Composer : Shri Gurujagannatha dasaru
ದಯಾನಿಧೆ ಶ್ರೀ ರಾಘವೇಂದ್ರ ಗುರುವೆ
ಕಾಮಿತ ಸುರತರುವೆ || ಪ ||
ಧರಾತಳದಿ ಸುರತರೂವ-ರೋಪಮ
ತ್ವರಾದಿ ಎನ್ನನು ಪೊರೇಯೊ ಗುರುವರ || ೧ ||
ಗಡಾನೆ ತವ ಪದ ಜಡಾಜ ಭಜಿಸುವ
ದೃಢಾ ಮತಿಯ ಕೊಡೊ ಒಡೇಯ ಗುರುವರ || ೨ ||
ಎಷ್ಟೋ ಪೇಳಲಿ ಕಷ್ಟಾ ರಾಶಿಗಳನ್ನು
ಸುಟ್ಟುಬಿಡೊ ಸರ್ವೋತ್ಕೃಷ್ಟ ಮಹಿಮ ಗುರು || ೩ ||
ಮೋಕ್ಷಾದಾಯಕ ಎನ್ನ ವೀಕ್ಷಿಸಿ ಮನೋಗತಾ
ಪೇಕ್ಷಾವ ಪೂರೈಸೊ ತ್ಯಕ್ಷಾದಿ ಸುಪ್ರೀತ || ೪ ||
ದಾತಾನೆ ನೀ ಎನ್ನ ಮಾತೂ ಲಾಲಿಸಿ ನಿತ್ಯ
ನೀತಾ ಗುರು ಜಗನ್ನಾಥ ವಿಠಲ ಪ್ರಿಯ || ೫ ||
dayAnidhe SrI rAGavEMdra guruve
kAmita surataruve || pa ||
dharAtaLadi suratarUva-rOpama
tvarAdi ennanu porEyo guruvara || 1 ||
gaDAne tava pada jaDAja bhajisuva
dRuDhA matiya koDo oDEya guruvara || 2 ||
eShTO pELali kaShTA rAshigaLannu
suTTubiDo sarvOtkRuShTa – mahima guru || 3 ||
mOkShAdAyaka enna vIkShisi manOgatA –
pEkShAva pUraiso tyakShAdi suprIta || 4 ||
dAtAne nI enna mAtU lAlisi nitya
nItA – guru jagannAtha viThala priya || 5 ||
Leave a Reply