Composer : Shri Jagannatha dasaru
ಕರುಣಿಗಳೊಳಗೆ ಎಣೆಗಾಣೆನೋ ನಿನಗೆ ಸ –
ದ್ಗುರುವರ ರಾಘವೇಂದ್ರ || ಪ ||
ಚರಣ ಕಮಲವನ್ನು ಮೊರೆಹೊಕ್ಕ ಸುಜನರ
ಹರಕೆಯ ನಿರುತದಲೀವೆ ನೀ ಕಾವೆ || ಅ.ಪ ||
ರಾಘವೇಂದ್ರ ಗುರುವೆ ಗತಿಯೆಂದನು –
ರಾಗದಿಂದಲಿ ಭಜಿಪ ||
ಭಾಗವತರ ದುರಿತೌಘಗಳಳಿದು ಚೆ –
ನ್ನಾಗಿ ಸಂತೈಸುವೆ ನೀ ಸನ್ಮೌನಿ || ೧ ||
ಸುಧೀಂದ್ರಯತಿಕರ ಪದುಮ ಸಂಭವ
ಮಧುವದ ಪಾದಾಂಬುಜ ಮಧುಪ ||
ತ್ರಿದಶ ಭೂರುಹದಂತೆ ಬುಧ ಜನರಿಚ್ಛಿತ
ಒದಗಿ ಪಾಲಿಸಿ ಪೊರೆವೆ ಅಸ್ಮದ್ ಗುರುವೆ || ೨ ||
ಕುಧರ ದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ ||
ಸದಮಲ ಘನ ಮಂತ್ರ ಸದನ ನಿಲಯ ಜಿತ-
ಮದನ ಶ್ರೀ ಜಗನ್ನಾಥವಿಠಲನ ದೂತ || ೩ ||
karuNigaLoLage eNegANenO ninage sa –
dguruvara rAGavEMdra || pa ||
caraNa kamalavannu morehokka sujanara
harakeya nirutadalIve nI kAve || a.pa ||
rAGavEMdra guruve gatiyeMdanu –
rAgadiMdali Bajipa ||
BAgavatara duritauGagaLaLidu ce –
nnAgi saMtaisuve nI sanmauni || 1 ||
sudhIMdrayatikara paduma saMBava
madhuvada pAdAMbuja madhupa ||
tridaSa BUruhadaMte budha janaricCita
odagi pAlisi poreve asmad guruve || 2 ||
kudhara dEvana divyaradanadi janisida
nadiya tIradi SOBipa ||
sadamala Gana maMtra sadana nilaya jita-
madana SrI jagannAthaviThalana dUta || 3 ||
Leave a Reply