Padakava Kandu

Composer : Shri Janardana vittala

By Smt.Nandini Sripad , Blore..

ಪಾದಕವ ಕಂಡು ಪಾವನನಾದೆನೋ || ಪ ||

ವೇದಾರ್ಥ ತಿಳಿದ ಗುರು ರಾಘವೇಂದ್ರರು ಮೆಟ್ಟ || ಅ.ಪ ||

ಮನೋಭಾವವನು ಕೊಡುವ ಘನ ಭಕುತರಿಗೆ ಇಂದು |
ದನುಜ ದಲ್ಲಣನಂಘ್ರಿ ಮನದಿ ಭಜಿಸಿ ||
ಕನಸಿನಲಿ ಕನಕರಿಸೆ ವನಜನಾಭನ ಪದವ |
ವಿನಯದಿಂದಲಿ ತೋರಿ ಮನ ಮೋದ ಬಡಿಸುವರ || ೧ ||

ಸೀತಾರಾಮನ ಪೂಜೆ ಆತುರದಲಿ ಮಾಡಿ |
ನೀತ ಮಾರ್ಗದಿ ಜಾತ ರಹಿತನಾದ ||
ಆತುರವ ಪರಿಹರಿಸಿ ಶ್ಯಾತಕುಂಭದಂತೆ |
ಆತುಮವ ಮಾಡುವ ಅನಿಮಿತ್ತ ಬಂಧುವಿನ || ೨ ||

ಗುರು ಸುಧೀಂದ್ರರ ವರ ಕುಮಾರಕರಾದ |
ಪರಲೋಕ ಸುಖ ಕೊಡುವ ಪರಮ ಕರುಣೀ ||
ಧರೆಯೊಳಗೆ ಸರಿಗಾಣೆ ಜನಾರ್ದನವಿಠಲನ್ನ |
ಸ್ಥಿರವಾಗಿ ಭಜಿಸುವ ಗುರು ಶಿಖಾಮಣಿಯ ದ್ವಯ || ೩ ||


pAdakava kaMDu pAvananAdenO || pa ||

vEdArtha tiLida guru rAGavEMdraru meTTa || a.pa ||

manOBAvavanu koDuva Gana Bakutarige iMdu |
danuja dallaNanaMGri manadi Bajisi ||
kanasinali kanakarise vanajanABana padava |
vinayadiMdali tOri mana mOda baDisuvara || 1 ||

sItArAmana pUje Aturadali mADi |
nIta mArgadi jAta rahitanAda ||
Aturava pariharisi SyAtakuMBadaMte |
Atumava mADuva animitta baMdhuvina || 2 ||

guru sudhIMdrara vara kumArakarAda |
paralOka suKa koDuva parama karuNI ||
dhareyoLage sarigANe janArdanaviThalanna |
sthiravAgi Bajisuva guru SiKAmaNiya dvaya || 3 ||

Leave a Reply

Your email address will not be published. Required fields are marked *

You might also like

error: Content is protected !!