Composer : Shri Jagannatha dasaru
ಶ್ರೀ ರಾಘವೇಂದ್ರ ನಿಮ್ಮ ಚಾರು ಚರಣವ
ಸಾರಿದೆ ಶರಣ ಮಂದಾರ ಕರುಣವ || ಪ ||
ಘೋರ ವನಧಿ ತಾರಿಸು ತವಕದಿ
ಸೂರಿ ಸುಧೀಂದ್ರ ಕುಮಾರ ಉದಾರ || ಅ ||
ಮುನಿರಾಯ ನಿಮ್ಮ ಪಾದ ವನರುಹ ಧ್ಯಾನ
ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾಂಛಿತವೀವ ಗುಣ ಪೂರ್ಣ ಜ್ಞಾನ
ದನವೆ ಪಾಲಿಸೆನಗ್-ಈಕ್ಷಣ ನಿಮ್ಮಾಧೀನ
ಮನುಜನ ಪ್ರತಿದಿನ ದಿನದಿ ದಣಿಸುವದು
ಘನವೇ ಗುರುವೆ ಪಾವನತರ ಚರಿತ ||೧ ||
ಮೂಲರಾಮನ ಪಾದ ಕೀಲಾಲಜ ಮಧುಪ
ಬಾಲಕನ ಬಿನ್ನಪವ ಲಾಲಿಸೋ ಮುನಿಪ
ತಾಳಲಾರೆನೊ ತಾಪ-ತ್ರಯದ ಸಂತಾಪ
ಕೇಳೊ ವಿಮಲ ಜ್ಞಾನ ಶೀಲ ಸ್ವರೂಪ
ಭೂಲಲನಾಧವ ಕೋಲ ನಂದನ
ಕೂಲಗ ವರ ಮಂತ್ರಾಲಯ ನಿಲಯ || ೨ ||
ಕಲಿ ಕಲ್ಮಷ ವಿ-ದೂರ ಕುಜನ ಕುಠಾರ
ನಳಿನಾಕ್ಷ ವಿಮಲ ಶ್ರೀತುಲಸೀಯ ಹಾರ
ಗಳ ಸುಶೋಭಿತ, ಕಮಂ-ಡಲು ದಂಡಧರ
ಅಲವಬೊಧರ ಮತ ಜಲಧಿ ವಿಹಾರ
ಸುಲಲಿತ ಕರುಣಾಂಬುಧಿ ಜಗನ್ನಾಥ –
ವಿಠ್ಠಲನ ಒಲುಮೆಯ ಪಡೆದಿಳೆಯೊಳು ಮೆರೆವ || ೩ ||
SrI rAGavEMdra nimma cAru caraNava
sAride SaraNa maMdAra karuNava || pa ||
GOra vanadhi tArisu tavakadi
sUri sudhIMdra kumAra udAra || a ||
munirAya nimma pAda vanaruha dhyAna
praNava sustavana arcane mALpa nAnA
janara vAMCitavIva guNa pUrNa j~jAna
danave pAlisenag-IkShaNa nimmaadheena
manujana pratidina dinadi daNisuvadu
GanavE guruve pAvanatara carita ||1 ||
mUlarAmana pAda kIlAlaja madhupa
bAlakana binnapava lAlisO munipa
tALalAreno tApa-trayada saMtApa
kELo vimala j~jAna SIla svarUpa
BUlalanAdhava kOla naMdana
kUlaga vara maMtrAlaya nilaya || 2 ||
kali kalmaSha vi-dUra kujana kuThAra
naLinAkSha vimala SrItulasIya hAra
gaLa suSOBita, kamaM-Dalu daMDadhara
alavabodhara mata jaladhi vihAra
sulalita karuNAMbudhi jagannAtha –
viThThalana olumeya paDediLeyoLu mereva || 3 ||
Leave a Reply