Kesavanama – Achyuta ananta

Composer : Shri Purandara dasaru

By Smt.Nandini Sripad , Blore..

ಶ್ರೀಪುರಂದರದಾಸಕೃತ ಕೇಶವನಾಮ

ರಾಗ: ಆನಂದಭೈರವಿ , ರೂಪಕತಾಳ

ಅಚ್ಯುತಾನಂತ ಗೋವಿಂದ ಹರಿ
ಸಚ್ಚಿದಾನಂದ ಸ್ವರೂಪ ಮುಕುಂದ || ಪ ||

ಕೇಶವ ಕೃಷ್ಣ ಮುಕುಂದ ಹರಿ
ವಾಸುದೇವ ಗುರು ಜಗದಾದಿವಂದ್ಯ
ಯಶೋದೆಯ ಸುಕೃತದ ಕಂದ ಸ್ವಾಮಿ
ಶೇಷಶಯನ ಭಕ್ತ ಹೃದಯಾನಂದ || ೧ ||

ನಾರಾಯಣ ನಿಮ್ಮ ನಾಮ ಎನ್ನ
ನಾಲಿಗೆ ಮೇಲಿರಬೇಕೆಂಬ ನೇಮ
ನಾನು ಬೇಡುವೆ ನಿಮ್ಮ ನಾಮ ಪ್ರಾಣಪ –
ಯಣದ ಸಮಯಕೊದಗಲಿ ಗುಣಧಾಮ || ೨ ||

ಮಾಧವ ಮಂಗಳಗಾತ್ರ ಸ್ವಾಮಿ
ಯಾದವ ಕೈಲಾಸವಾಸನ ಮಿತ್ರ
ಮಹಿಮೆ ಕೇಳಿದರೆ ವಿಚಿತ್ರ ನಿನ್ನ
ಮನಮೆಚ್ಚಲಿ ಸತ್ಯಭಾಮಾಕಳತ್ರ || ೩ ||

ಗೋವಿಂದ ಗೋಪಾಲ ಬಾಲ ಸೋಳ –
ಸಾಸಿರ ಗೋಪೇರ ಆನಂದಲೀಲ
ನೀಲಮಣಿ ಮುಕ್ತಮಾಲಾ ನಿಮ್ಮ
ನೇನೆಂದು ಕರೆಯಲಿ ಸುಗ್ರೀವಪಾಲ || ೪ ||

ವಿಷ್ಣುಚಕ್ರವು ಬಂದು ಸುತ್ತಿ ಮೂರು
ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ
ಕೃಷ್ಣ ಸಲಹೆಂದು ಮೊರೆಯಿಟ್ಟ ಮುನಿ
ಶ್ರೇಷ್ಠಗಿಷ್ಟರ ಮೇಲೆ ಅಭಯವ ಕೊಟ್ಟೆ || ೫ ||

ಮಧುಸೂದನ ಮಾರಜನಕ ಮದ –
ಗಜ ಸೀಳಿ ಮಲ್ಲರ ಗೆಲಿದೆ ತವಕ
ಒದಗಿ ಕಂಸನ ಕೊಂದ ಬಳಿಕ ನೀ
ಮುದಕಗೆ ಪಟ್ಟವ ಕಟ್ಟಿದ್ಯೋ ಧನಿಕ || ೬ ||

ತ್ರಿವಿಕ್ರಮ ತ್ರೈಲೋಕ್ಯನಾಥ ದೇವ
ತ್ರಿಪುರದ ಸತಿಯರ ವ್ರತಕೆ ವಿಘಾತ
ಯದುವಂಶ ಪಾಂಡವ ಪ್ರೀತ ಎನ್ನ
ಹೃದಯದೊಳಡಗಿರೋ ಶ್ರೀಜಗನ್ನಾಥ || ೭ ||

ವಾಮನರೂಪಿಲಿ ಬಂದು ಬಲಿಯ
ದಾನವ ಬೇಡಲು ಉಚಿತವು ಎಂದು
ಧಾರೆಯನೆರೆಯಲು ಅಂದು ಬೆಳೆದು
ಧಾರಿಣಿಯೆಲ್ಲವನಳಿದ್ಯೋ ನೀನಂದು || ೮ ||

ಶ್ರೀಧರ ಶೃಂಗಾರ ಹಾರ ದಿವ್ಯ
ಶ್ರೀವತ್ಸಲಾಂಛನ ಶ್ರೀರಘುವೀರ
ವಾರಿಧಿಸಮಗಂಭೀರ ಧೀರ
ಕ್ರೂರ ರಕ್ಕಸರನೆಲ್ಲರ ಸಂಹಾರಾ || ೯ ||

ಹೃಷಿಕೇಶ ವೃಂದಾವನದಲಿ ನೀ
ಹರುಷದಿ ಕೊಳಲನೂದುತ ಯಮುನೆಯಲಿ
ಸತಿಯರ ಸಮ್ಮೇಳದಲಿ ನೀ
ಧರಿಸಿದ್ಯೊ ಮಂದಾರಮಾಲೆ ಕೊರಳಲ್ಲಿ || ೧೦ ||

ಪದ್ಮನಾಭ ಕೇಳೊ ಘನ್ನ ಪಾದ –
ಪದ್ಮವ ತೋರಿಸೋ ಬೇಗನೆ ನಿನ್ನ
ಮುದ್ದುಮುಖವ ತೋರಿ ಎನ್ನ ಬೇಗ
ಉದ್ಧಾರ ಮಾಡೆಂದು ಬೇಡುವೆ ನಿನ್ನ || ೧೧ ||

ದಾಮೋದರ ಗುಣಧಾಮ ಸ್ವಾಮಿ
ದಾನವಾಂತಕ ಯದುಕುಲಸಾರ್ವಭೌಮ
ನೀಲಮೇಘನಿಭಶ್ಯಾಮ ಕೃಷ್ಣ
ನೀಲಾಪತಿಯೆಂಬ ಬಹುಪುಣ್ಯನಾಮ || ೧೨ ||

ಸಂಕರ್ಷಣ ದನುಜಹರಣ ದೇವ
ಪಂಕಜಮುಖಿ ದ್ರೌಪದಿ ಮೇಲೆ ಕರುಣ
ಕುಂಕುಮಾಂಕಿತರೇಖಾಚರಣ ನಿಜ
ಕಂಕಣ ಕೇಯೂರ ಕೌಸ್ತುಭಾಭರಣ || ೧೩ ||

ವಾಸುದೇವ ಕೇಳೋ ನಿನ್ನ ದಿವ್ಯ
ಸಾಸಿರನಾಮವ ನೆನೆವನೆ ಧನ್ಯ
ಬೇಸರದೆ ಸಲಹಬೇಕೆನ್ನ ತುಸು
ಘಾಸಿಯ ಮಾಡದೆ ಕರುಣಾಸಂಪನ್ನ || ೧೪ ||

ಪ್ರದ್ಯುಮ್ನನೆಂದು ನಾ ಕರೆದೆ ಎನ್ನ
ಬದ್ಧವಾದ ದುಷ್ಕರ್ಮವ ಕಳೆದೆ
ದುರ್ಬುದ್ಧಿ ದುರ್ವಾಕ್ಯ ಮೆರೆದೆ
ಸಾಧು ಸಜ್ಜನರ ಸಂಗ ನಿನ್ನಿಂದ ಬೆರೆದೆ || ೧೫ ||

ಅನಿರುದ್ಧ ಅನುದಿನದಲ್ಲಿ ನೀ
ವಿನಯದಿಂದಿದ್ದು ಗೋಪಿಯರ ಮನೆಯಲ್ಲಿ
ಸನಕಾದಿವಂದ್ಯ ನಿನ್ನಗಲಿ ಒಂದು
ಕ್ಷಣ ಬಿಟ್ಟಿರಲಾರೆ ನಿಲ್ಲೋ ಮನದಲ್ಲಿ || ೧೬ ||

ಪುರುಷೋತ್ತಮಗಾರು ಸಾಟಿ ಪರಬ್ರಹ್ಮ
ಸ್ವರೂಪಿಯೆ ನಿನಗಾರೊ ಪೋಟಿ
ಮಹಿಮೆ ಕೇಳಿದರೊಂದು ಕೋಟಿ ನಿನ್ನ
ಹೃದಯದಿ ಬ್ರಹ್ಮಾಂಡ ಕಂಡ ಕಿರೀಟಿ || ೧೭ ||

ಅಧೋಕ್ಷಜ ಅಸುರ ಸಂಹಾರಿ ಕೃಷ್ಣ
ಅದ್ಭುತರೂಪ ಶಿಶುಪಾಲನ ವೈರಿ
ಭಕ್ತರ ಪಾಲಿಪ ಶೌರಿ ಅಜಾ –
ಮಿಳ ನಾರಗನೆನ್ನೆ ಕಾಯ್ದೆ ಮುರಾರಿ || ೧೮ ||

ನರಸಿಂಹ ರೂಪವ ತಾಳ್ದೆ ಕಂದ
ಕರೆಯೆ ಕಂಭದಿ ಬಂದು ಕರುಣದಿ ಕಾಯ್ದೆ
ದುರುಳ ಹಿರಣ್ಯಕನ ಸೀಳ್ದೆ ಅವನ
ಕರುಳ ಬಗೆದು ವನಮಾಲೆ ಹಾಕಿದೆ || ೧೯ ||

ಅಚ್ಯುತ ನೀನತಿ ಮುದ್ದು ಗೋಪಿ
ಬಚ್ಚಿಟ್ಟ ಹಾಲು ಮೊಸರು ಬೆಣ್ಣೆ ಮೆದ್ದು
ತುಚ್ಚಶಕಟನ ಕಾಲಿಲೊದ್ದು ಕಾಡು
ಕಿಚ್ಚು ನುಂಗಿ ಪಾಲಿಸಿದೆಯೊ ಗೆದ್ದು || ೨೦ ||

ಜನಾರ್ದನ ರೂಪ ನೀನಾಗಿ ಎನ್ನ
ಮನದ ಕರ್ಮವ ತೊಲಗಿಸೊ ಮುಂದಾಗಿ
ಮುನಿಗಳೆಲ್ಲರು ಒಂದಾಗಿ ಈ
ತನು ನಿನ್ನದೆಂಬರೋ ಕೇಳೋ ನಿಜವಾಗಿ || ೨೧ ||

ಉಪೇಂದ್ರರೂಪದಿ ಬಂದಿ ಅಪ್ರ –
ಮೇಯ ಕಾಳಿಂಗನ ಮಡುವ ಧುಮುಕಿದಿ
ನಾಗನ ಹೆಡೆಗಳ ತುಳಿದಿ ನಾಗ –
ಪತ್ನಿಯರು ಬೇಡೆ ಪತಿಯ ಪಾಲಿಸಿದಿ || ೨೨ ||

ಹರಿ ಹರಿಯೆಂದರೆ ಪಾಪರಾಶಿ
ಹರಿದು ಹೋಯಿತು ಎನ್ನ ಮನದ ಸಂತಾಪ
ಸರ್ವರೊಳಗೆ ವಿಶ್ವರೂಪ ನಿನ್ನ
ನೆರೆ ನಂಬಿದವರನ್ನು ಸಲಹುವ ಭೂಪ || ೨೩ ||

ಕೃಷ್ಣ ಕೃಷ್ಣನೆಂಬ ಸೊಲ್ಲ ಕೇಳಿ
ನಷ್ಟವಾಯಿತು ಎನ್ನ ಪಾಪಗಳೆಲ್ಲ
ಮುಟ್ಟಿ ಭಜಿಸಿರೊ ನೀವೆಲ್ಲ ಪುರಂದರ –
ವಿಠ್ಠಲನಲ್ಲದೆ ಮತ್ತೆ ಬೇರಿಲ್ಲ || ೨೪ ||


SrIpuraMdaradAsakRuta kESavanAma

rAga: AnaMdaBairavi , rUpakatALa

acyutAnaMta gOviMda hari
saccidAnaMda svarUpa mukuMda || pa ||

kESava kRuShNa mukuMda hari
vAsudEva guru jagadAdivaMdya
yaSOdeya sukRutada kaMda svAmi
SEShaSayana Bakta hRudayAnaMda || 1 ||

nArAyaNa nimma nAma enna
nAlige mElirabEkeMba nEma
nAnu bEDuve nimma nAma prANapa –
yaNada samayakodagali guNadhAma || 2 ||

mAdhava maMgaLagAtra svAmi
yAdava kailAsavAsana mitra
mahime kELidare vicitra ninna
manameccali satyaBAmAkaLatra || 3 ||

gOviMda gOpAla bAla sOLa –
sAsira gOpEra AnaMdalIla
nIlamaNi muktamAlA nimma
nEneMdu kareyali sugrIvapAla || 4 ||

viShNucakravu baMdu sutti mUru
sRuShTiyanella tirugi bennaTTi
kRuShNa salaheMdu moreyiTTa muni
SrEShThagiShTara mEle aBayava koTTe || 5 ||

madhusUdana mArajanaka mada –
gaja sILi mallara gelide tavaka
odagi kaMsana koMda baLika nI
mudakage paTTava kaTTidyO dhanika || 6 ||

trivikrama trailOkyanAtha dEva
tripurada satiyara vratake viGAta
yaduvaMSa pAMDava prIta enna
hRudayadoLaDagirO SrIjagannAtha || 7 ||

vAmanarUpili baMdu baliya
dAnava bEDalu ucitavu eMdu
dhAreyanereyalu aMdu beLedu
dhAriNiyellavanaLidyO nInaMdu || 8 ||

SrIdhara SRuMgAra hAra divya
SrIvatsalAMCana SrIraGuvIra
vAridhisamagaMBIra dhIra
krUra rakkasaranellara saMhArA || 9 ||

hRuShikESa vRuMdAvanadali nI
haruShadi koLalanUduta yamuneyali
satiyara sammELadali nI
dharisidyo maMdAramAle koraLalli || 10 ||

padmanABa kELo Ganna pAda –
padmava tOrisO bEgane ninna
muddumuKava tOri enna bEga
uddhAra mADeMdu bEDuve ninna || 11 ||

dAmOdara guNadhAma svAmi
dAnavAMtaka yadukulasArvaBauma
nIlamEGaniBaSyAma kRuShNa
nIlApatiyeMba bahupuNyanAma || 12 ||

saMkarShaNa danujaharaNa dEva
paMkajamuKi draupadi mEle karuNa
kuMkumAMkitarEKAcaraNa nija
kaMkaNa kEyUra kaustuBABaraNa || 13 ||

vAsudEva kELO ninna divya
sAsiranAmava nenevane dhanya
bEsarade salahabEkenna tusu
GAsiya mADade karuNAsaMpanna || 14 ||

pradyumnaneMdu nA karede enna
baddhavAda duShkarmava kaLede
durbuddhi durvAkya merede
sAdhu sajjanara saMga ninniMda berede || 15 ||

aniruddha anudinadalli nI
vinayadiMdiddu gOpiyara maneyalli
sanakAdivaMdya ninnagali oMdu
kShaNa biTTiralAre nillO manadalli || 16 ||

puruShOttamagAru sATi parabrahma
svarUpiye ninagAro pOTi
mahime kELidaroMdu kOTi ninna
hRudayadi brahmAMDa kaMDa kirITi || 17 ||

adhOkShaja asura saMhAri kRuShNa
adButarUpa SiSupAlana vairi
Baktara pAlipa Sauri ajA –
miLa nAraganenne kAyde murAri || 18 ||

narasiMha rUpava tALde kaMda
kareye kaMBadi baMdu karuNadi kAyde
duruLa hiraNyakana sILde avana
karuLa bagedu vanamAle hAkide || 19 ||

acyuta nInati muddu gOpi
bacciTTa hAlu mosaru beNNe meddu
tuccaSakaTana kAliloddu kADu
kiccu nuMgi pAlisideyo geddu || 20 ||

janArdana rUpa nInAgi enna
manada karmava tolagiso muMdAgi
munigaLellaru oMdAgi I
tanu ninnadeMbarO kELO nijavAgi || 21 ||

upEMdrarUpadi baMdi apra –
mEya kALiMgana maDuva dhumukidi
nAgana heDegaLa tuLidi nAga –
patniyaru bEDe patiya pAlisidi || 22 ||

hari hariyeMdare pAparASi
haridu hOyitu enna manada saMtApa
sarvaroLage viSvarUpa ninna
nere naMbidavarannu salahuva BUpa || 23 ||

kRuShNa kRuShNaneMba solla kELi
naShTavAyitu enna pApagaLella
muTTi Bajisiro nIvella puraMdara –
viThThalanallade matte bErilla || 24 ||

Leave a Reply

Your email address will not be published. Required fields are marked *

You might also like

error: Content is protected !!