Raghavendra Guru Rayaranghri

Composer : Shri Shrisha vittala

By Smt.Nandini Sripad,Blore..

ಶ್ರೀ ಹುಂಡೆಕಾರ ದಾಸರಾಯರ ರಚನೆ (ಶ್ರೀಶವಿಠಲ ಅಂಕಿತ)

ರಾಘವೇಂದ್ರ ಗುರುರಾಯರಂಘ್ರಿ
ಕಮಲಾರಾಧಿಸಿರೋ ವಿಮಲಾ || ಪ ||

ಯತಿವರ ಶ್ರೀಸುಧೀಂದ್ರ ಕರಜಾತಾ |
ಕ್ಷಿತಿ ಸುರಯತಿ ಈತ |
ಸ್ತುತಿಪರಘ ನಿಮಿಷದೊಳು ನಿವಾರಿಸುವಾ |
ಸುಖವನು ತೋರಿಸುವ |
ಶ್ರುತಿಸ್ಮೃತಿ ತತಿ ಸಮ್ಮತವಾಗಿ ಗ್ರಂಥ |
ರಚಿಸಿದ ಧೀಮಂತ || ೧ ||

ಮಧ್ವ ಸುಮತ ದುಗ್ದಾಬ್ಧಿಗೆ ಉಡುರಾಜಾ |
ತರಣಿ ಸಮತೇಜಾ |
ಅದ್ವೈತ ಘೋರಾರಣ್ಯಕೆ ದಾವಾ |
ಸಜ್ಜನರ ಕಾವಾ |
ಸದ್ವೈಷ್ಣವರಿಗೆ ಸತತ ಸುಧಾಕರವಾ |
ಕರವಿಡಿದು ಮೆರೆವಾ |
ಉದ್ಯದ್ಭವಿ ಸಮ ಬುದ್ಧಿ ಶಾಲ್ಯನೀತಾ |
ಜಗದೊಳಗೆ ಪ್ರಖ್ಯಾತಾ || ೨ ||

ವರಹಜ ತೀರದಿ ಸ್ಥಿರದಲ್ಲಿ ನಿಂದು |
ಕರದಲ್ಲಿಗೆ ಬಂದು |
ಸ್ಮರಿಸುವ ಜನರಿಗೆ ಸುಖಕರನೀತಾ |
ಮಿಥ್ಯಲ್ಲವು ಸತ್ಯಾ |
ಕುರುಡ ಕಿವುಡ ಮೂಕರ ಮನದಭೀಷ್ಟಾ |
ಕೊಡುವಲಿ ಬಹು ಶ್ರೇಷ್ಠ |
ಧೊರೆ ಶ್ರೀಶವಿಟ್ಠಲನ ಶರಣಾಗ್ರಜನೀತ |
ಸುಫಲ ಪ್ರದಾತಾ || ೩ ||


SrI huMDekAra dAsarAyara racane
(SrISaviThala aMkita) , rAga: jaMjUTi , AditALa

rAGavEMdra gururAyaraMGri
kamalArAdhisirO vimalA || pa ||

yativara SrIsudhIMdra karajAtA |
kShiti surayati Ita |
stutiparaGa nimiShadoLu nivArisuvA |
suKavanu tOrisuva |
SrutismRuti tati sammatavAgi graMtha |
racisida dhImaMta || 1 ||

madhva sumata dugdAbdhige uDurAjA |
taraNi samatEjA |
advaita GOrAraNyake dAvA |
sajjanara kAvA |
sadvaiShNavarige satata sudhAkaravA |
karaviDidu merevA |
udyadBavi sama buddhi SAlyanItA |
jagadoLage praKyAtA || 2 ||

varahaja tIradi sthiradalli niMdu |
karadallige baMdu |
smarisuva janarige suKakaranItA |
mithyallavu satyA |
kuruDa kivuDa mUkara manadaBIShTA |
koDuvali bahu SrEShTha |
dhore SrISaviTThalana SaraNAgrajanIta |
suPala pradAtA || 3 ||

Leave a Reply

Your email address will not be published. Required fields are marked *

You might also like

error: Content is protected !!