Palisenna Parvati Pate

Composer : Mysore Srinivasa dasaru

By Smt.Nandini Sripad , Blore.

ಪಾಲಿಸೆನ್ನ ಪಾರ್ವತೀಪತೇ.. ಪಾವನಾತ್ಮ |
ಫಾಲನಯನ ಪುಣ್ಯ ಮೂರುತೇ || ಪ ||
ಶೂಲಿ ಪಂಚ ಮೌಳಿ ರುಂಡ |
ಮಾಲಿ ವರಕಪಾಲಿ ಚಂದ್ರ – |
ಮೌಳಿ ಸುರರ |
ಗೂಳಿ ಏರಿ ಮೆರೆವ… ಗುರುವೆ || ಅ ಪ ||

ಅಂಧಕಾರಿ ಅಜನ ಮೋಹದಾ |
ಕಂದ ಕರುಣಿ – |
ಸೆಂದು ನಿನಗೆ ವಂದಿಪೆ ಸದಾ ||
ವಂದಿಸೂವ ಭಕ್ತ ಜನರ |
ಬಂಧುವೆಂದು ನಿನ್ನ ಪಾದ – |
ದ್ವಂದ್ವ ವಂದಿಸೂವೆ |
ತಂದೆ ವಿಷಯ ಬಂಧ ಕಡಿಯೋ || ೧ ||

ಭೀಮ ಭವ ಭಯಾರ್ತಿ ನಾಶನಾ | ಭೂತಿರಾಯ |
ವ್ಯೋಮಕೇಶ ವಿನುತ ದುರ್ಮನಾ ||
ರಾಮನಾಮ ಜಪ ಸರಾವ |
ಪ್ರೇಮದಿಂದ ಧರಿಸಿ ಮೆರೆವ |
ವಾಮದೇವ ವಹಿಲದಿಂದ ನಿ |
ಸ್ಸೀಮ ಸುಗುಣಧಾಮ ರಾಮ || ೨ ||

ಮಾತರೀಶ್ವನಿಗೆ ಪ್ರಿಯತಮ |
ಶಿಷ್ಯ ಶರಣ – |
ವ್ರಾತಕತಿ ನೀನೆ ಸುರದ್ರುಮ ||
ಭೂತನಾಥ ಭುವನ ತಾತ |
ದಾತ ಶ್ರೀಜಯವಿಠಲನಂಘ್ರಿ |
ಆತಪತ್ರದಿಂದ ಮೆರೆವ |
ಪಿಡಿಯೊ ತೀವ್ರ ಎನ್ನ ಕರವ || ೩ ||


pAlisenna pArvatIpatE.. pAvanAtma |
PAlanayana puNya mUrutE || pa ||
SUli paMca mauLi ruMDa |
mAli varakapAli caMdra – |
mauLi surara |
gULi Eri mereva… guruve || a pa ||

aMdhakAri ajana mOhadA |
kaMda karuNi – |
seMdu ninage vaMdipe sadA ||
vaMdisUva Bakta janara |
baMdhuveMdu ninna pAda – |
dvaMdva vaMdisUve |
taMde viShaya baMdha kaDiyO || 1 ||

BIma Bava BayArti nASanA | BUtirAya |
vyOmakESa vinuta durmanA ||
rAmanAma japa sarAva |
prEmadiMda dharisi mereva |
vAmadEva vahiladiMda ni |
ssIma suguNadhAma rAma || 2 ||

mAtarISvanige priyatama |
SiShya SaraNa – |
vrAtakati nIne suradruma ||
BUtanAtha Buvana tAta |
dAta SrIjayaviThalanaMGri |
AtapatradiMda mereva |
piDiyo tIvra enna karava || 3 ||

Leave a Reply

Your email address will not be published. Required fields are marked *

You might also like

error: Content is protected !!