Nodide Gurugala

Composer : Shri Vijayadasaru

By Smt.Nandini Sripad , Blore.

ನೋಡಿದೇ ಗುರುಗಳ ನೋಡಿದೇ || ಪ ||
ನೋಡಿದೆನು ಗುರು ರಾಘವೇಂದ್ರರ |
ಮಾಡಿದೆನು ಭಕುತಿಯಲಿ ವಂದನೆ |
ಬೇಡಿದೆನೊ ಕೊಂಡಾಡಿ ವರಗಳ |
ಈಡು ಇಲ್ಲದ ಮೆರೆವ ಮಹಿಮೆಯ || ಅ ಪ ||

ಮೊದಲು ಗಾಂಗೆಯ ಶಯ್ಯಜನು ಈ |
ನದಿಯ ತೀರದಿ ಇಲ್ಲಿ ಯಾಗವ |
ಮುದದಿ ರಚಿಸಿ ಪೂರೈಸಿ ಪೋಗಿರ |
ಲದನೆ ತನ್ನೊಳಗರಿತು ತವಕದಿ ||
ಹೃದಯ ನಿರ್ಮಲರಾಗಿ ರಾಗದಿ |
ಬುಧಜನರ ಸಮ್ಯಾಳದಲಿ ಸಿರಿ |
ಸದನನಂಘ್ರಿಗಳ ನೆನೆದು ಕಳೆವರ |
ಉದಿತ ಭಾಸ್ಕರನಂತೆ ಇಪ್ಪದು || ೧ ||

ಅಲವಬೋಧ ಮಿಕ್ಕಾದ ಮಹಮುನಿ – |
ಗಳು ಸಾಂಶರು ಒಂದೊಂದು ರೂಪದಿ |
ನೆಲೆಯಾಗಿ ನಿತ್ಯದಲಿ ಇಪ್ಪರು |
ವೊಲಿಸಿಕೊಳುತಲಿ ಹರಿಯ ಗುಣಗಳ ||
ತಿಳಿಸಿ ತಿಳಿವರು ತಮತಮಗಿಂದಧಿಕ |
ರಲಿ ಉಪದೇಶ ಮಾರ್ಗದಿ |
ಕಲಿಯುಗದೊಳಗಿದೇ ಕೇವಲ ಕ – |
ತ್ತಲೆಯ ಪರಿಸುವ ಸೊಬಗು ಸಂತತಾ || ೨ ||

ರಾಮನರಹರಿ ಕೃಷ್ಣ ಕೃಷ್ಣರ |
ನೇಮದಿಂದೀ ಮೂರ್ತಿಗಳ ಪದ |
ತಾಮರಸ ಭಜನೆಯನು ಮಾಡುವ |
ಕೋಮಲಾಂಗನು ಕಠಿಣ ಪರವಾದಿ ||
ಸ್ತೋಮಗಳ ಮಹಮಸ್ತಕಾದ್ರಿಗೆ |
ಭೂಮಿಯೊಳು ಪವಿಯೆನಿಸಿದ ಯತಿ |
ಯಾಮ ಯಾಮಕೆ ಎಲ್ಲರಿಗೆ ಶುಭ |
ಕಾಮಿತಾರ್ಥವ ಕರೆವನಂದವ || ೩ ||

ನೂರು ಪರ್ವತ ವರುಷ ಬಿಡದಲೆ |
ಚಾರು ವೃಂದಾವನದಲಿ ವಿ – |
ಸ್ತಾರ ಆರಾಧನೆಯು ತೊಲಗದೆ |
ವಾರವಾರಕೆ ಆಗುತಿಪ್ಪದು ||
ಸಾರೆ ಕಾರುಣ್ಯದಲಿ ಲಕುಮಿ |
ನಾರಾಯಣ ತಾ ಚಕ್ರ ರೂಪದಿ |
ಸಾರಿದವರಘ ಕಳೆದು ಇವರಿಗೆ |
ಕೀರುತಿಯ ತಂದಿತ್ತದನುದಿನ || ೪ ||

ಮಿತವೆ ಎನದಿರಿ ಇಲ್ಲಿ ದಿನದಿನ – |
ಕತಿಶಯವೆ ಆಗುವದು ಭೂಸೂರ |
ತತಿಗೆ ಭೋಜನ ಕಥಾ ಶ್ರವಣ ಭಾ – |
ರತ ಪುರಾಣಗಳಿಂದಲೊಪ್ಪುತ ||
ಕ್ಷಿತಿಯೊಳಗೆ ಮಂತ್ರಾಲಯ ಗ್ರಾಮಕೆ |
ಪ್ರತಿಯಿಲ್ಲವೆಂದೆನಿಸಿಕೊಂಬದು |
ಪತಿತಪಾವನ ವಿಜಯವಿಠಲನ |
ತುತಿಸಿಕೊಳುತಲಿ ಮೆರೆವ ಮುನಿಗಳ || ೫ ||


nODidE gurugaLa nODidE || pa ||
nODidenu guru rAGavEMdrara |
mADidenu Bakutiyali vaMdane |
bEDideno koMDADi varagaLa |
IDu illada mereva mahimeya || a pa ||

modalu gAMgeya Sayyajanu I |
nadiya tIradi illi yAgava |
mudadi racisi pUraisi pOgira |
ladane tannoLagaritu tavakadi ||
hRudaya nirmalarAgi rAgadi |
budhajanara samyALadali siri |
sadananaMGrigaLa nenedu kaLevara |
udita BAskaranaMte ippadu || 1 ||

alavabOdha mikkAda mahamuni – |
gaLu sAMSaru oMdoMdu rUpadi |
neleyAgi nityadali ipparu |
volisikoLutali hariya guNagaLa ||
tiLisi tiLivaru tamatamagiMdadhika |
rali upadESa mArgadi |
kaliyugadoLagidE kEvala ka – |
ttaleya parisuva sobagu saMtatA || 2 ||

rAmanarahari kRuShNa kRuShNara |
nEmadiMdI mUrtigaLa pada |
tAmarasa Bajaneyanu mADuva |
kOmalAMganu kaThiNa paravAdi ||
stOmagaLa mahamastakAdrige |
BUmiyoLu paviyenisida yati |
yAma yAmake ellarige SuBa |
kAmitArthava karevanaMdava || 3 ||

nUru parvata varuSha biDadale |
cAru vRuMdAvanadali vi – |
stAra ArAdhaneyu tolagade |
vAravArake Agutippadu ||
sAre kAruNyadali lakumi |
nArAyaNa tA cakra rUpadi |
sAridavaraGa kaLedu ivarige |
kIrutiya taMdittadanudina || 4 ||

mitave enadiri illi dinadina – |
katiSayave Aguvadu BUsUra |
tatige BOjana kathA SravaNa BA – |
rata purANagaLiMdalopputa ||
kShitiyoLage maMtrAlaya grAmake |
pratiyillaveMdenisikoMbadu |
patitapAvana vijayaviThalana |
tutisikoLutali mereva munigaLa || 5 ||

Leave a Reply

Your email address will not be published. Required fields are marked *

You might also like

error: Content is protected !!