Composer : Shri Jagannatha dasaru
ರಾಗ – ರಾಗಮಾಲಿಕೆ
ರಾಗ – ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ)
ರಾಘವೇಂದ್ರಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ
ಮಾಗಧರಿಪುಮತ ಸಾಗರಮೀನ ಮಹಾಘ ವಿನಾಶನ ನಮೋ ನಮೋ ||ಪ||
ಶ್ಲಾಘಿತ ಗುಣ ಗಣ ಸೂರಿ ಪ್ರಸಂಗ ಸದಾಗಮಜ್ಞ ತೇ ನಮೋ ನಮೋ
ಮೇಘ ಶ್ಯಾಮಲ ರಾಮಾ ರಾಧಕ ಮೋಘ ಬೊಧ ತೇ ನಮೋ ನಮೋ || ೧ ||
ತುಂಗಭದ್ರ ಸುತರಂಗಿಣಿ ತೀರಗ ಮಂಗಳ ಚರಿತ ಶುಭಾಂಗ ನಮೋ
ಇಂಗಿತಜ್ಞ ಕಾಳಿಂಗ ಮರ್ದನ ಯದುಪುಂಗವ ಹೃದಯ ಸುರಂಗ ನಮೋ
ಸಂಗಿರಚಿಹ್ನಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ
ಗಾಂಗೇಯ ಸಮಭಾಂಗ ಕುಮತ ಮಾತಂಗ ಸಂಘ ಶಿತಪಿಂಗ ನಮೋ || ೨ ||
ಕೋವಿದ ಮಸ್ತಕ ಶೋಭಿತಮಣಿ ಸಂಭಾವಿತ ಮಹಿಮ ಪಾಲಯ ಮಾಂ
ಸೇವಿ(/ವಾ?)ಪರ ಸರ್ವಾರ್ಥಪ್ರದ ಬೃಂದಾವನ ಮಂದಿರ ಪಾಲಯ ಮಾಂ
ಭಾವಜ ಮಾರ್ಗಣ ಭುಜಗ ವಿನಾಯಕ ಭಾವಜ್ಞಪ್ರಿಯ ಪಾಲಯ ಮಾಂ
ಕೇವಲ ನುತಜನ ಪಾವನರೂಪ ಸದಾವಿನೋದಿ ಹೇ ಪಾಲಯ ಮಾಂ || ೩ ||
ಶ್ರೀ ಸುಧೀಂದ್ರ ಕರಜಾತ ನಮೋ ನಮೋ ಭೂಸುರನುತ ವಿಖ್ಯಾತ ನಮೋ
ದೇಶಿಕ ವರ ಸಂಸೇವ್ಯ ನಮೋ ನಮೋ ದೋಷ ವಿವರ್ಜಿತ ಕಾವ್ಯ ನಮೋ
ಕ್ಲೇಶಿತ ಜನಪರಿಪಾಲ ನಮೋ ನಮೋ ಭೂಕರುಣಾಶೀಲ ನಮೋ
ವ್ಯಾಸರಾಯ ಪದಭಕ್ತ ನಮೋ ನಮೋ ಶಾಶ್ವತ ಧರ್ಮಾಸಕ್ತ ನಮೋ || ೪ ||
ಸನ್ನುತ ಮಹಿಮ ಜಗನ್ನಾಥವಿಠ್ಠಲ ಸಹ್ನಿತ ಮಾನಸ ಜಯ ಜಯ ಭೋ
ಚಿಹ್ನಿತ ದಂಡ ಕಮಂಡಲ ಪುಂಡ್ರ ಪ್ರಸನ್ನ ಭಯಾಪಹ ಜಯ ಜಯ ಭೋ
ಮಾನ್ಯ ಮಹಾತ್ಮ ಪ್ರಸನ್ನ ವದನ ಕಾರುಣ್ಯ ಪಯೋನಿಧಿ ಜಯ ಜಯ ಭೋ
ಧನ್ಯ ಕ್ಷಮಾಸಂಪನ್ನ ಧರಾಮರ ಶರಣ್ಯ ಸದಾರ್ಚಿತ ಜಯ ಜಯ ಭೋ || ೫ ||
rAga – rAgamAlike
rAga – dhanyAsi (bilAval) AditALa( kaharavA)
rAGavEMdrayati sArvaBauma duritauGa dUra tE namO namO
mAgadharipumata sAgaramIna mahAGa vinASana namO namO ||pa||
SlAGita guNa gaNa sUri prasaMga sadAgamaj~ja tE namO namO
mEGa SyAmala rAmA rAdhaka mOGa bodha tE namO namO || 1 ||
tuMgaBadra sutaraMgiNi tIraga maMgaLa carita SuBAMga namO
iMgitaj~ja kALiMga mardana yadupuMgava hRudaya suraMga namO
saMgiracihnita SRuMgArAnana tiMgaLa karuNApAMga namO
gAMgEya samaBAMga kumata mAtaMga saMGa SitapiMga namO || 2 ||
kOvida mastaka SOBitamaNi saMBAvita mahima pAlaya mAM
sEvi(/vA?)para sarvArthaprada bRuMdAvana maMdira pAlaya mAM
BAvaja mArgaNa Bujaga vinAyaka BAvaj~japriya pAlaya mAM
kEvala nutajana pAvanarUpa sadAvinOdi hE pAlaya mAM || 3 ||
SrI sudhIMdra karajAta namO namO BUsuranuta viKyAta namO
dESika vara saMsEvya namO namO dOSha vivarjita kAvya namO
klESita janaparipAla namO namO BUkaruNASIla namO
vyAsarAya padaBakta namO namO SASvata dharmAsakta namO || 4 ||
sannuta mahima jagannAthaviThThala sahnita mAnasa jaya jaya BO
cihnita daMDa kamaMDala puMDra prasanna BayApaha jaya jaya BO
mAnya mahAtma prasanna vadana kAruNya payOnidhi jaya jaya BO
dhanya kShamAsaMpanna dharAmara SaraNya sadArcita jaya jaya BO || 5 ||
Leave a Reply