Pahi Paramananda

Composer : Shri Helavanakatte Giriyamma

By Smt.Shubhalakshmi Rao

ಪಾಹಿ ಪರಮಾನಂದ ಪಾಹಿ ಮುನಿಜನ ವಂದ್ಯ
ಪಾಹಿ ಖಳಜನ ಬಾಧ ಪಾಹಿ ಗೋವಿಂದ || ಪ.||

ಪಾಹಿ ಗೋಪಿಯನಾಥ ಪಾಹಿ ಮನ್ಮಥ ತಾತ
ಪಾಹಿ ಲಕ್ಷ್ಮೀಕಾಂತ ಪಾಹಿ ಭೂಕಾಂತ ||ಅ.ಪ.||

ಮತ್ಸ್ಯರೂಪಿಲಿ ಬಂದು ಬಲಿದ ದೈತ್ಯನ ಕೊಂದೆ
ಬೆಚ್ಚರದೆ ಬಹು ಗಿರಿಯ ಬೆನ್ನಲ್ಲಿ ತಾಳ್ದೆ
ಬಚ್ಚಿಟ್ಟ ಧರಣಿಯನ್ನು ಒಲುಮೆಯಿಂದಲಿ ತಂದೆ
ಅರ್ಚಿಸಿದ ಪ್ರಹ್ಲಾದಗೆ ಒಲಿದೆ ನರಸಿಂಹ [೧]

ಕುಬ್ಜ ರೂಪಿಲಿ ನೆಲನ ಬೇಡಿ ಬಲಿಯನು ತುಳಿದೆ, ಪಿತನಾಡಿದ
ಶಬ್ದವನ್ನು ಕೇಳಿ ಮಾತೆಯ ಶಿರವನಳಿದೆ
ಕೊಬ್ಬಿದ್ದ ರಾವಣನ್ನ ಕಂದರವ ಖಂಡಿಸಿದೆ
ಅಬ್ಜಮುಖಿ ಜಾನಕಿಯನಾಳಿದೆ ಶ್ರೀರಾಮ [೨]

ತುರುಹಿಂಡ ಕಾಯ್ದು ತಪವಳಿದು ಪತಿವ್ರತೆಯರ
ಭರದಿ ವಾಜಿಯನೇರಿ ಚರಿಸುತ್ತ ಬಂದೆ
ಕರುಣಾಳು ಶ್ರೀ ಹೆಳವನಕಟ್ಟೆ ರಂಗಯ್ಯ
ಪಿಳ್ಳಂ-ಗಿರಿ ವಾಸ ಶ್ರೀ ವೆಂಕಟೇಶ [೩]


pAhi paramAnaMda pAhi munijana vaMdya
pAhi KaLajana bAdha pAhi gOviMda || pa.||

pAhi gOpiyanAtha pAhi manmatha tAta
pAhi lakShmIkAMta pAhi BUkAMta ||a.pa.||

matsyarUpili baMdu balida daityana koMde
beccarade bahu giriya bennalli tALde
bacciTTa dharaNiyannu olumeyiMdali taMde
arcisida prahlAdage olide narasiMha [1]

kubja rUpili nelana bEDi baliyanu tuLide, pitanADida
Sabdavannu kELi mAteya SiravanaLide
kobbidda rAvaNanna kaMdarava KaMDiside
abjamuKi jAnakiyanALide SrIrAma [2]

turuhiMDa kAydu tapavaLidu pativrateyara
Baradi vAjiyanEri carisutta baMde
karuNALu SrI heLavanakaTTe raMgayya
piLLaM-giri vAsa SrI veMkaTESa [3]

Leave a Reply

Your email address will not be published. Required fields are marked *

You might also like

error: Content is protected !!