ಶ್ರೀ ಮಹದೇವರ ಸ್ತೋತ್ರಸುಳಾದಿ –
ಅಭಿನವ ಪ್ರಾಣೇಶವಿಠಲರ ರಚನೆ.
ರಾಗ: ಮೋಹನ
ಧ್ರುವತಾಳ
ಗಜ ಅಜನಾಂಬರ ಅಜಗವರಮಂದಿರ
ದ್ವಿಜ ರವಿ ಸುರಗಣ ವದನಾಕ್ಷ ವಿರೂಪಾಕ್ಷ
ಗಜ ಋಷಿಯಾಂಬಕ ತ್ರಿಯಾಂಬಕ
ಗಜ ದನು ಚೌರಾತಿ ಭೂಷಿತ ವಿಭೂತಿ
ಕುಜದಾತ ಸದ್ಭಕ್ತ ಕುಜನ ಕುಠಾರನೆ
ನಿಜ ಮಹಾಸ್ಮಶಾನವಾಸ ಭೂತೇಶನೇ
ತ್ರಿಜಗ ಪಾವನ ಗಂಗಾಧರ ದೇವನೆ
ಅಜಪಿತಭಿನವ ಪ್ರಾಣೇಶವಿಠಲನ
ನಿಜದಾಸ ಗೌರೀಶ ಕೈಲಾಸವಾಸ || ೧ ||
ಮಟ್ಟತಾಳ
ಕವಿಗಣ ಪರಿಪಾಲ ಈಶ ಕಾಲ ಕಾಲ
ಭವಭಯನಾಶಕನೆ ಭವಿಗಣ ಪೋಷಕನೆ
ಸುವಿಶಾಲ ಸುಮಹಿಮ ಸುಮಗೋಲ ವಿರಾಮ
ಪವನ ಸಪ್ತವಿನುತ ಪವನಪ ತನುಜಾತ
ಕವಿಗೇಯ ಅಭಿನವ ಪ್ರಾಣೇಶವಿಠಲನ
ಜಾವ ಜಾವಕೆ ಭಜಿಪ ಭಾಗ್ಯ ಕೊಡು ಶಂಭು || ೨ ||
ತ್ರಿಪುಟತಾಳ
ಅಗಜೆ ಮನೋಹರ ಅಘಹರಣ ನಗಚಾಪ
ತ್ರಿಗುಣೋತ್ತಮ ಕಾಯ ವಿಗತ ಮಾಯಾಮೃಗ
ಡಮರುಗ ತ್ರಿಶೂಲ ಖಟವ ಪಾಣಿ
ನಿಗಮ ತುರಗ ಭೂರಥ ವೇದಸಾರಥಿ
ನಗಧರ ಶರ ಮುಪ್ಪುರಹರನೆ
ಜಗದೀಶ ಅಭಿನವ ಪ್ರಾಣೇಶವಿಠಲನ
ಹಗಲಿರುಳು ಪೊಗಳಿ ನರ್ತಿಪ ದೇವದೇವ || ೩ ||
ಅಟ್ಟತಾಳ
ಗರಳಕಂಠನೆ ಶಿವ ಹರ ಹರ ಮಹಾದೇವ
ದೂರ್ವಾಸ ಜಿತಕಾಮ ದ್ರೌಣಿ ಅಶ್ವತ್ಥಾಮ
ಪರಮ ಭಾಗವತ ಶಿರೋಮಣಿ ಶುಕಮುನಿ
ಪರಮ ವೈರಾಗ್ಯಧಿಪತಿ ಶಂಭೊ ಪಶುಪತಿ ಕ್ಷಿತಿ
ಧರ ಸ್ಮರಹರ ಸುರವರ ಶಂಕರ
ಸಿರಿವರ ಅಭಿನವ ಪ್ರಾಣೇಶವಿಠಲನ
ಚರಣ ವಾರಿಜಭೃಂಗ ಭಕ್ತಾಂತರಂಗ || ೪ ||
ಆದಿತಾಳ
ತಾರಕ ಮಂತ್ರುಪದೇಶಕ ಗುರುವರ
ಶೀರಜ ಪತಿ ಪದ ವಾರಿಜ ಮಧುಕರ
ಘೋರ ಭವಾಂಬುಧಿ ತಾರಕ ಪುರಹರ ವರ
ಶ್ರೀರಮಣಭಿನವ ಪ್ರಾಣೇಶವಿಠಲನ
ಚಾರು ಚರಣಗಳಲ್ಲಿ ಮನವ ನಿಲ್ಲಿಸು ಜೀಯಾ || ೫ ||
ಜತೆ
ವೈರಾಗ್ಯಾಧಿಪ ನಿಜ ವೈರಾಗ್ಯ ಕರುಣಿಸು
ಶ್ರೀರಾಗಭಿನವ ಪ್ರಾಣೇಶವಿಠಲನ ಸಖನೆ ||೬||
SrI mahadEvara stOtrasuLAdi –
aBinava prANESaviThalara racane.
rAga: mOhana
dhruvatALa
gaja ajanAMbara ajagavaramaMdira
dvija ravi suragaNa vadanAkSha virUpAkSha
gaja RuShiyAMbaka triyAMbaka
gaja danu caurAti BUShita viBUti
kujadAta sadBakta kujana kuThArane
nija mahAsmaSAnavAsa BUtESanE
trijaga pAvana gaMgAdhara dEvane
ajapitaBinava prANESaviThalana
nijadAsa gaurISa kailAsavAsa || 1 ||
maTTatALa
kavigaNa paripAla ISa kAla kAla
BavaBayanASakane BavigaNa pOShakane
suviSAla sumahima sumagOla virAma
pavana saptavinuta pavanapa tanujAta
kavigEya aBinava prANESaviThalana
jAva jAvake Bajipa BAgya koDu SaMBu || 2 ||
tripuTatALa
agaje manOhara aGaharaNa nagacApa
triguNOttama kAya vigata mAyAmRuga
Damaruga triSUla KaTava pANi
nigama turaga BUratha vEdasArathi
nagadhara Sara muppuraharane
jagadISa aBinava prANESaviThalana
hagaliruLu pogaLi nartipa dEvadEva || 3 ||
aTTatALa
garaLakaMThane Siva hara hara mahAdEva
dUrvAsa jitakAma drauNi aSvatthAma
parama BAgavata SirOmaNi Sukamuni
parama vairAgyadhipati SaMBo paSupati kShiti
dhara smarahara suravara SaMkara
sirivara aBinava prANESaviThalana
caraNa vArijaBRuMga BaktAMtaraMga || 4 ||
AditALa
tAraka maMtrupadESaka guruvara
SIraja pati pada vArija madhukara
GOra BavAMbudhi tAraka purahara vara
SrIramaNaBinava prANESaviThalana
cAru caraNagaLalli manava nillisu jIyA || 5 ||
jate
vairAgyAdhipa nija vairAgya karuNisu
SrIrAgaBinava prANESaviThalana saKane ||6||
Leave a Reply