Raghavendra Gururaya bagi

Composer : Shri Shyamasundara dasaru

By Smt.Shubhalakshmi Rao

ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಬೇಗ
ಕೈಯ್ಯ ಪಿಡಿದು ಪಾಲಿಸಯ್ಯ | ಭಾಗವತ ಜನಪ್ರಿಯ [ಪ]

ಮಧ್ವಮತ ಪಾರಾವಾರ | ಶುದ್ಧಪೂರ್ಣ ಸುಧಾಕರ
ಅದ್ವೈತಾದ್ರಿ ಶತಧರ | ಉದ್ಧರಿಸೈ ಯೋಗೀಶ್ವರ (೧)

ಭಾಸುರ ಶ್ರೀಮಂತ್ರಾಗಾರ | ವಾಸ ಸುಕಾರಷಾಂಬರ
ಭೂಷ ಭೂಸುರ ಪರಿವಾರ ಪೋಷ ಪ್ರಹ್ಲಾದವತಾರ (೨)

ತುಂಗಾಭದ್ರಾ ಸುತೀರದಿ | ಶೃಂಗಾರ ಸದ್ವೃಂದಾವನದಿ
ಪಿಂಗಳ ಸನ್ನಿಭಾಂಗದಿ | ಕಂಗೊಳಿಸಿದ ದಯಾಂಬುಧಿ (೩)

ಮರುಥಾವೇಶ ಯಮಿವರಿಯಾ | ದುರಿತಾಹಿ ವೈನತೇಯ |
ಪರಮೋದಾರ ಪರಿಮಳಾರ್ಯ | ತರಳನೆಂದು ಕರುಣಿಸಯ್ಯ (೪)

ಶಾಮಸುಂದರ ಭಕ್ತಾಗ್ರಣಿ | ಭೂಮಿಯೊಳು ನಿನಗಾರಣೆ |
ಕಾಮಿತಾರ್ಥ ಚಿಂತಾಮಣಿ | ಸ್ವಾಮಿ ಶ್ರೀ ವ್ಯಾಸ ಸನ್ಮೌನಿ (೫)


rAGavEMdra gururAya bAgi namisuve bEga
kaiyya piDidu pAlisayya | BAgavata janapriya [pa]

madhvamata pArAvAra | SuddhapUrNa sudhAkara
advaitAdri Satadhara | uddharisai yOgISvara (1)

BAsura SrImaMtrAgAra | vAsa sukAraShAMbara
BUSha BUsura parivAra pOSha prahlAdavatAra (2)

tuMgABadrA sutIradi | SRuMgAra sadvRuMdAvanadi
piMgaLa sanniBAMgadi | kaMgoLisida dayAMbudhi (3)

maruthAvESa yamivariyA | duritAhi vainatEya |
paramOdAra parimaLArya | taraLaneMdu karuNisayya (4)

SAmasuMdara BaktAgraNi | BUmiyoLu ninagAraNe |
kAmitArtha ciMtAmaNi | svAmi SrI vyAsa sanmauni (5)

Leave a Reply

Your email address will not be published. Required fields are marked *

You might also like

error: Content is protected !!