Munijanara nenisi

Composer : Shri Vijaya dasaru

By Smt.Nandini Sripad , Blore..

ಶ್ರೀ ವಿಜಯದಾಸರ ಕೃತಿ.
ರಾಗ : ಉದಯರಾಗ

ಮುನಿಜನರ ನೆನಿಸಿ ಜನರೂ || ಪ ||

ಮುನಿಜನರ ನೆನಿಸಿ ಬಿಡದನುದಿನದಲಿ ನಿಮ್ಮ |
ಮನ ಮಲಿನ ಪೋಗಿ ಸಜ್ಜನ ಸಂಗವಾಗುವದು |
ಅನುಮಾನವಿಲ್ಲ ಗುಣಗಣ ವನಧಿ ಹರಿ ವೊಲಿದು |
ಘನವಾಗಿ ಪಾಲಿಸುವನು || ಅ .ಪ ||

ಮಿತ್ರ ಮಿತ್ರಾಯು ವಿಚಿತ್ರ ಭಾರ್ಗವ ವಿಶ್ವಾ |
ಮಿತ್ರ ಮೈತ್ರಾ ಮೈತ್ರ ವಾರುಣಿ ಭೃಗು ವೀತಿ |
ಹೋತ್ರ ಕಪಿ ಗಾರ್ಗ್ಯ ಗಾಲವ ಗರ್ಗ ಗಾರ್ಚಮಾ |
ಅತ್ರಿ ಅತಿ ಅಷ್ಟವಕ್ರ ||
ಪತ್ರ ಫಲಾಶ ವಟು ಶ್ಯಾಂಡಿಲ್ಯ ಶಕಟ ಸು – |
ನೇತ್ರ ಸುಮಾಂಗಲ್ಯ ಸಂಕೃತಿ ಭಾರದ್ವಾಜ |
ಗೋತ್ರ ಗೌರಿವೀತ ಹವ್ಯ ಕಪಿ ಶಂಖ ಕಟ |
ಮೈತ್ರಾವರುಣ ವಾಧುಳಾ || ೧ ||

ಉಪಮನ್ಯು ಶಂಕು ಉದ್ದಾಲಕಾ ಕೌಂಡಿಣ್ಯ |
ಅಪುನವಾನ ಅತಿಥಿ ಪಾಂತು ಚಾವನ ಚವನ |
ಉಪಮಿಥ್ಯ ಕಪಿಲ ಕಾಶ್ಯಪ ಕಾಣ್ವ ಹರಿತ ಕ – |
ಶ್ಯಪ ಪೂತಿಮಾಷ ರೈಭಾ ||
ವಿಪುಳ ಜಮದಗ್ನಿ ವಾಲ್ಮೀಕಿ ರೇಭ ಜಾಬಾಲಿ |
ಸ್ವಪನ ಸಾತ್ಯಕಿಯು ಸಾಮ್ಯಾಳ ದೇವರತತಿ |
ತಪ ದೈವಲ ಸಿತ ಗೌತುಮ ಭದ್ರ ಸ್ವಾತಂತ್ರ |
ಕಪಿ ಕುತ್ಸ್ನ ಪೌರ ಕುತ್ಸಾ || ೨ ||

ಮುನಿ ಮಾದ್ರ ಮಶಣ ಶರ್ಮ ಬಾದರಾಯಣ |
ಕನಕ ಕಾತ್ಯಾಯನ ಮಾರ್ಕಾಂಡ್ಯ ಮಾಂಡವ್ಯ |
ಶುನಕ ಶೌನಕ ರೋಮಹರ್ಷಣ ಸೌಭರಿ |
ತೃಣಬಿಂದು ಬಾಷ್ಕಾಳಾಖ್ಯಾ ||
ಪನಸ ಅಘಮರ್ಷಣ ಪ್ರಮಥ ಪ್ರಾಗಾಧ ಜೀ – |
ವನ ಯಾಜ್ಞವಲ್ಕ್ಯ ಜೀವಂತಿ ಮಾತಂಗ ಶೋ – |
ಭನ ಸಕಕೃತಿ ಭಾರ್ಗವ ಸುರವತ್ಸ ಚಂ – |
ದನ ಧೌಮ್ಯ ಆರ್ಯ ರುಚಿರಾ || ೩ ||

ವಾಸಿಷ್ಠ ಶ್ರೀವತ್ಸ ಲೋಹಿತಾಷ್ಟಕ ಶರ್ಮ |
ವಾಸುಳೆ ಋಷಿ ಶರಣ ಕರ್ದಮ ಮರೀಚಿ ಪಾ -|
ರಾಶರ ಪಲ್ಲಾದ್ರಿಧರ ಶಕ್ತಿ ವೈರೋಹಿತ್ಯ |
ಭೇಷಿಜಾ ವಾಯು ಲಿಕಿಯೂ ||
ಭೂಷಣಾ ಬಾರ್ಹಸ್ಪತ್ಯ ದಾಲ್ಭ್ಯ ಸುಯಜ್ಞಾಜ್ಞಿ |
ವೇಶ್ಯಮುಖ ಸಪರಿಧಿ ಸಾಲಂಕಾಯನಾ ಧರ್ಮ |
ದೈಸಿಕಾ ದೇವರಾತ ವತ್ಸರಾ ಔರ್ವ ನಾ – |
ನಾಶಯ ದೇವಶ್ರವತಾ || ೪ ||

ಗಿವಿಷ್ಠರಾ ವಾಮ ವಾಮರಿತ್ಯ ಕಾಲುಗ್ರ |
ಶ್ರವ ಪೂರ್ಣವಾಹಕ ಕೃತು ಅಂಗಿರಸಾಂಗಿರಾ |
ಪವನ ಪ್ರಾಚಿನಾ ಯಜ್ಞಾರಿಷ್ಟ ಶಠನಾ ಪಾ – |
ಲವ ಶಮನ ಋಷಿಶೃಂಗ ||
ಕವಿ ವೇದಶಾಲ ವಿಶಾಲ ಕೌಸಿಕ ಶುಚಿ |
ಭುವನ ಊರ್ಜಯನ ಮಹಾ‌ಋಷಿ ಬಹುಧ ಸಂ – |
ಭವಸ್ತಂಭ ಕಿರಾರಿ ಕಪಿಸೇನ ಶಾಂಡಿಲ್ಯ |
ಪವನದಮ ಬೀಜವಾಪಿ || ೫ ||

ಉಲಿಖಲ್ಲು ಧನಂಜಯ ವಾಲಿಖಿಲ್ಲ್ಯಾ ಮಾಯ |
ಕಲಿಕಿ ಶೃಂಗಿ ಮಧು ಚಂದವಿತನು ಬಹು |
ಬಲ ಧೂಮ್ರ ಜಠರ ಊರ್ವಾಸ ಐಕ್ಯಾಯನ |
ತಿಲುಕ ವಿಭಾಂಡ ಶರಭಾ ||
ಪುಲಸ್ತ್ಯ ದಧೀಚಿ ಕಥಾಸೂನು ಸೇವಾಸ್ಯ ಮೌ – |
ದ್ಗಲ ವಿಷ್ಣು ತ್ರಿಧಕುಕ್ಷಿ ಕುಕ್ಷಮ ನಂತತ್ತು |
ಪುಲಹ ಹವಿಧಾನ ಉತ್ತಂಕ ಉತ್ತುಮ ಕಚರ |
ಬಲವೀರ್ಯ ಬಬ್ರಮನು || ೬ ||

ಸುತಪ ಅಪವರ್ಗ ಹಿರಣ್ಯನಾಭಾ ಅ – |
ದ್ಭುತ ಅಜಾಮಿಢಾ ಪರ್ವತ ಶ್ವೇತಕೇತ ಮಹ |
ಧೃತಿ ಶಕ್ತಿ ವೈಶಂಪಾಯನ ಪೈಲ ಜಯ |
ಸತ್ಯವೃತ ಶೃತಿ ಧೃತಿ ಆಯಕಾ ||
ಶೃತಿಕೀರ್ತಿ ಸುಪ್ರಭಾ ವತ್ಸ ಮೃಕಾಂಡ ಸು – |
ಮತಿ ಕ್ರೋಢ ಕೊಲ ಗೋಬಲಾ ಮಾತೃಕಾನಂದ |
ದ್ಯುತಿ ತಪ ವಿದ್ವಾಹ ದರ್ಭಾ ಜಾನ್ಹವ ಸೀಲ |
ಕಥನ ಸರ್ವಸ್ಥಂಬವಾ || ೭ ||

ನೈಧ್ರುವಾ ದೀರ್ಘತಮ ಜಮದಗ್ನಿ ಕಾರುಣಿ |
ಸದ್ಮುನಿ ಕಾಂಡಮಣಿ ಮಾಂಡವ್ಯ ವಾಚಸಕ |
ಶುದ್ಧ ಸಂವರ್ತ ಸಂತತ ಕಾಮ ಸಂಹತಿ |
ಸಿದ್ಧಿ ಸನಕ ಸನಂದನಾ ||
ವಿದ್ಯಾಂಗ ಹವ್ಯ ರೋಹಿತ ಶರ್ಮ ಸೂಕರ್ಮ |
ವುದ್ಧಾಳ ವುಚಿಥ್ಯ ಹರಿಮೇಧ ಮೇಧ ಪ್ರ – |
ಸಿದ್ಧ ಮಯೂರ ಶುಕ ಕಪಿಲ ಕಾಪಿಲ್ಯ ಗುಣ |
ಬುದ್ಧಿ ಸುಮೇಧ ಪೇರ್ಮಿ || ೮ ||

ಪಂಚ ಪಂಚಾಸಪ್ತ ಅಷ್ಟ ಕಾಲದಲಿ ಪ್ರಾ – |
ಪಂಚದೊಳು ತೊಡಕದಲೆ ಬುದ್ಧಿ ಚಿತ್ತದೊಳಿಟ್ಟು |
ಅಂಚಿಗಂಚಿಗೆ ಬಹು ಮುನಿಗಳೊಳಗಿದ್ದವರ |
ಕೊಂಚ ಮುನಿಗಳ ಪೇಳಿದೆ ||
ವಂಚನೆಯಿಲ್ಲದೆ ಸ್ಮರಿಸಿ ಮಧ್ವಮತ ಪೊಂದಿ |
ಸಂಚಿತಾಗಮ ಕಳೆವ ಸರ್ವಸುಖವೀವ ವಿ – |
ರಂಚಿಪಿತ ವಿಜಯವಿಠ್ಠಲರೇಯ ಇಂದು ರವಿ |
ಮಿಂಚಿನಂದದಿ ಪೊಳೆವನೂ || ೯ ||


SrI vijayadAsara kRuti.
rAga : udayarAga

munijanara nenisi janarU || pa ||

munijanara nenisi biDadanudinadali nimma |
mana malina pOgi sajjana saMgavAguvadu |
anumAnavilla guNagaNa vanadhi hari volidu |
GanavAgi pAlisuvanu || a .pa ||

mitra mitrAyu vicitra BArgava viSvA |
mitra maitrA maitra vAruNi BRugu vIti |
hOtra kapi gArgya gAlava garga gArcamA |
atri ati aShTavakra ||
patra PalASa vaTu SyAMDilya SakaTa su – |
nEtra sumAMgalya saMkRuti BAradvAja |
gOtra gaurivIta havya kapi SaMKa kaTa |
maitrAvaruNa vAdhuLA || 1 ||

upamanyu SaMku uddAlakA kauMDiNya |
apunavAna atithi pAMtu cAvana cavana |
upamithya kapila kASyapa kANva harita ka – |
Syapa pUtimASha raiBA ||
vipuLa jamadagni vAlmIki rEBa jAbAli |
svapana sAtyakiyu sAmyALa dEvaratati |
tapa daivala sita gautuma Badra svAtaMtra |
kapi kutsna paura kutsA || 2 ||

muni mAdra maSaNa Sarma bAdarAyaNa |
kanaka kAtyAyana mArkAMDya mAMDavya |
Sunaka Saunaka rOmaharShaNa sauBari |
tRuNabiMdu bAShkALAKyA ||
panasa aGamarShaNa pramatha prAgAdha jI – |
vana yAj~javalkya jIvaMti mAtaMga SO – |
Bana sakakRuti BArgava suravatsa caM – |
dana dhaumya Arya rucirA || 3 ||

vAsiShTha SrIvatsa lOhitAShTaka Sarma |
vAsuLe RuShi SaraNa kardama marIci pA -|
rASara pallAdridhara Sakti vairOhitya |
BEShijA vAyu likiyU ||
BUShaNA bArhaspatya dAlBya suyaj~jAj~ji |
vESyamuKa saparidhi sAlaMkAyanA dharma |
daisikA dEvarAta vatsarA aurva nA – |
nASaya dEvaSravatA || 4 ||

giviShTharA vAma vAmaritya kAlugra |
Srava pUrNavAhaka kRutu aMgirasAMgirA |
pavana prAcinA yaj~jAriShTa SaThanA pA – |
lava Samana RuShiSRuMga ||
kavi vEdaSAla viSAla kausika Suci |
Buvana Urjayana mahA^^RuShi bahudha saM – |
BavastaMBa kirAri kapisEna SAMDilya |
pavanadama bIjavApi || 5 ||

uliKallu dhanaMjaya vAliKillyA mAya |
kaliki SRuMgi madhu caMdavitanu bahu |
bala dhUmra jaThara UrvAsa aikyAyana |
tiluka viBAMDa SaraBA ||
pulastya dadhIci kathAsUnu sEvAsya mau – |
dgala viShNu tridhakukShi kukShama naMtattu |
pulaha havidhAna uttaMka uttuma kacara |
balavIrya babramanu || 6 ||

sutapa apavarga hiraNyanABA a – |
dButa ajAmiDhA parvata SvEtakEta maha |
dhRuti Sakti vaiSaMpAyana paila jaya |
satyavRuta SRuti dhRuti AyakA ||
SRutikIrti supraBA vatsa mRukAMDa su – |
mati krODha kola gObalA mAtRukAnaMda |
dyuti tapa vidvAha darBA jAnhava sIla |
kathana sarvasthaMbavA || 7 ||

naidhruvA dIrGatama jamadagni kAruNi |
sadmuni kAMDamaNi mAMDavya vAcasaka |
Suddha saMvarta saMtata kAma saMhati |
siddhi sanaka sanaMdanA ||
vidyAMga havya rOhita Sarma sUkarma |
vuddhALa vucithya harimEdha mEdha pra – |
siddha mayUra Suka kapila kApilya guNa |
buddhi sumEdha pErmi || 8 ||

paMca paMcAsapta aShTa kAladali prA – |
paMcadoLu toDakadale buddhi cittadoLiTTu |
aMcigaMcige bahu munigaLoLagiddavara |
koMca munigaLa pELide ||
vaMcaneyillade smarisi madhvamata poMdi |
saMcitAgama kaLeva sarvasuKavIva vi – |
raMcipita vijayaviThThalarEya iMdu ravi |
miMcinaMdadi poLevanU || 9 ||

Leave a Reply

Your email address will not be published. Required fields are marked *

You might also like

error: Content is protected !!