Harivayu stuti

Composer : Shri Pranesha dasaru

By Smt.Nandini Sripad , Blore.

ಭಾಮಿನಿ ಷಟ್ಪದಿ
ರಾಗ: ಕಾಂಬೋಧಿ

ನಖಸ್ತುತಿ
ದಿವಿಜ ರಮಣನ ದ್ವೇಷಿ ಜನರೆಂ |
ಬವನಿ ಭರ ಮಾತಂಗ ಮಾಧೇ |
ಯವಹ ಕುಂಭಗಳೆಂಬ ಗಿರಿಗಳ ದಾರಣಾಧಿಪಟೂ |
ಪವಿಗಳನು ಪೋಲ್ವಮರಗಣದಿಂ |
ಸುವಿದಳಿತ ದುರ್ಧ್ವಾಂತ ಕುಮತಿ |
ಪ್ರವಿತತಾಂತರದಿಂದ ಭಾವಿತ ನಖ ಶರಣ್ಯೆಮಗೇ || ೧ ||

ಸುಗುಣಗಣ ಸಂಕೋಪಸಂಗತ |
ದೃಗ್ಗೃಥಿತ ಪ್ರಾಂತೋತ್ಥಿತಾಗ್ನಿಯ |
ಝಗಝಗಿಪ ಮಾರ್ತಾಂಡನುಪಮೆಯ ವಿಸ್ಫುಲಿಂಗಗಳಿಂ |
ಯುಗಯುಗಾಸ್ಯ ಭವೇಂದ್ರ ಸಂದೋ |
ಹಗಳನೈದಿಸಿ ಭಸಿತ ಭಾವವ |
ಬಗೆಬಗೆಯಲಿಂದವನಿಜಯಳನಪ್ಪಿ ರಮಿಸುವನೇ || ೨ ||

ಶುಭನಿಕೇತನ ಸೌಖ್ಯದ ಭವ |
ನ್ನಿಭರನನ್ಯರಗಾಣೆನಧಿಕ |
ತ್ರಿಭುವನದಿ ನಾಲ್ಕೆರಡನೇ ರಸದಂತೆ ಸನ್ಮಹಿತಾ |
ವಿಭು ವಿಭೂತಿದ ಭೂಜಲೇಂದ್ರ |
ಪ್ರಭೃತಿರಸ ಸಪ್ತೋತ್ತಮನೆ ಯನ |
ಗಭಯ ಕೊಡು ಪ್ರಹ್ಲಾದನುತ ಪ್ರಾಣೇಶವಿಟ್ಠಲನೇ || ೩ ||

ಶ್ರೀ ವಾಯುಸ್ತುತಿ
ಭಾರತೀಶ ಭವೇಂದ್ರನುತ ಸೀ – |
ತಾರಮಣಗತಿ ಪ್ರೀತ ಹನುಮಾನ್ |
ಘೋರ ಕೀಚಕಚಯ ಧನಂಜಯ ಸೌಖ್ಯ ಸತ್ತೀರ್ಥಾ || ಪ ||

ಹರಿಯ ಚರಣ ಸರೋಜನಿಷ್ಠಾ |
ವರ ಸುಗುಣದಿಂದಧಿಕ ಗುರುತಮ |
ಚರಣ ಲೋಕತ್ರಯ ಸುಪೂಜಿತ ಶ್ರೀಮದಾನಂದ |
ವರ ಮುನೀಂದ್ರನೆ ನಿನ್ನ ಚರಣಾಂ |
ಬುರುಹದಲಿ ಭ್ರಾಜಿಪ ರಜೋಗಣ |
ಪರಮ ಪಾವಿಸಲಾವ ರಜಗಳು ಭಾರತೀ ವಿನುತ || ೧ ||

ಶ್ರದ್ಧೆಯಿಂದಭಿವೃದ್ಧ ಕಲಕಲ |
ಶಬ್ಧದಿಂದನುಬದ್ಧ ಸೇವಾ |
ವೃದ್ಧ ಸಂವಿದ್ವಿಬುಧಗಣದ ಸುಮೌಲಿ ರತ್ನಗಳಾ |
ಹೃದ್ಯ ಸಂಘಟ್ಟನದಿ ಘರಷಿತ |
ಶುದ್ಧ ಪಾದುಕ ಜನಿತ ಕನ |
ಕದ ಸದ್ರಜೋಗಣರಂಜಿತಾಶಾ ಸುರೇಣುಗಳಿಗೆ ನಮೋ || ೨ ||

ಜನನ ಮೃತಿ ಮೊದಲಾದ ಬಹುಳಾಂ |
ಜನಕೆ ವಿರಹವನೀವ ಬಲು ಸ |
ಜ್ಜನಕೆ ಸುಗುಣಗಳಿತ್ತು ವಿಮಲಾನಂದ ಕರುಣಿಸುವಾ |
ದಿನದಿನದಿ ದೂಷಿಸುವ ದುರ್ಮತಿ |
ದನುಜರನು ದುಃಖೋಗ್ರತಮದೊಳ್ |
ಮುಣುಗಿಸುವ ನಿನ್ನಂಘ್ರಿ ಪಾಂಸುಗಳಾನು ವರಣಿಪೆನೇ || ೩ ||

ಕಲಿಯ ಮಲದಿಂ ಕಲುಷಜನದಲಿ |
ವಲಿದು ವಿಜ್ಞಾನವನೆ ಕರುಣಿಸೆ |
ಜಲಜ ಜಾಹ್ನವಿ ಜಡೆ ಬಿಡೌಜಸ ಮುಖ್ಯ ಸುರವಿನುತಾ |
ಸುಲಭರನು ಸಂರಕ್ಷಿಸುವ ಸ |
ತ್ಸುಲಲಿತಾಗಮ ಮಹಿತ ಮಧ್ವಾ |
ಮಲ ಸುರೂಪನೆ ಮರುತ ನಾ ನಿನ್ನೆಂತು ವರಣಿಪೆನೋ || ೪ ||

ಪೊಳೆವ ಮಿಂಚಿನ ಪೋಲ್ವ ಗದೆಯಿಂ |
ಥಳಥಳಿಪ ದಿನಕರನ ತೇಜದ |
ಚಲುವ ಭುಜ ಭೂಷಣದಿ ಭೂಷಿತ ಭುಜದಿ ಧರಿಸುತಲೀ |
ಬೆಳಗಿ ಭುವನಂತರವ ನಿಜರುಚಿ |
ಗಳಲಿ ಭಾಜಿಪ ಭೀಮರೂಪಾ |
ನಿಳನೆ ನಿರ್ಮಲಮತಿಯ ಕರುಣಿಪುದಲವಬೋಧಾಖ್ಯಾ || ೫ ||

ಭವಜ ಸಂತಾಪಗಳ ವನಕೆ |
ಅವಧಿ ಕರುಣಾಕಲಿತನೇ ಹೃದಯಾ |
ಲವ ಶುಭಸ್ಮಿತ ಪೊರಯುತ ವಿದ್ಯಾಖ್ಯ ಮಣಿಕಿರಣಾ |
ನಿವಹದಿಂ ದಿಗ್ದಶವ ಬೆಳಗುವ |
ಭುವನರುಹನಾಭನ ನಿವಾಸದ |
ಲವಿರಹಿತ ಸುಖತೀರ್ಥಜಲಧಿಯೆ ಶಮಲ ಪರಿಹರಿಸೋ || ೬ ||

ಬಂಧಕಂದಿಪ ಭಜಕಜನಕಾ |
ನಂದ ಪೊಂದಿಪ ನುಡಿಯ ರಮಣನೆ |
ಛಂದದಿಂದಾಂಜಲಿಯ ಶಿರದಲಿ ಬಂಧಿಸುವೆ ಭರದೀ |
ಇಂದಿರಾರಮಣನ ಪದಾಂಬುಜ |
ಒಂದು ಮನದಲಿ ಭಜಿಪ ಭಕುತಿಯ |
ಗಂಧವಹ ನಿನ್ನಂಘ್ರಿ ಭಜನೆಯ ಭೂರಿ ಕರುಣಿಪುದೂ || ೭ ||

ಘನ ಸರೋರುಹಮಿತ್ರ ಶಶಲಾಂ |
ಛನ ಸಮೇತಾ ನಭನರಾಧಿಪ |
ಜನ ವಿಭೂತಿಗಳುಳ್ಳ ವಸುಮತಿ ದಿವಿಜ ಭುವನಗಳಾ |
ಜನನಭರಣೋದ್ದಳನಗಳ ಕಾ |
ರಣದ ಸುಭ್ರೂವಿಭ್ರಮವು ಹೆ |
ದ್ಧನುಜ ಸಂಕರ ಸಲಿಲಜಾದ್ಯರ ಸತತ ಮೋಹಿಪುದೂ || ೮ ||

ನಿನ್ನ ಯತಿರೂಪವನು ಪೂಜಿಪ |
ಧನ್ಯಜನರಾನಂದರೂಪದಿ |
ರನ್ನ ಸಹಚರಚಲಿತ ಚಾಮರಚಯದಿ ಶೋಭಿಪರೂ |
ಘನ್ನ ದ್ಯುತಿ ತಾರುಣ್ಯ ಶುಭ ಲಾ |
ವಣ್ಯ ಲೀಲಾಪೂರ್ಣ ಸತಿಯರ |
ಚನ್ನ ಕುಚ ಸಂಶ್ಲೇಷ ಜನಿತಾನಂದ ಸಂಭರರೂ || ೯ ||

ಕುಂದಮಂದಾರಾದಿ ಕುಸುಮದ |
ಗಂಧ ಸಂಗತ ಮರುತ |
ಸಹಿತಾನಂದ ಜನಕಾನಂದವೀವುದು ವನರುಹಾಕ್ಷಿಯರಾ |
ವೃಂದ ಸಂಸೇವಿತ ನಿರಂಜನ |
ಚಂದ್ರ ದಿವಸಾಧೀಶ ಮದನಾ |
ಹೀಂದ್ರ ಸುರಪತಿ ಸೇವ್ಯಮಹಿತ ಮುಕುಂದನರಮನೆಯೋಳ್ || ೧೦ ||

ಧಿಟ್ಟ ಕಟಕಟ ಶಬ್ಧ ಶಬಲೋ |
ದ್ಘಟ್ಟಜನಿ ಕೆಂಗಿಡಿಗಳಿಂದತಿ |
ಜುಷ್ಟ ಪಂಕಿಲ ಜರಿವ ಸುಖಬಿಂದುವಿನ ತಮದೊಳಗೆ |
ಸ್ಪಷ್ಟವಾದಿತರಾದ ಭವದ ನ |
ಭೀಷ್ಟರನು ಸಂತಪ್ತ ಶಿಲೆಗಳ |
ಲಿಟ್ಟು ಕುಂದಿಪರನವರತ ತ್ವದ್ಭೃತ್ಯ ಜನರುಗಳು || ೧೧ ||

ಶ್ರೀನಿವಾಸನ ಸರಸ ಚರಣ |
ಧ್ಯಾನ ಮಂಗಳಮಹಿತ ಭವದಸ |
ಮಾನ ಸನ್ನಿಧಿ ಪಿಡಿದು ಸುಮುದಾಸೀನ ಮಾನವನೂ |
ಜ್ಞಾನಿಗೋಚರ ರಹಿತ ದುಃಖಾ |
ಧೀನ ಸುಖ ಸಂಸಾರದೊಳು ಬಲು |
ದೂನನಾಗಿಹ ನಿತ್ಯ ನಿರಯವ ನೋಡನೆಂದೆಂದೂ || ೧೨ ||

ಕ್ಷುದಧಿಕಾರ್ದಿತ ರಾಕ್ಷಸರ ಖರ |
ರದನ ನಖಕ್ಷೋಭಿತಾಕ್ಷ |
ಮದಕ್ಷುರಾನನ ಪಕ್ಷಿವೀಕ್ಷಿತಗಾತ್ರ ಸಹಿತರನೂ |
ರುದಿರ ಪೂಯಾ ಕುಲಿತ ನಾನಾ |
ವಿಧದ ಕ್ರಿಮಿಕುಲ ಕಲಿಲತಮದೊಳ |
ಗಧಿ ನಿಮಗ್ನರ ಬಾಧಿಪವು ಪವಿ ಕಲ್ಪ ಕುಜಲೂಕಾ || ೧೩ ||

ಜನನಿ ಜನಕಾಗ್ರಜ ಹಿತಪ್ರದ |
ಪ್ರಣಯಭರ ಸರ್ವಾಂತರಾತ್ಮನೆ |
ಜನನಮರಣಾದಿಗಳ ಜರಿಸುವ ಮರುತ ಜಾಹ್ನವಿಯಾ |
ಜನಕ ಹರಿಯ ಅಪೂರ್ವ ನಿನ್ನಯ |
ವನಜ ಚರಣದಿ ವಿಮಲ ಭಕುತಿಯು |
ದಿನದಿನದಿ ಯನಗಧಿಕ ಕರುಣಿಪುದಮಿತ ಸದ್ಭೋಧಾ || ೧೪ ||

ಸಕಲ ಸದ್ಗುಣಗಣಗಳಿಂದಾ |
ಧಿಕ ರಮಾ ಸಂಶ್ಲೇಷಿ ಹರಿಪಾ |
ದ ಕಮಲದಿ ತದ್ಭಕ್ತ ತಾಮರಸೋದ್ಭವ ಸಮೀರಾ |
ಮಖ ಶತಾಮುಖ ತಾರತಮ್ಯವ |
ಯುಕುತಿಯಲಿ ತಾ ತಿಳಿದು ನಿರ್ಮಲ |
ಭಕುತಿ ಭಾರವ ವಹಿಸುವನ ನಮ್ಮನಿಲ ನೀ ಪೊರೆವೇ || ೧೫ ||

ತತ್ತ್ವ ಸುಜ್ಞಾನಿಗಳ ನಿರ್ಮಲ |
ಮುಕ್ತಿಯೋಗ್ಯ ಮಹಾನುಭಾವರ |
ಸತ್ಯ ಸುಖಕೈದಿಸುವೆ ಮಿಶ್ರಜ್ಞಾನ ಜನರುಗಳಾ |
ಸುತ್ತಿಸುವೆ ಸಂಸಾರದಲಿ ಬಲು |
ವತ್ತಿಸುವೆ ಮಿಥ್ಯಾಮನೀಷರ |
ನಿತ್ಯ ನಿರಯದಲೆಂದು ಕೇಳುವೆ ನಾನು ನಿಗಮಗಳಾ || ೧೬ ||

ಮಹಿತ ಪೌರುಷ ಬಾಹುಶಾಲಿ ವಿ |
ರಹಿತ ಸರ್ವಾಘೌಘ ನಿರ್ಮಲ |
ಸಹಿತ ಬಹುಲ ಬ್ರಹ್ಮಚರ್ಯ ಪ್ರಮುಖ ಧರ್ಮಗಳಾ |
ಬಹು ಸಹೋಮಯ ಭಜಕ ರಹಿತವ |
ದಹಿಸುವ ಪ್ರತಿದಿನದಿ ಮೋಹಕ |
ಮಹಮಹಿಮ ಹನುಮಂತದೇವರ ರೂಪಕಾನಮಿಪೇ || ೧೭ ||

ಶತ ಮನೀಷನೆ ಶಮದ ಪಂಚಾ |
ಶತ ಸಹಸ್ರ ಸುಯೋಜನಗಳಿಂ |
ದತಿ ವಿದೂರ ಮಹೌಷಧಿಗಳುಳ್ಳಾ ಗಿರೀಂದ್ರವನೂ |
ಪ್ರಥಿತ ನೀ ತರಲಾಗ ಗಮಿಸೀ |
ಕ್ಷಿತಿ ಧರೇಂದ್ರನ ಕಿತ್ತು ತಂದಾ |
ಪ್ರತಿಮ ನಿನ್ನನು ನೋಡ್ದರಾ ಜನರೊಂದು ಕ್ಷಣದೊಳಗೇ || ೧೮ ||

ಘನಗುಣಾಂಭೋನಿಧಿಯೆ ಶತಯೋ |
ಜನ ಸಮುನ್ನತ ವಿಸ್ತೃತಾಚಲ |
ವನು ಅನಾದರದಿಂದಲೊಗೆಯಲು ಲೀಲೆ ಮಾತ್ರದಲೀ |
ಅನುಸರಿಸಿ ಸ್ವಸ್ವ ಸ್ಥಳಗಳತಿ |
ಘನ ಸುಶಕಲ ಸಮೇತ ಸುಶಿಲಾ |
ಗಣಗಳುಳ್ಳದ್ದೆನಿಸೆ ನಿನ್ನಯ ಕೌಶಲಕೆ ನಮಿಪೇ || ೧೯ ||

ನಿನ್ನ ಮುಷ್ಟಿಯಲಿಂದ ಪೇಷಿತ |
ಸ್ವರ್ಣಮಯವರ್ಮ ವಿಭೂಷಿತ |
ಚೂರ್ಣಿತಾಸ್ಥಿಗಳುಳ್ಳ ರಾವಣನುರವ ನೋಡುವರೂ |
ಸ್ವರ್ಣಗಿರಿ ಸುತಟಾಕ ಶಂಕಾ |
ಪೂರ್ಣರಾಗುವರಾ ಸುಮುಷ್ಟಿಯು |
ಬನ್ನ ಕಳೆದು ಬಹೂನ್ನತಾನಂದಗಳ ಕೊಡದೇನೋ || ೨೦ ||

ಜಾನಕಿ ಮುದ್ರಾದಿ ದಾನವು |
ದಾನವರ ದಹನಾದಿ ಸೇನಾ |
ಶ್ರೇಣಿಗತಿ ಸುಪ್ರೀತ ಕರುಣಾಶಾಲಿ ಸುಖಮಾಲೀ |
ಭಾನುಕುಲ ಸುಲಲಾಮ ಪ್ರೇಮಾ |
ಧೀನ ಮಾನಸನಾಗಿ ವನರುಹ |
ಸೂನುವಿನ ಶುಭಪದವನಿತ್ತನು ನಿನಗೆ ನಳಿನಾಕ್ಷಾ|| ೨೧ ||

ಮದ ಬಕನ ಸಂಹರಿಸಿ ಅತಿ ವೇ |
ಗದಿ ಪುರಸ್ಥಿತ ಸರ್ವ ಜನದ ಸು |
ವಿಧೃತಿ ಸುಖ ವಿಘ್ನಗಳ ಭರದಲಿ ಬಿಡಿಸಿ ಕಾಯ್ದಿದೆಯೋ |
ಅಧಮತರ ದುರ್ಧಿಷಣ ದುರುಳರಿ |
ಗಧಿಕ ಕಿರ್ಮೀರನ ರಣಾಂಗದಿ |
ಸದೆದ ಸತ್ಕೌರವ ಕುಲೇಂದ್ರನೆ ನಮಿಪೆನನವರತಾ || ೨೨ ||

ಅತ್ಯ ಯತ್ನದಲಿಂದ ಕುಜರಾ |
ಪತ್ಯನಂಗಾಸ್ಥಿಗಳ ಸಂಧಿಗ |
ಳೊತ್ತಿ ನಿರ್ಮಥಿಸಲು ಸುರಾರಿ ಜನೋತ್ತಮೋತ್ತಮನಾ |
ಅರ್ಥಿಯಲಿ ಸಂಹರಿಸೆ ಹರಿ ತಾ |
ತೃಪ್ತನಾದನು ಎಂತೋ ಆ ಪರಿ |
ತೃಪ್ತನಾದನೆ ಪೇಳು ರಾಜಸೂಯಾಶ್ವಮೇಧದಲೀ || ೨೩ ||

ಸಿಂಹನಾದದಲಿಂದ ಪೂರಿತ |
ಬಹ್ವನೀಕಕ್ಷಪಣ ನಿಪುಣಾ |
ರಂಹಸದ ತ್ವದ್ರಣವ ವರ್ಣಿಪರಿನ್ನುಂಟೇ |
ಸಿಂಹ ಸಂಹನನಾಂಗ ಕಮಲಾ |
ಸಿಂಹನಲ್ಲದೆ ಸತತ ಸುವಿ |
ರಹಿತಾಂಹಸನೆ ನಿಮ್ಮಂಘ್ರಿ ಕಮಲಕ್ಕೆರಗಿ ವಂದಿಪೆನೋ || ೨೪ ||

ಜ್ಞಾನಧನದಾನಿಲನೆ ನಿನ್ನಯ |
ರಾಣಿ ವಾಣಿಯು ಯೆನ್ನ ಮನದ – |
ಜ್ಞಾನ ಕಳೆದು ವಿಶಾಲ ಭಕುತಿಯ ಹರಿಯ ಮಹಿಮೆಗಳ |
ಜ್ಞಾನವನು ಕರುಣಿಸುತಲನುದಿನ |
ಹೀನ ದುರಿತೌಘಗಳ ವಿರಹಿಸ – |
ಲಾ ನರೇಂದ್ರನ ಕುವರಿ ನಿನ್ನಾಜ್ಞೆಯ ಕರುಣದಲೀ || ೨೫ ||

ಭೇದ ವಿರಹಿತ ಬಹು ಚಿದಾನಂ – |
ದಾದಿ ಗುಣ ಸಂಪೂರ್ಣರೆನಿಸಿದ |
ಭೇದವಚನಕೆ ಗೋಚರಿಸಿದ ವಿಶೇಷ ಬಲದಿಂದಾ |
ಮೋದದಲಿ ದ್ವಿಜಬಾಹುಜೋದಿತ |
ರಾದ ವೇದವ್ಯಾಸಕೃಷ್ಣರ |
ಪಾದ ಪಂಕಜ ನಿರುತ ನಿನ್ನಯ ಚರಣಕಾನಮಿಪೇ || ೨೬ ||

ನಂದದಲಿ ಸೌಗಂಧಿಕವ ತರ |
ಲಂದು ಪೋಗಲು ಭೀಮರೂಪದ |
ಲಂದದಿಂದಾಂಜನೆಯ ಕುವರನ ಬಾಲ ಧರಿಸದಲೇ |
ಕುಂದಿದಂದದಿ ತೋರಿಸಿದೆ ಆ |
ನಂದತೀರಥ ದನುಜಮೋಹನ |
ನಂದಸಾಂದ್ರನೆ ನಿನ್ನ ಚರಿತೆಯು ಲೀಲೆ ಕೇವಲವೋ || ೨೭ ||

ಕುಟಿಲ ಕಟುಮತಿ ಕಟುಕ ದೈತ್ಯರ |
ಕಠಿಣತರ ಗದೆಯಿಂದ ಕುಂದಿಸಿ |
ನಿಟಿಲನೇತ್ರನ ನುಡಿಗಳಿಂದಾಜೇಯ ಮಾಯಿಗಳಾ |
ದಿಟನೆ ವಾಗ್ಬಾಣಗಳ ನಿಚಯದಿ |
ಶಠರ ವಿಶ್ವಾತಥದ ವಚನರ |
ತ್ರುಟಿಯು ಮೀರದೆ ತರಿದು ತರುಣಿಗೆ ಕುಸುಮ ನೀನಿತ್ತೇ || ೨೮ ||

ಯುಗಪದದಿ ಸಂಹೃತ ಮಹಾಸುರ |
ರಿಗೆ ಮಿಗಿಲು ಮಣಿಮಂತ ತಾನತಿ |
ಮಿಗಿಲು ಕೋಪದ ವಶಗನಾಗಿ ಮಹೌಜಸನೇ ನಿನ್ನಾ |
ಬಗೆಯ ಜನರಾಂತರಕೆ ಮೋಹವ |
ಬಗೆವ ಬಹುಗುಣಪೂರ್ಣ ಹರಿಗೆ |
ವಿಗುಣ ಜೀವೈಕ್ಯವನು ಪೇಳುವ ಕುಮತ ರಚಿಸಿದನೂ || ೨೯ ||

ಅವನ ದುರ್ಧಿಷಣಾನುಸಾರದಿ |
ಪವನಪಿತಗೆ ಜೀವೈಕ್ಯವನು ಪೇ |
ಳುವ ಕುವಾದವ ಕೆಲರು ಸಲಿಸಲು ಕೆಲರನಾದರಿಸೇ |
ಪವನ ನೀನವತರಿಸಿ ವೇಗದ |
ಲವನಿಯೊಳಗಾ ಕುಮತಿ ದುರ್ಯ್ಯು |
ಕ್ತ್ಯವನಿರುಹಗಳ ದಹಿಸಿದ್ಯಪ್ರತಿ ದಾವ ಸಮನಾಗೀ || ೩೦ ||

ಅಮಿತಮಹಿಮನೆ ನಿನ್ನ ವಾಖ್ಯಾ |
ವಿಮಲ ಪಂಚಾನನ ನಿನಾದವ |
ಭ್ರಮಿಸಿ ಕೇಳುತ ಭಯದಿ ವದರಿ ನಿರಾಶೆಯಲಿ ಜರಿದು |
ಶಮಿತ ದರ್ಪಾಕೋಪರಾಗಿ |
ಭ್ರಮದಿ ಸಂತತರೆನಿಸಿ ದಶದಿಶೆ |
ಗಮಿಸಿ ಪೋದರು ಮಾಯಿ ಗೋಮಾಯಿಗಳು ಘಳಿಗೆಯೊಳೂ || ೩೧ ||

ಜಯ ಸುಶೀಲ ಸುಪೂರ್ಣ ಶಕ್ತಿಯೆ |
ಜಯ ಗುರೋ ಜನ್ಮತ್ರಯದಲಾ |
ಮಯ ವಿದೂರನೇ ಮಾಯಿಜನರು ವಿಹಿಂಸೆಗೊಳಿಸಿದರೂ |
ಭಯ ವಿಧುರ ನಿರ್ಮಲ ಚಿದಾನಂದ |
ಮಯನೆ ಸುಖಸಂದಾಯಿ ನೇತ್ರ |
ತ್ರಯ ಮುಖರಿಗಧಿಪತಿಯೆ ಮಮ ಸುಖವೀವುದಾಚಾರ್ಯ || ೩೨ ||

ಉದಯಿಸುವ ಮಂದಸ್ಮಿತದ ಮೃದು |
ಮಧುರ ಸಲ್ಲಾಪಾಖ್ಯ ಸುಧೆಯ |
ತ್ಯಧಿಕ ಧಾರಾಸೇಕದಿಂ ಸಂಶಾಂತ ಭವಶೋಕಾ |
ಸದಮಲರ ಮನೋನಯನದಿಂ ಸಂ |
ಮುದದಿ ಸೇವಿತವಾದ ನಿನ್ನಯ |
ವದನಚಂದ್ರವನೆಂದು ನಾ ನಿತ್ಯದಲಿ ನೋಡುವೆನೋ || ೩೩ ||

ಮೋದತೀರ್ಥನೆ ನಿನ್ನ ವಚನಾ |
ಸ್ವಾದಿಸುವ ಬಹು ಸುಕೃತಿ ಜನರಾ |
ಗಾಧ ಅಪೇಕ್ಷಗಳ ಹರಸುತ ಮೋದವೀಯುತಲೀ |
ಸಾದರದಿ ಶೋಭಿಸುವ ನಿನ್ನಯ |
ವೇದ ವ್ಯಾಖ್ಯಾನವನು ಸಂತತ |
ಬೋಧಪೂರ್ಣನೆ ಎಮ್ಮ ಶ್ರವಣಕೆ ಗೋಚರಿಸಿ ಸಲಹೋ || ೩೪ ||

ರತುನಮಯ ಪೀಠದಲಿ ಕುಳಿತಿಹ |
ಶತಮನೀಷನೆ ಭಾವಿ ವಾಣೀ |
ಪತಿಯೆ ನಿನ್ನನು ವೈದಿಕಾದಿಸು ವಿದ್ಯದಭಿಮಾನೀ |
ಕ್ರತುಭುಜರು ಸೇವಿಪರು ಸತತದಿ |
ವಿತತ ನಿನ್ನಯ ಚರಿತೆಯನು ದೇ |
ವತೆ ಸಮಾಜದಿ ಗಂಧರ್ವರು ಪೊಗಳುತಿಹರದಕೇ || ೩೫ ||

ಜನ್ಮ ಮೃತಿ ನಿರಯಾದಿ ಭಯ ಭೀ |
ಷಣ ಕುಸಂಸಾರಾಂಬುನಿಧಿಯೊಳ್ |
ಮುಣುಗಿದಮಲ ಸುಯೋಗ್ಯ ಜನರನು ನೋಡಿ ಕರುಣದಲೀ |
ಅನಿಲ ಪ್ರಾರ್ಥಿತನಾಗಿ ನಿನ್ನಿಂ |
ದನುನಯದಿ ಮಾರಮಣ ಮನ್ನಿಸಿ |
ಜನಿಸಿದನು ಋಷಿಯಿಂದ ವಾಸವಿಯುದದೊಳಗಮಲಾ || ೩೬ ||

ಅಧಮ ಜನರಿಂದತಿ ತಿರೋಹಿತ |
ಸದಮಲಾಗಮ ತತಿಗೆ ಕರುಣದಿ |
ಬುಧರಿಗಾ ಮುದವಾಹ ತೆರದಲಿ ಸೂತ್ರ ರಚಿಸಿದನೂ |
ಅದುಭುತಾತ್ಮ ಮಹಾನುಭಾವನಿ |
ಗೆದುರು ಮಿಗಿಲೋಬ್ಬುಂಟೇ ಲೋಕದಿ |
ಬದರಿಕಾಶ್ರಮನಿಲಯ ವೇದವ್ಯಾಸಗಾನಮಿಪೇ || ೩೭ ||

ಶ್ರೀಶನಾಜ್ಞೆಯ ಧರಿಸಿ ಶಿರದಲಿ |
ಈಶ ಗರುಡ ಶಚೀಶಮುಖರ ದಿ |
ವೀಶ ಪ್ರಾರ್ಥನೆ ಮನಕೆ ತಂದು ಮಹಾಮಹಿಮ ದೇವಾ |
ಪೋಷಿಸಲು ಸಜ್ಜನರಿಗತಿ ತ್ವರ |
ಕಾಶ್ಯಪಿಯೊಳಗವತರಿಸಿ ನೀ ಸ |
ದ್ಭಾಷ್ಯ ವಿರಚಿಸಿ ಖಂಡಿಸಿದಿ ದುರ್ಭಾಷ್ಯಗಳನೆಲ್ಲಾ || ೩೮ ||

ರಜತಪೀಠಾಹ್ವಯ ಪುರದಿ ನೀ |
ರಜಭವನೆ ನಡುಸದನ ನಾಮಕ |
ದ್ವಿಜನ ಗೃಹದಲಿ ಜನಿಸಿ ಮಹಮಹಿಮೆಗಳ ತೋರುತಲೀ |
ನಿಜ ತುರಿಯ ಆಶ್ರಮವ ಧರಿಸೀ |
ಪ್ರಜರುಗಳನುದ್ಧರಿಸಲುಪನಿಷ |
ದ್ವ್ರಜ ಸುಭಾರತ ಭಾಷ್ಯಗಳ ರಚಿಸಿದೆಯೋ ಕರುಣಾಳೂ || ೩೯ ||

ವಂದಿಸುವೆ ಸುರವೃಂದವಂದ್ಯನೆ |
ವಂದಿಸುವೆ ಜಾಹ್ನವಿಯ ಸ್ನಾನದ |
ಕಿಂತಧಿಕ ಪುಣ್ಯವನು ಚರಣ ಸ್ಪರುಶ ಮಾಳ್ಪರಿಗೇ |
ಪೊಂದಿಸುವನಿಗೆ ವಂದಿಸುವೆ ಭವ |
ಬಂಧ ಹರಿಸುತ ಸುಖವ ಕೊಡುವಾ |
ನಂದತೀರಥ ನಿನಗೆ ಅಭಿವಂದಿಸುವೆನನವರತಾ || ೪೦ ||

ಶ್ರೀಶಮರುತರ ದಾಸ ಗುಹಸುತ |
ಕೇಶವ ಶ್ರೀ ಭಾರತೀಶರ |
ನೀ ಸುಪದ್ಯಗಳಿಂದ ಸ್ತುತಿಸಿದ ತಾ ಸುಭಕುತಿಯಲೀ |
ತೋಷದಿಂ ಪಠಿಸುತ್ತ ನಮಿಸುವ |
ರಾಶೆಗಳ ಪೂರೈಸುತೀರ್ವರು |
ಕ್ಲೇಶರಹಿತ ಸ್ಥಾನವಿತ್ತು ಸುಸೌಖ್ಯನುಣಿಸುವರು || ೪೧ ||

ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು !!


BAmini ShaTpadi
rAga: kAMbOdhi

naKastuti
divija ramaNana dvEShi janareM |
bavani Bara mAtaMga mAdhE |
yavaha kuMBagaLeMba girigaLa dAraNAdhipaTU |
pavigaLanu pOlvamaragaNadiM |
suvidaLita durdhvAMta kumati |
pravitatAMtaradiMda BAvita naKa SaraNyemagE || 1 ||

suguNagaNa saMkOpasaMgata |
dRuggRuthita prAMtOtthitAgniya |
JagaJagipa mArtAMDanupameya visPuliMgagaLiM |
yugayugAsya BavEMdra saMdO |
hagaLanaidisi Basita BAvava |
bagebageyaliMdavanijayaLanappi ramisuvanE || 2 ||

SuBanikEtana sauKyada Bava |
nniBarananyaragANenadhika |
triBuvanadi nAlkeraDanE rasadaMte sanmahitA |
viBu viBUtida BUjalEMdra |
praBRutirasa saptOttamane yana |
gaBaya koDu prahlAdanuta prANESaviTThalanE || 3 ||

SrI vAyustuti
BAratISa BavEMdranuta sI – |
tAramaNagati prIta hanumAn |
GOra kIcakacaya dhanaMjaya sauKya sattIrthA || pa ||

hariya caraNa sarOjaniShThA |
vara suguNadiMdadhika gurutama |
caraNa lOkatraya supUjita SrImadAnaMda |
vara munIMdrane ninna caraNAM |
buruhadali BrAjipa rajOgaNa |
parama pAvisalAva rajagaLu BAratI vinuta || 1 ||

SraddheyiMdaBivRuddha kalakala |
SabdhadiMdanubaddha sEvA |
vRuddha saMvidvibudhagaNada sumauli ratnagaLA |
hRudya saMGaTTanadi GaraShita |
Suddha pAduka janita kana |
kada sadrajOgaNaraMjitASA surENugaLige namO || 2 ||

janana mRuti modalAda bahuLAM |
janake virahavanIva balu sa |
jjanake suguNagaLittu vimalAnaMda karuNisuvA |
dinadinadi dUShisuva durmati |
danujaranu duHKOgratamadoL |
muNugisuva ninnaMGri pAMsugaLAnu varaNipenE || 3 ||

kaliya maladiM kaluShajanadali |
validu vij~jAnavane karuNise |
jalaja jAhnavi jaDe biDaujasa muKya suravinutA |
sulaBaranu saMrakShisuva sa |
tsulalitAgama mahita madhvA |
mala surUpane maruta nA ninneMtu varaNipenO || 4 ||

poLeva miMcina pOlva gadeyiM |
thaLathaLipa dinakarana tEjada |
caluva Buja BUShaNadi BUShita Bujadi dharisutalI |
beLagi BuvanaMtarava nijaruci |
gaLali BAjipa BImarUpA |
niLane nirmalamatiya karuNipudalavabOdhAKyA || 5 ||

Bavaja saMtApagaLa vanake |
avadhi karuNAkalitanE hRudayA |
lava SuBasmita porayuta vidyAKya maNikiraNA |
nivahadiM digdaSava beLaguva |
BuvanaruhanABana nivAsada |
lavirahita suKatIrthajaladhiye Samala pariharisO || 6 ||

baMdhakaMdipa BajakajanakA |
naMda poMdipa nuDiya ramaNane |
CaMdadiMdAMjaliya Siradali baMdhisuve BaradI |
iMdirAramaNana padAMbuja |
oMdu manadali Bajipa Bakutiya |
gaMdhavaha ninnaMGri Bajaneya BUri karuNipudU || 7 ||

Gana sarOruhamitra SaSalAM |
Cana samEtA naBanarAdhipa |
jana viBUtigaLuLLa vasumati divija BuvanagaLA |
jananaBaraNOddaLanagaLa kA |
raNada suBrUviBramavu he |
ddhanuja saMkara salilajAdyara satata mOhipudU || 8 ||

ninna yatirUpavanu pUjipa |
dhanyajanarAnaMdarUpadi |
ranna sahacaracalita cAmaracayadi SOBiparU |
Ganna dyuti tAruNya SuBa lA |
vaNya lIlApUrNa satiyara |
canna kuca saMSlESha janitAnaMda saMBararU || 9 ||

kuMdamaMdArAdi kusumada |
gaMdha saMgata maruta |
sahitAnaMda janakAnaMdavIvudu vanaruhAkShiyarA |
vRuMda saMsEvita niraMjana |
caMdra divasAdhISa madanA |
hIMdra surapati sEvyamahita mukuMdanaramaneyOL || 10 ||

dhiTTa kaTakaTa Sabdha SabalO |
dGaTTajani keMgiDigaLiMdati |
juShTa paMkila jariva suKabiMduvina tamadoLage |
spaShTavAditarAda Bavada na |
BIShTaranu saMtapta SilegaLa |
liTTu kuMdiparanavarata tvadBRutya janarugaLu || 11 ||

SrInivAsana sarasa caraNa |
dhyAna maMgaLamahita Bavadasa |
mAna sannidhi piDidu sumudAsIna mAnavanU |
j~jAnigOcara rahita duHKA |
dhIna suKa saMsAradoLu balu |
dUnanAgiha nitya nirayava nODaneMdeMdU || 12 ||

kShudadhikArdita rAkShasara Kara |
radana naKakShOBitAkSha |
madakShurAnana pakShivIkShitagAtra sahitaranU |
rudira pUyA kulita nAnA |
vidhada krimikula kalilatamadoLa |
gadhi nimagnara bAdhipavu pavi kalpa kujalUkA || 13 ||

janani janakAgraja hitaprada |
praNayaBara sarvAMtarAtmane |
jananamaraNAdigaLa jarisuva maruta jAhnaviyA |
janaka hariya apUrva ninnaya |
vanaja caraNadi vimala Bakutiyu |
dinadinadi yanagadhika karuNipudamita sadBOdhA || 14 ||

sakala sadguNagaNagaLiMdA |
dhika ramA saMSlEShi haripA |
da kamaladi tadBakta tAmarasOdBava samIrA |
maKa SatAmuKa tAratamyava |
yukutiyali tA tiLidu nirmala |
Bakuti BArava vahisuvana nammanila nI porevE || 15 ||

tattva suj~jAnigaLa nirmala |
muktiyOgya mahAnuBAvara |
satya suKakaidisuve miSraj~jAna janarugaLA |
suttisuve saMsAradali balu |
vattisuve mithyAmanIShara |
nitya nirayadaleMdu kELuve nAnu nigamagaLA || 16 ||

mahita pauruSha bAhuSAli vi |
rahita sarvAGauGa nirmala |
sahita bahula brahmacarya pramuKa dharmagaLA |
bahu sahOmaya Bajaka rahitava |
dahisuva pratidinadi mOhaka |
mahamahima hanumaMtadEvara rUpakAnamipE || 17 ||

Sata manIShane Samada paMcA |
Sata sahasra suyOjanagaLiM |
dati vidUra mahauShadhigaLuLLA girIMdravanU |
prathita nI taralAga gamisI |
kShiti dharEMdrana kittu taMdA |
pratima ninnanu nODdarA janaroMdu kShaNadoLagE || 18 ||

GanaguNAMBOnidhiye SatayO |
jana samunnata vistRutAcala |
vanu anAdaradiMdalogeyalu lIle mAtradalI |
anusarisi svasva sthaLagaLati |
Gana suSakala samEta suSilA |
gaNagaLuLLaddenise ninnaya kauSalake namipE || 19 ||

ninna muShTiyaliMda pEShita |
svarNamayavarma viBUShita |
cUrNitAsthigaLuLLa rAvaNanurava nODuvarU |
svarNagiri sutaTAka SaMkA |
pUrNarAguvarA sumuShTiyu |
banna kaLedu bahUnnatAnaMdagaLa koDadEnO || 20 ||

jAnaki mudrAdi dAnavu |
dAnavara dahanAdi sEnA |
SrENigati suprIta karuNASAli suKamAlI |
BAnukula sulalAma prEmA |
dhIna mAnasanAgi vanaruha |
sUnuvina SuBapadavanittanu ninage naLinAkShA|| 21 ||

mada bakana saMharisi ati vE |
gadi purasthita sarva janada su |
vidhRuti suKa viGnagaLa Baradali biDisi kAydideyO |
adhamatara durdhiShaNa duruLari |
gadhika kirmIrana raNAMgadi |
sadeda satkaurava kulEMdrane namipenanavaratA || 22 ||

atya yatnadaliMda kujarA |
patyanaMgAsthigaLa saMdhiga |
Lotti nirmathisalu surAri janOttamOttamanA |
arthiyali saMharise hari tA |
tRuptanAdanu eMtO A pari |
tRuptanAdane pELu rAjasUyASvamEdhadalI || 23 ||

siMhanAdadaliMda pUrita |
bahvanIkakShapaNa nipuNA |
raMhasada tvadraNava varNiparinnuMTE |
siMha saMhananAMga kamalA |
siMhanallade satata suvi |
rahitAMhasane nimmaMGri kamalakkeragi vaMdipenO || 24 ||

j~jAnadhanadAnilane ninnaya |
rANi vANiyu yenna manada – |
j~jAna kaLedu viSAla Bakutiya hariya mahimegaLa |
j~jAnavanu karuNisutalanudina |
hIna duritauGagaLa virahisa – |
lA narEMdrana kuvari ninnAj~jeya karuNadalI || 25 ||

BEda virahita bahu cidAnaM – |
dAdi guNa saMpUrNarenisida |
BEdavacanake gOcarisida viSESha baladiMdA |
mOdadali dvijabAhujOdita |
rAda vEdavyAsakRuShNara |
pAda paMkaja niruta ninnaya caraNakAnamipE || 26 ||

naMdadali saugaMdhikava tara |
laMdu pOgalu BImarUpada |
laMdadiMdAMjaneya kuvarana bAla dharisadalE |
kuMdidaMdadi tOriside A |
naMdatIratha danujamOhana |
naMdasAMdrane ninna cariteyu lIle kEvalavO || 27 ||

kuTila kaTumati kaTuka daityara |
kaThiNatara gadeyiMda kuMdisi |
niTilanEtrana nuDigaLiMdAjEya mAyigaLA |
diTane vAgbANagaLa nicayadi |
SaThara viSvAtathada vacanara |
truTiyu mIrade taridu taruNige kusuma nInittE || 28 ||

yugapadadi saMhRuta mahAsura |
rige migilu maNimaMta tAnati |
migilu kOpada vaSaganAgi mahaujasanE ninnA |
bageya janarAMtarake mOhava |
bageva bahuguNapUrNa harige |
viguNa jIvaikyavanu pELuva kumata racisidanU || 29 ||

avana durdhiShaNAnusAradi |
pavanapitage jIvaikyavanu pE |
Luva kuvAdava kelaru salisalu kelaranAdarisE |
pavana nInavatarisi vEgada |
lavaniyoLagA kumati duryyu |
ktyavaniruhagaLa dahisidyaprati dAva samanAgI || 30 ||

amitamahimane ninna vAKyA |
vimala paMcAnana ninAdava |
Bramisi kELuta Bayadi vadari nirASeyali jaridu |
Samita darpAkOparAgi |
Bramadi saMtatarenisi daSadiSe |
gamisi pOdaru mAyi gOmAyigaLu GaLigeyoLU || 31 ||

jaya suSIla supUrNa Saktiye |
jaya gurO janmatrayadalA |
maya vidUranE mAyijanaru vihiMsegoLisidarU |
Baya vidhura nirmala cidAnaMda |
mayane suKasaMdAyi nEtra |
traya muKarigadhipatiye mama suKavIvudAcArya || 32 ||

udayisuva maMdasmitada mRudu |
madhura sallApAKya sudheya |
tyadhika dhArAsEkadiM saMSAMta BavaSOkA |
sadamalara manOnayanadiM saM |
mudadi sEvitavAda ninnaya |
vadanacaMdravaneMdu nA nityadali nODuvenO || 33 ||

mOdatIrthane ninna vacanA |
svAdisuva bahu sukRuti janarA |
gAdha apEkShagaLa harasuta mOdavIyutalI |
sAdaradi SOBisuva ninnaya |
vEda vyAKyAnavanu saMtata |
bOdhapUrNane emma SravaNake gOcarisi salahO || 34 ||

ratunamaya pIThadali kuLitiha |
SatamanIShane BAvi vANI |
patiye ninnanu vaidikAdisu vidyadaBimAnI |
kratuBujaru sEviparu satatadi |
vitata ninnaya cariteyanu dE |
vate samAjadi gaMdharvaru pogaLutiharadakE || 35 ||

janma mRuti nirayAdi Baya BI |
ShaNa kusaMsArAMbunidhiyoL |
muNugidamala suyOgya janaranu nODi karuNadalI |
anila prArthitanAgi ninniM |
danunayadi mAramaNa mannisi |
janisidanu RuShiyiMda vAsaviyudadoLagamalA || 36 ||

adhama janariMdati tirOhita |
sadamalAgama tatige karuNadi |
budharigA mudavAha teradali sUtra racisidanU |
aduButAtma mahAnuBAvani |
geduru migilObbuMTE lOkadi |
badarikASramanilaya vEdavyAsagAnamipE || 37 ||

SrISanAj~jeya dharisi Siradali |
ISa garuDa SacISamuKara di |
vISa prArthane manake taMdu mahAmahima dEvA |
pOShisalu sajjanarigati tvara |
kASyapiyoLagavatarisi nI sa |
dBAShya viracisi KaMDisidi durBAShyagaLanellA || 38 ||

rajatapIThAhvaya puradi nI |
rajaBavane naDusadana nAmaka |
dvijana gRuhadali janisi mahamahimegaLa tOrutalI |
nija turiya ASramava dharisI |
prajarugaLanuddharisalupaniSha |
dvraja suBArata BAShyagaLa racisideyO karuNALU || 39 ||

vaMdisuve suravRuMdavaMdyane |
vaMdisuve jAhnaviya snAnada |
kiMtadhika puNyavanu caraNa sparuSa mALparigE |
poMdisuvanige vaMdisuve Bava |
baMdha harisuta suKava koDuvA |
naMdatIratha ninage aBivaMdisuvenanavaratA || 40 ||

SrISamarutara dAsa guhasuta |
kESava SrI BAratISara |
nI supadyagaLiMda stutisida tA suBakutiyalI |
tOShadiM paThisutta namisuva |
rASegaLa pUraisutIrvaru |
klESarahita sthAnavittu susauKyanuNisuvaru || 41 ||

SrI madhvESa kRuShNArpaNamastu !!

One response to “Harivayu stuti”

  1. R. ANANTHAPADMANABHAN Avatar

    PLEASE HELP US COPY THE LYRICS OF THE SONGS. OR SUGGEST HOW TO COPY THE LYRICS.

Leave a Reply

Your email address will not be published. Required fields are marked *

You might also like

error: Content is protected !!