Composer : Shri Varadesha vittala
ಯತಿಕುಲ ಮುಕುಟ ಶ್ರೀಜಯತೀರ್ಥ
ಸದ್ಗುಣಗಣ ಭರಿತ || ಪ ||
ಅತಿ ಸದ್ಭಕುತಿಲಿ ನುತಿಪ ಜನರ ಸಂ-
ತತ ಪಾಲಿಸುತಲಿ ಪೃಥಿವಿಲಿ ಮೆರೆವ || ಅ.ಪ ||
ಶ್ರೀಮಧ್ವಮತ ವಾರಿಧಿ ನಿಜಸೋಮ
ಅಗಣಿತ ಸನ್ಮಹಿಮ
ಆ ಮಹಾ ಭಕ್ತಾರ್ತಿಹ ನಿಷ್ಕಾಮ
ಮುನಿ ಸಾರ್ವಭೌಮ
ರಾಮ ಪದಾರ್ಚಕ ಈ ಮಹೀಸುರರನು
ಪ್ರೇಮದಿ ಪಾಲಿಪ ಕಾಮಿತ ಫಲದ || ೧ ||
ಮಧ್ವಮುನಿಗಳ ಗ್ರಂಥಕೆ ವ್ಯಾಖ್ಯಾನ
ರಚಿಸಿದ ಸುಜ್ಞಾನ
ವಿದ್ಯಾರಣ್ಯನ ಸದ್ವಾದದಿ ನಿಧನ
ಗೈಸಿದ ಸುಖ ಸದನ
ಅದ್ವೈತಾರ್ಣವಿ ದಗ್ಧ ಕೃತಾನಲ
ಸದ್ವೈಷ್ಣವ ಹೃತ್ ಪದ್ಮ ಸುನಿಲಯ || ೨ ||
ಲಲಿತ ಮಂಗಳವೇಢಿಪ ರಘುನಾಥ
ವನಿತಾ ಸಂಜಾತ
ನಿಲಯ ಮಳಖೇಡ ಕಾಗಿಣಿ ತೀರ ನಿ
ವಾಸ ಮಾಡಿಹ ಮೌನೀಶ
ನಲ ವರದೇಶವಿಠ್ಠಲನ ಒಲುಮೆಯ
ಇಳೆಯೊಳು ಬೋಧಿಪ ಅಲವಬೋಧಾಪ್ತಾ || ೩ ||
yatikula mukuTa SrIjayatIrtha –
sadguNagaNa Barita || pa ||
ati sadBakutili nutipa janara saM-
tata pAlisutali pRuthivili mereva || a.pa ||
SrImadhvamata vAridhi nijasOma –
agaNita sanmahima
A mahA BaktArtiha niShkAma –
muni sArvaBauma
rAma padArcaka I mahIsuraranu
prEmadi pAlipa kAmita Palada || 1 ||
madhvamunigaLa graMthake vyAKyAna –
racisida suj~jAna
vidyAraNyana sadvAdadi nidhana –
gaisida suKa sadana
advaitArNavi dagdha kRutAnala
sadvaiShNava hRut padma sunilaya || 2 ||
lalita maMgaLavEDhipa raGunAtha –
vanitA saMjAta
nilaya maLaKEDa kAgiNi tIra ni –
vAsa mADiha mounIsha
nala varadESaviThThalana olumeya
iLeyoLu bOdhipa alavabOdhAptA || 3 ||
Leave a Reply