಘನ್ನ ತೈಜಸದಿಂದಲಿಂದ್ರಿಯ ತತ್ವವೆ-
ಲ್ಲನೆಸಗಿದಂಥ ವಿವರಾ ||ಆಹಾ||
ಉನ್ನಂತ ತನ್ಮಾತ್ರ ಭೂತ ಪಂಚಕಗಳ
ತಾಮಸದಿಂದಲಿ ಉದಿಸಿದ ಪರಿಯನು (೨೦)
ತತ್ವದೇವತೆಗಳನ್ನು ತಮಗೆ
ಯುಕ್ತಸ್ಥಾನಾದಿಗಳನ್ನು ಕೊಡೆ
ಉತ್ತಮೋತ್ತಮನನ್ನು ತಾವು
ಸುತ್ತಿ ಸ್ತುತಿಸಲು ಇನ್ನೂ ||ಆಹಾ||
ತತ್ವದೇವತೆಗಳ ಭಕ್ತಿಗೆ ಒಲಿದು
ತತ್ವರೆಲ್ಲರ ತೋರೆ ರೂಪದಿ ಧರಿಸಿಟ್ಟನ್ನ (೨೧)
ರಜಸುವರ್ಣಾತ್ಮಕವಾದ ಘನ
ನಿಜ ಐವತ್ತು ಕೋಟಿ ಗಾವುದ ಉಳ್ಳ
ಅಜಾಂಡವನ್ನು ತಾ ತೋರ್ದ ತನ್ನ
ನಿಜಪತ್ನಿ ಉದರದಿ ಮಾಡ್ದ ||ಆಹಾ||
ಸೃಜಿಸಿ ಬ್ರಹ್ಮಾಂಡದಿ ತತ್ವಗಳೊಡಗೂಡಿ
ನಿಜವಾಗಿ ತಾನೊಳ ಪೊಕ್ಕ ವಿರಾಟನ್ನ (೨೨)
ಪಾತಾಳಾದಿ ಸಪ್ತಲೋಕ ಕಡೆ
ಸತ್ಯಲೋಕ ಪರಿಯಂತ ರೂಪ
ತಾ ತಾಳಿದ ಆದ್ಯಂತ ಇಂತು
ನಿಂತನು ಸಚ್ಚಿದಾನಂದ ||ಆಹಾ||
ಇಂತು ವಿರಾಟ ತನ್ನಂತರದೊಳು
ತತ್ವರೆಲ್ಲರ ತತ್ತತ್ಸ್ಥಳದೊಳಿಟ್ಟು ಪೊರೆದನ್ನ (೨೩)
ಲಕುಮಿಯಾತ್ಮಕ ವಾಯುವಿನಿಂದ-ಆಗ
ಸಕಲ ಉದಕ ಶುಷ್ಕದಿಂದ ಇರಲು
ತಕ್ಕ ಮುಕ್ತಾಮುಕ್ತರ ಭೇದದಿಂದ
ತಕ್ಕ ಸ್ಥಾನವೆ ಕಲ್ಪಿಸಿದ ಚೆಂದಾ ||ಆಹಾ||
ಅಕಳಂಕ ಪುನ್ನಾಮಕನು ಧಾಮತ್ರಯ
ಮೊದಲಾದ ನರಕ ಪಂಚಕಗಳ ಮಾಡಿದ (೨೪)
ಉದಕ ಶೋಷಣೆಯನ್ನು ಮಾಡಿ ಇನ್ನುಮ-
ಹದಹಂಕಾರವ ಕೂಡಿ ಭೂತ
ಪಂಚಕವ ಮಿಳನ ಮಾಡಿ ಆಗ
ಹದಿನಾಲ್ಕೂ ದಳಾತ್ಮಕ ಪದ್ಮತೋರಿ ||ಆಹಾ||
ಅದುಭುತ ಪದುಮದಿ ಉದಿಸಿದ ಬ್ರಹ್ಮನು
ಚತುರ ನಾಲ್ಕುದಿಕ್ಕು ಮುದದಿಂದ ನೋಡಿದ (೨೫)
ಪದುಮದಲಿ ಚತುರಾಸ್ಯನಾಗಿ ಅದು
ಭುತ ಮಹಿಮೆ ನೋಡುತ ತಾನೆ
ಮುದದಿಂದ ಮೊಗತಿರುಗಿಸುತಾ ಅದ
ಅದುಭುತ ಶಬ್ದಕೇಳುತ್ತಾ ||ಆಹಾ||
ತದಪೇಕ್ಷ ತಪವನಾಚರಿಸಿ ನಾಳದಿ ಬಂದು
ಪದುಮನಾಭನ ತಾನು ಮುದದಿಂದ ನೋಡಿದ (೨೬)
ಪರಮಪುರುಷ ಉಕ್ತಿ ಲಾಲಿಸಿ ಮೆಚ್ಚಿ
ವರವ ಕೊಟ್ಟು ಪಾಲಿಸಿ ಸೃಷ್ಟಿ
ನಿರುತ ಮಾಡಲು ತಾ ಬೆಸಸೀ ತಾನು
ಅವನಂತರದೊಳು ನೆಲೆಸೀ ||ಆಹಾ||
ಹೊರಗೂ ಒಳಗೂ ನಿಂತು ಸೃಷ್ಟಿಲೀಲೆಯ
ತೋರ್ವ ಉರಗಾದ್ರಿವಾಸವಿಠ್ಠಲ ವೇಂಕಟೇಶನ್ನ (೨೭)
uragAdrivAsa viThaladAsara sRuShTi prakaraNa |
dhEnisU SrIhariya mahime nI dhEniso |pa|
dhEnisu SrIhariya lIlA, sRuShTi
mAnasadali neneyO pariyA ||AhA||
tAne tannaya lIlAjAlatanadi tanna
AnaMdadoLippa SrI mukuMda nanna ||a.pa||
mUla nArAyaNa dEva tAnu
AladeleyoLu lIlA, tOri
bAlatanadi tA nalivA, anEka
kAla paryaMtaradi sarva ||AhA||
ella jagava tanna oDaloLu aDagisi
lOlanAgi bAlakrIDeyADuvapariyA (1)
iMtu Sayanagaida hariya a-
naMta vEdagaLiMda tvariyA, durga
saMtasadiMda saMstutiya, mADe
kaMtupitanu tAneccariya ||AhA||
aMte tOrda vAsudEvAdi caturA-
naMtavatAra siri rUpagaLa sahita (2)
sakala rUpagaLa tannoLaikyA mADi
sakala lakumi rUpagaLali aikyA iTTu
sakala marutarge tanumuKyA ittu
sakala krIDeyoLu sauKyA ||AhA||
lakumiya stutige olidu tAnEta-
nna kaDegaNNiMda paMcajIvara nODidA (3)
Suddha sRuShTiyeMbudoMdu parA-
dhIna viSEShavu eMdu matte
miSra sRuShTiyeMdu-oMdu
kEvala sRuShTiyeMdU ||AhA||
mOdadiMdesage durgArUpavAda
tamAMdhakArava prASisida vivarA (4)
tannoLaikyavAgidda maha
Ganna catura mUruti tOrda, innu
tAne prakaTanAgi niMda Aga
unnaMta catura nAmadiMda ||AhA||
januma sthiti mRuti mOkShadanAgirpa
aniruddhAdi caturamUrtigaLa vyApAra (5)
puruShanAmaka paramAtma tA
haruShadi prakRutiya sUkShmavellava
taravaritu GanamADda mahimA sRuShTi
taratara mADda mAhAtma ||AhA||
prAkRuta vaikRuta dEvate samAna I
mUruvidha sRuShTiyAnesagida pariya nI (6)
mahadahaMkAra tatva paMca
mahaBUtagaLu manastatva innu
mahadaSEMdrayagaLa tatva matte
mahatAmiSrAMdha tAmasa tatva ||AhA||
ihudu I pariyalli prAkRuta sRuShTiyu
muhurmuhu idane Alisi ninnoLu (7)
vaikRutadOLu sakala vRukShA tiryak
sakala prANigaL manuja kakShA ella
vikRuta sRuShTiya mADda adhyakShA innu
surasamAna sRuShTiya apEkShA ||AhA||
sakala surAsura apsara gaMdharvaru
pitRugaLu yakSharAkShasara pariyavarA (8)
punnAma viraMci brahmAnu aMdu
GannavAsudEva tAnu sRuShTi
yanna prakaTamADidanu muMde
aniladEvana saMkaruShaNana ||AhA||
anilane sUtranAmakavAyuvAgiha
BAvI brahmanItane nityaguruveMdu (9)
pradyumnaniMda sarasvati innu
SradhdAnAmakaLu BArati sRuShTi-
yAda vivara tiLiyo pUrtI idE
pradyumnana sRuShTiya kIrti ||AhA||
SraddhAdEviyoLu sUtrana vIryadiM-
dudBavisida jIva kAlanAmakaranu (10)
viraMci brahmagAyatrIriMda
Ira brahmara sRuShTi caritre citra
vara mahattatvada gAtra ivara
taravella vicitra ||AhA||
viriMci brahma sarasvatiyiMda vai-
kArika rudra SESha garuDara nI (11)
sUtra SraddhA dEvEriMda pavi
trataijasa rudra baMdA pa-
vitra SESha garuDareMdU vara
putrarAgiharati ceMdA ||AhA||
putranAda SESha sAvitri brahmarige
poutranAda tAmasa rudra SEShage (12)
pradyumna sUkShaSarIra koTTu
uddhAra mADida jIvara ani
ruddhana kaili koDalavarA ani
rudhdanu mADda vistArA ||AhA||
tadapEkSha mUlaprakRutiyiMda guNatri-
vidha koMDu mahattatva nirmisidA (13)
mahattatvadiMdahaMkAra tatva
mahadahaMkAravu mUrutara ida-
roLu brahmavaikArika SarIravAgi
hudu I pari I rUpa vivarA ||AhA||
ahudu taijasadiMda SEShana dEhavu
tAmasadiMdali rudra tAnAdanu (14)
eraDaneya sAri pradyumna ardha
nArI rUpanAgi innu eDadi
strIrUpa jIvarugaLannu baladi
puruSha jIvarellarannu ||AhA||
dharisi avaravara dEhagaLanittu a
niruddhana kaiyoLitta pariyannu (15)
adaraMte anirudhdadEva tA
nadakiMta sthUladEhava mUla
prakRutiyiMda guNavA koMDu
aduButa mahattatvatOrva ||AhA||
aduButa mahattatvadiMdahaMkAra
udisida pariyanu mudadiMdali aritu (16)
parama karuNiyalI rudranu ardha
nArIrUpa tALi innU eDadi
surara strIgaLannu baladI
sura puruSharagaLannU ||AhA||
Baradi puTTisi pradyumnana kailittu
paripari sRuShTiya kramavaritu nInIga (17)
anirudhda dEvanu jIvara sthUla
tanuva koTTu pAlipa tadaBi-
mAni SrI BU durgA mADi
tAnellara satata porevA ||AhA||
anavarata vAyu brahmasatiyara
mahattattvABimAnigaLenisida dEvana (18)
ahaMkAra tattvABimAni adake
ahigaruDaru aBimAni innu
aniruddhAdi rUpatrayavu idake
innu niyAmakanu ennu ||AhA||
mahattatvA niyAmaka vAsudEvaniMda-
navarata I sUkShmapramEya grahisi nInu (19)
manastatvABimAni surarA sRuShTi
yanne vaikArikadiMdalavarA mADi
Ganna taijasadiMdaliMdriya tatvave-
llanesagidaMtha vivarA ||AhA||
unnaMta tanmAtra BUta paMcakagaLa
tAmasadiMdali udisida pariyanu (20)
tatvadEvategaLannu tamage
yuktasthAnAdigaLannu koDe
uttamOttamanannu tAvu
sutti stutisalu innU ||AhA||
tatvadEvategaLa Baktige olidu
tatvarellara tOre rUpadi dharisiTTanna (21)
rajasuvarNAtmakavAda Gana
nija aivattu kOTi gAvuda uLLa
ajAMDavannu tA tOrda tanna
nijapatni udaradi mADda ||AhA||
sRujisi brahmAMDadi tatvagaLoDagUDi
nijavAgi tAnoLa pokka virATanna (22)
pAtALAdi saptalOka kaDe
satyalOka pariyaMta rUpa
tA tALida AdyaMta iMtu
niMtanu saccidAnaMda ||AhA||
iMtu virATa tannaMtaradoLu
tatvarellara tattatsthaLadoLiTTu poredanna (23)
lakumiyAtmaka vAyuviniMda-Aga
sakala udaka SuShkadiMda iralu
takka muktAmuktara BEdadiMda
takka sthAnave kalpisida ceMdA ||AhA||
akaLaMka punnAmakanu dhAmatraya
modalAda naraka paMcakagaLa mADida (24)
udaka SOShaNeyannu mADi innuma-
hadahaMkArava kUDi BUta
paMcakava miLana mADi Aga
hadinAlkU daLAtmaka padmatOri ||AhA||
aduButa padumadi udisida brahmanu
catura nAlkudikku mudadiMda nODida (25)
padumadali caturAsyanAgi adu
Buta mahime nODuta tAne
mudadiMda mogatirugisutA ada
aduButa SabdakELuttA ||AhA||
tadapEkSha tapavanAcarisi nALadi baMdu
padumanABana tAnu mudadiMda nODida (26)
paramapuruSha ukti lAlisi mecci
varava koTTu pAlisi sRuShTi
niruta mADalu tA besasI tAnu
avanaMtaradoLu nelesI ||AhA||
horagU oLagU niMtu sRuShTilIleya
tOrva uragAdrivAsaviThThala vEMkaTESanna (27)
Leave a Reply