Composer : Shri Anantadreesharu
ಭೊ ಯತಿವರದೇಂದ್ರ
ಶ್ರೀ ಗುರು ರಾಯ ರಾಘವೇಂದ್ರ |
ಕಾಯೊ ಎನ್ನ ಶುಭ ಕಾಯ ಭಜಿಸುವೆನು,
ಕಾಯ್ವ ತಾಪಕೆ ಚಂದ್ರ |ಅ.ಪ|
ನೇಮವು ಯೆನಗೆಲ್ಲಿ ಇರುವುದು
ಕಾಮಾಧಮನಲ್ಲಿ
ಶ್ರೀ ಮಹಾಮಹಿಮನೇ ಪಾಮರ ನಾ ನಿಮ್ಮ
ನಾಮ ಒಂದೆ ಬಲ್ಲೇ [೧]
ಕಂಡ ಕಂಡ ಕಡೆಗೆ
ತಿರುಗಿ ಭೆಂಡಾದೆನು ಕೊನೆಗೆ
ಕಂಡ ಕಂಡವರನು ಕೊಂಡಾಡುತ ನಿಮ್ಮ
ಕಂಡೆ ಕಟ್ಟ ಕಡೆಗೇ [೨]
ಮಂತ್ರವನಾರಿಯೇ ಶ್ರೀಮನ್
ಮಂತ್ರಾಲಯ ಧೊರೆಯೇ
ಅಂತರಂಗದೊಳು ನಿಂತು ಪ್ರೇರಿಸುವ
ಅನನ್ತಾದ್ರೀಶ ಧೊರೆಯೇ [೩]
bho yativaradEMdra
SrI guru rAya rAGavEMdra |
kAyo enna SuBa kAya Bajisuvenu,
kAyva tApake caMdra |a.pa|
nEmavu yenagelli iruvudu
kAmAdhamanalli
SrI mahAmahimanE pAmara nA nimma
nAma oMde ballE [1]
kaMDa kaMDa kaDege
tirugi BeMDAdenu konege
kaMDa kaMDavaranu koMDADuta nimma
kaMDe kaTTa kaDegE [2]
maMtravanAriyE SrIman
maMtrAlaya dhoreyE
aMtaraMgadoLu niMtu prErisuva
anantAdrISa dhoreyE [3]
Leave a Reply