Indira deviya ramana baa

Composer : Shri Mohana dasaru

By Smt.Shubhalakshmi Rao

ಹಸೆಗೆ ಕರೆಯುವ ಹಾಡು:

ಇಂದಿರಾ ದೇವಿಯ ರಮಣ ಬಾ,
ವೃಂದಾರಕ ಮುನಿ ವಂದ್ಯ ಬಾ,
ಸಿಂಧು ಶಯನ ಗೋವಿಂದ
ಸದಮಲಾನಂದ ಬಾ,
ತಂದೆಯ ಕಂದ ಬಾ ,
ಮಾವನಾ ಕೊಂದ ಬಾ,
ಗೋಪಿಯಕಂದ ಬಾ,
ಹಸೆಯ ಜಗುಲಿಗೇ, ಶೋಭಾನೆ [ಅ.ಪ]

ಕೃಷ್ಣವೇಣಿಯ ಪಡೆದವನೆ ಬಾ,
ಕೃಷ್ಣನ ರಥ ಹೊಡೆದವನೆ ಬಾ,
ಕೃಷ್ಣೆಯ ಕಷ್ಟವ ನಷ್ಟವ
ಮಾಡಿದ ಕೃಷ್ಣ ಬಾ ||
ಯದುಕುಲ ಶ್ರೇಷ್ಠ ಬಾ,
ಸತತ ಸಂತುಷ್ಟನೆ ಬಾ,
ಉಡುಪೀಯ ಕೃಷ್ಣ ಬಾ,
ಹಸೆಯ ಜಗುಲಿಗೇ, ಶೋಭಾನೆ (೧)

ಕ್ಷೀರವಾರಿಧಿ ಕುವರಿ ಬಾ,
ಸಾರಿದವರಿಗಾಧಾರಿ ಬಾ,
ಮಾರ ಜನನಿ ನಾಗಾರಿ ವಂದ್ಯಳೆ
ಹೊಂತಕಾರಿ ಬಾ ||
ಬಲು ದುರಿತಾರಿ ಬಾ,
ಬಹು ವೈಯ್ಯಾರಿ ಬಾ,
ಸುಂದರ ನಾರೀ ಬಾ,
ಹಸೆಯ ಜಗುಲಿಗೇ, ಶೋಭಾನೆ (೨)

ಶ್ರೀ ಭೂ ದುರ್ಗಾಂಭ್ರಣಿಯೆ ಬಾ,
ಶೋಭನ ಗುಣ ಮಣಿ ಖಣಿಯೇ ಬಾ,
ಸೌಭಾಗ್ಯದ ಪನ್ನಗವೇಣಿ ಬಾ ||
ಪರಮ ಕಲ್ಯಾಣಿ ಬಾ,
ನಿಗಮಾಭಿಮಾನೀ ಬಾ,
ಭಾಗ್ಯದ ನಿಧಿಯೇ ಬಾ,
ಹಸೆಯ ಜಗುಲಿಗೇ, ಶೋಭಾನೆ (೩)

ಪತಿಯಲ್ಲಿ ಅವತರಿಸಿದವಳೆ ಬಾ,
ಪತಿಯ ಸಂಗಡ ಜನಿಸಿದವಳೇ ಬಾ,
ಸದ್ಗುಣವತಿಯೇ ಬಾ ||
ಪತಿತ ಪಾವನ ಸಿರಿ ಮೋಹನ
ವಿಠಲನ ಸತಿಯೇ ಬಾ,
ವೇದಾವತಿಯೇ ಬಾ,
ಬಲು ಪತಿವ್ರತೆಯೇ ಬಾ,
ಹಸೆಯ ಜಗುಲಿಗೇ, ಶೋಭಾನೆ (೪)


hasege kareyuva hADu:

iMdirA dEviya ramaNa bA,
vRuMdAraka muni vaMdya bA,
siMdhu Sayana gOviMda
sadamalAnaMda bA,
taMdeya kaMda bA ,
mAvanA koMda bA,
gOpiyakaMda bA,
haseya jaguligE, shObhAne [a.pa]

kRuShNavENiya paDedavane bA,
kRuShNana ratha hoDedavane bA,
kRuShNeya kaShTava naShTava
mADida kRuShNa bA ||
yadukula SrEShTha bA,
satata saMtuShTane bA,
uDupIya kRuShNa bA,
haseya jaguligE, shObhAne (1)

kShIravAridhi kuvari bA,
sAridavarigAdhAri bA,
mAra janani nAgAri vaMdyaLe
hoMtakAri bA ||
balu duritAri bA,
bahu vaiyyAri bA,
suMdara nArI bA,
haseya jaguligE, shObhAne (2)

SrI bhU durgAMBraNiye bA,
SOBana guNa maNi KaNiyE bA,
sauBAgyada pannagavENi bA ||
parama kalyANi bA,
nigamABimAnI bA,
BAgyada nidhiyE bA,
haseya jaguligE, shObhAne (3)

patiyalli avatarisidavaLe bA,
patiya saMgaDa janisidavaLE bA,
sadguNavatiyE bA ||
patita pAvana siri mOhana
viThalana satiyE bA,
vEdAvatiyE bA,
balu pativrateyE bA,
haseya jaguligE, shObhAne (4)

Leave a Reply

Your email address will not be published. Required fields are marked *

You might also like

error: Content is protected !!