Shivane Durvasa Suladi

Composer : Shri Purandara dasaru

By Smt.Nandini Sripad , Blore..

” ಶಿವನೆ ದುರ್ವಾಸ ಕಾಣಿರೊ ” , ಸುಳಾದಿ ,
ಶ್ರೀಪುರಂದರದಾಸರ ರಚನೆ , ರಾಗ: ಸಾರಂಗ

ಧ್ರುವ ತಾಳ
ಶಿವನೆ ದುರ್ವಾಸ ಕಾಣಿರೊ ಅಯ್ಯೊ
ಶಿವನೆ ಶುಕಯೋಗಿ ಕಾಣಿರೊ |
ಶಿವನೆ ಅಶ್ವತ್ಥಾಮ ಕಾಣಿರೊ ಶಿವನೆ
ಜೈಗೀಶವ್ಯ
ಶಿವಗುತ್ಪತ್ತಿ ಸ್ತಿಥಿಯಿಲ್ಲೆಂಬರೇನಂಬೆ |
ಶಿವನಾದಿಯಲ್ಲಿ ಬೊಮ್ಮನ ಸುತ |
ಆ ಬೊಮ್ಮನಾದಿಯಲಿ ಅಚ್ಚ್ಯುತನ ಸುತ |
ಪುರಂದರವಿಠಲ ಒಬ್ಬನೆ ಅಜ ತಾ
ಶಿವನೆ ದುರ್ವಾಸ ಕಾಣಿರೊ ||೧||

ಮಟ್ಟ ತಾಳ
ಹರಿಶಂಕರರೊಳಗೆ ಉತ್ತಮರಾರೆಂದು |
ಪರೀಕ್ಷಿಸಬೇಕೆಂದು ಆದಿ ಯುಗದಲ್ಲಿ |
ಸರಸಿಜ ಸಂಭವಾದಿ ಸುರಪತಿ ಸುರರು |
ಸಾರಂಗ ಪಿನಾಕಿ ಗಳಿಂದೆಚ್ಚಾಡಿರೆನಲು |
ಹರಿ ಸಾರಂಗವನೆತ್ತಿದ ಏರಿಸಿದ ಶಂ-
ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ |
ಹರಿಯಾಡಿಸಲಾಡುವರಜ ಭವಾದಿಗಳು
ಸಿರಿ ಪುರಂದರ ವಿಠಲನೆ
ಸರ್ವೋತ್ತಮ ಕಾಣಿರೋ ||೨||

ರೂಪಕ ತಾಳ
ಜನಕನ ಮನೆಯಲ್ಲಿ
ಮುರಿಸಿಕೊಂಡ ಬಿಲ್ಲು |
ಶಿವನ ಬಿಲ್ಲೆಂದರಿಯಿರೊ
ಹರನ ಬಿಲ್ಲೆಂದರಿಯಿರೊ |
ಸುರಾಸುರರ ಭಂಗ
ಬಡಿಸಿದ ಬಿಲ್ಲು |
ಪುರಂದರ ವಿಠಲ
ರಾಮಚಂದ್ರ ಮುರಿದ ಬಿಲ್ಲು ||೩||

ಅಟ್ಟ ತಾಳ
ಬಾಣಾಸುರನ ಭಕುತಿಗೊಲಿದು ಬಂದು |
ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು |
ಬಾಹು ಸಹಸ್ರವ ಕಡಿಯುವಾಗ |
ಬೇಕು ಬೇಡೊಂದೊಮ್ಮೆ ಎಂದನೆ ಶಿವನು |
ಪುರಂದರವಿಠಲ
ಪರದೈವವೆಂದರಿತ ಕಾರಣ |
ಒಪ್ಪಿಸಿಯೇ ಕೊಟ್ಟಾ ಶಿವನು ||೪||

ತ್ರಿವಿಡಿ ತಾಳ
ವಿಷ್ಣು ಸಹಸ್ರ ನಾಮಗಳ ಶಿವ
ಜಪಿಸಿ ಉಪದೇಶಿಸುವ ಗೌರಿಗೆ |
ವಿಷ್ಣು ಸಹಸ್ರನಾಮಗಳ ಸಮ
ರಾಮರಾಮೆಂದು ಭಕ್ತಿ ಭರದಲಿ |
ವಿಷ್ಣು ಪುರಂದರವಿಠಲ ರಾಯನ
ಅತ್ಯಧಿಕ ಪ್ರಿಯನು ಉಮೇಶನು ||೫||

ಝಂಪೆ ತಾಳ
ರಾಮ ವಿಶ್ವರೂಪವ ಕಂಡು ಶಂಕರ |
ರಾಮನೇ ಪರದೈವ ರಾಮನೇ ಪರದೈವ |
ರಾಮನೆ ಎಂದು ಸ್ತುತಿಸಿದ ಕಾರಣ |
ರಾಮನೇ ಪರದೈವ ರಾಮಚಂದ್ರ ಸಿರಿ
ಪುರಂದರವಿಠಲ ||೬||

ಏಕ ತಾಳ
ಮಣಿಕರ್ಣಿಕೆ ತೀರಥದಲ್ಲಿ
ಮುಮುಕ್ಷುಗಳಿಗೆ ಉಪದೇಶಿಸುವ |
ತಾರಕ ಬ್ರಹ್ಮ ಸ್ವರೂಪ ಆ ರಾಮನೆ ಕಾಣಿರೊ |
ರಾಮನಾಮ ಮಂತ್ರವ
ಪುರಂದರ ವಿಠಲರಾಯಗೆ |
ಬಲ್ಲರಿಯ ಸದಾಶಿವ ||೭||

ಜತೆ
ಜಗಕೆ ಶ್ರೀ ಅಜಭವಾದಿಗಳು ಗುರುಗಳು |
ಜಗಕೆ ಶ್ರೀ ಪುರಂದರ ವಿಠಲನೆ ದೈವ ||


” Sivane durvAsa kANiro ” , suLAdi ,
SrIpuraMdaradAsara racane , rAga: sAraMga

dhruva tALa
Sivane durvAsa kANiro ayyo
Sivane SukayOgi kANiro |
Sivane aSvatthAma kANiro Sivane
jaigeeshavya
Sivagutpatti stithiyilleMbarEnaMbe |
SivanAdiyalli bommana suta |
A bommanAdiyali accyutana suta |
puraMdaraviThala obbane aja tA
Sivane durvAsa kANiro ||1||

maTTa tALa
hariSaMkararoLage uttamarAreMdu |
parIkShisabEkeMdu Adi yugadalli |
sarasija saMBavAdi surapati suraru |
sAraMga pinAki gaLiMdeccADirenalu |
hari sAraMgavanettida Erisida SaM-
kara niScEShTitanAgidda kANirU |
hariyADisalADuvaraja BavAdigaLu
siri puraMdara viThalane
sarvOttama kANirO ||2||

rUpaka tALa
janakana maneyalli
murisikoMDa billu |
Sivana billeMdariyiro
harana billeMdariyiro |
surAsurara BaMga
baDisida billu |
puraMdara viThala
rAmachaMdra murida billu ||3||

aTTa tALa
bANAsurana Bakutigolidu baMdu |
avana bAgila kAydudillave Sivanu |
bAhu sahasrava kaDiyuvAga |
bEku bEDoMdomme eMdane Sivanu |
puraMdaraviThala
paradaivaveMdarita kAraNa |
oppisiyE koTTA Sivanu ||4||

triviDi tALa
viShNu sahasra nAmagaLa Siva
japisi upadESisuva gaurige |
viShNu sahasranAmagaLa sama
rAmarAmeMdu Bakti Baradali |
viShNu puraMdaraviThala rAyana
atyadhika priyanu umESanu ||5||

JaMpe tALa
rAma viSvarUpava kaMDu SaMkara |
rAmanE paradaiva rAmanE paradaiva |
rAmane eMdu stutisida kAraNa |
rAmanE paradaiva rAmacaMdra siri
puraMdaraviThala ||6||

Eka tALa
maNikarNike tIrathadalli
mumukShugaLige upadESisuva |
tAraka brahma svarUpa A rAmane kANiro |
rAmanAma maMtrava
puraMdara viThalarAyage |
ballariya sadASiva ||7||

jate
jagake SrI ajaBavAdigaLu gurugaLu |
jagake SrI puraMdara viThalane daiva ||

Leave a Reply

Your email address will not be published. Required fields are marked *

You might also like

error: Content is protected !!