Akka Kele

Composer : Shri Kakhandaki Krishna dasaru

Smt.Viraja

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ
ಮುಕ್ಕಣ್ಣಗೀವರಂತೆ || ಪ ||

ಮೂರ್ಖನೊ ಗಿರಿರಾಜ ವಿಗಡ ಮುನಿ |
ಮಾತನು ಲೆಕ್ಕಿಸಿ ಮದುವೆ ಮಾಡಿ ಕೊಟ್ಟನಂತೆ || ಅ. ಪ. ||

ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |
ತಿಲಕ ಫಣೆಗೆ ಬಾಲ ಚಂದ್ರನಂತೆ |
ಹೊಳೆವ ಕಿಡಿಗಣ್ಣಂತೆ | ಕಂದು ಗೊರಳನಂತೆ |
ಸಲೆ ರುಂಡ ಮಾಲೆಯ ಕೊರಳಿಗ್ಹಾಕಿಹನಂತೆ || ೧ ||

ಉರಗ ಭೂಷಣನಂತೆ | ಭಸ್ಮ ಲೇಪನನಂತೆ |
ಕರಿಯ ಚರ್ಮಾಂಬರ ಉಡುಗೆಯಂತೆ |
ತಿರಿದುಂಬುವನಂತೆ | ಬಿಳಿಯ ಮೈಯವನಂತೆ |
ನಿರುತ ಡಮರು ಬಾರಿಸುವ ಜೋಗಿಯಂತೆ || ೨ ||

ಹಡೆದವಳಿಲ್ಲವಂತೆ | ಎತ್ತನೇರುವನಂತೆ |
ಅಡವಿ ಗಿರಿಗಳಲ್ಲಿ ಇಪ್ಪನಂತೆ |
ಒಡನೆ ಹುಲಿದೊಗಲದ ಹಾಸಿಗೆ ಇಹುದಂತೆ |
ನುಡಿಗೊಮ್ಮೆ ರಾಮ ಎಂಬ ಸ್ಮರಣೆಯಂತೆ || ೩ ||

ಮಾರನ್ನ ರಿಪುವಂತೆ ಐದು ಮೋರೆಗಳಂತೆ |
ಯಾರೂ ಇಲ್ಲದ ಪರದೇಶಿಯಂತೆ|
ಧಾರುಣಿಯೊಳು ಗುರು ಮಹಿಪತಿ ಸುತ ಪ್ರಭು |
ಭವ ತಾರಕ ಶಿವನೆಂದು ಮೊರೆ ಹೋಗಬೇಕಂತೆ || ೪ ||


akka kELe ninna tapasiyaroLagobba
mukkaNNagIvaraMte || pa ||

mUrKano girirAja vigaDa muni |
mAtanu lekkisi maduve mADi koTTanaMte || a. pa. ||

tale ella jaDeyaMte | adaroLage jalavaMte |
tilaka PaNege bAla caMdranaMte |
hoLeva kiDigaNNaMte | kaMdu goraLanaMte |
sale ruMDa mAleya koraLig~hAkihanaMte || 1 ||

uraga BUShaNanaMte | Basma lEpananaMte |
kariya carmAMbara uDugeyaMte |
tiriduMbuvanaMte | biLiya maiyavanaMte |
niruta Damaru bArisuva jOgiyaMte || 2 ||

haDedavaLillavaMte | ettanEruvanaMte |
aDavi girigaLalli ippanaMte |
oDane hulidogalada hAsige ihudaMte |
nuDigomme rAma eMba smaraNeyaMte || 3 ||

mAranna ripuvaMte aidu mOregaLaMte |
yArU illada paradESiyaMte|
dhAruNiyoLu guru mahipati suta praBu |
Bava tAraka SivaneMdu more hOgabEkaMte || 4 ||

Leave a Reply

Your email address will not be published. Required fields are marked *

You might also like

error: Content is protected !!