Narayana Narayana

Composer : Shri Purandara dasaru

By Smt.Shubhalakshmi Rao

ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣನ್ಯಾರೆ ಪೇಳೆ ಸಖಿ |ಪ|

ಕ್ಷೀರಸಾಗರದಲ್ಲಿ ಶಯನವ ಮಾಡಿದ
ಆದಿನಾರಾಯಣ ನೋಡೆ ಸಖಿ |ಅ.ಪ.|

ಕಾಲಿಲ್ಲದಲೆ ಓಡಿ ಎವೆ ಇಕ್ಕದಲೆ ನೋಡಿ
ಮಿಂಚಿನಂತೆ ಹೊಳೆಯುವನ್ಯಾರೆ ಸಖಿ
ವೇದವ ತಂದು ಸುರರಿಗೆ ಕೊಟ್ಟಂಥ
ಮತ್ಸ್ಯಾವತಾರನ್ನ ನೋಡೆ ಸಖಿ (೧)

ತಲೆಯ ತಗ್ಗಿಸುವನು ಕಡಳೊಳು ಆಡುವ
ಕಡೆದರೆ ಕಡಗೋಲನ್ಯಾರೆ ಸಖಿ
ಸುರರು ದೈತ್ಯರು ಕೂಡಿ ಶರಧಿಯ ಮಥಿಸಲು
ಕೂರ್ಮಾವತಾರನೆ ಇಂದುಮುಖಿ (೨)

ಮಾರಿ ತಗ್ಗಿಸುವನು ಮಣ್ಣು ಚಿಮ್ಮಿ ಆಡುವ
ಕೋರೆದಾಡೆಯವ ಇವನ್ಯಾರೆ ಸಖಿ
ದುರುಳನ್ನ ಕೊಂದು ಧರಣಿಯ ತಂದಂಥ
ವರಾಹಾವತಾರನೆ ವಾರಿಜಾಕ್ಷಿ (೩)

ಕಂಬದಿಂದಲಿ ಬಂದು ಕರುಳನು ಬಗೆದು
ಕೊರಳೊಳು ಹಾಕಿದವನ್ಯಾರೆ ಸಖಿ
ನರಮೃಗ ರೂಪದಿ ಉದರವ ಸೀಳಿದ
ನಾರಸಿಂಹನ ರೂಪ ನೋಡೆ ಸಖಿ (೪)

ಪುಟ್ಟ ಪಾದದಿಂದ ಸೃಷ್ಟಿಯನ್ನಳೆವ
ದಿಟ್ಟ ಬ್ರಹ್ಮಚಾರಿ ಯಾರೆ ಸಖಿ
ಕೊಟ್ಟಿದ್ದು ಸಾಲದೆ ಮೆಟ್ಟಿದ ಶಿರವನ್ನು
ಪುಟ್ಟ ವಾಮನರೂಪ ನೋಡೆ ಸಖಿ (೫)

ಕೋಪದಿಂದಲಿ ಬಂದು ಕೊಡಲಿಯನ್ನೆ ಪಿಡಿದು
ಕುಲವನ್ನೇ ಸವರಿದನ್ಯಾರೆ ಸಖಿ
ರಕ್ತದೊಳಗೆ ಸ್ನಾನ ತರ್ಪಣ ಮಾಡಿದ
ವಿಪ್ರ ಭಾರ್ಗವ ರಾಮ ನೋಡೆ ಸಖಿ (೬)

ಶೀಘ್ರದಿಂದಲಿ ಬಂದು ಶಬರಿ ಎಂಜಲನುಂಡು
ಸೇತುವೆ ಕಟ್ಟಿದವನ್ಯಾರೆ ಸಖಿ
ಕೌಸಲ್ಯೆಯ ಉದರದಿ ಶಿಶುವಾಗಿ ಜನಿಸಿದ
ದಶರಥ ರಾಮನ್ನ ನೋಡೆ ಸಖಿ (೭)

ಬ್ರಹ್ಮಾಂಡದೊಳಗೆಲ್ಲ ಬಂಡಿಯ ಹೊಡೆದೊನು
ಪಾರ್ಥಸಾರಥಿ ಇವನ್ಯಾರೆ ಸಖಿ
ಮಥುರೆಯಲ್ಲಿ ಹುಟ್ಟಿ ಗೋಕುಲದಿ ಬೆಳೆದ
ಗೋಪಾಲಕೃಷ್ಣನ್ನ ನೋಡೆ ಸಖಿ (೮)

ಮರದೊಳಗೆ ನಿಂತು ಮಾನವ ಕಾಯ್ದಂಥ
ಮಾಧವ ಇವನ್ಯಾರೆ ಹೇಳೆ ಸಖಿ
ತ್ರಿಪುರರ ಸತಿಯರ ವ್ರತ ಭಂಗ ಮಾಡಿದ
ಬೌದ್ಧಾವತಾರನೆ ಚಂದ್ರಮುಖಿ (೯)

ಹಯವನೇರಿ ಬಂದು ಧರಣಿಯೆಲ್ಲ ತಿರುಗಿ
ಗಿರಿಯಲ್ಲಿ ನಿಂತವನ್ಯಾರೆ ಸಖಿ
ವೇದಾಂತವೇದ್ಯ ಶ್ರೀ ಪುರಂದರ ವಿಠಲನ್ನ
ಲಕ್ಷ್ಮೀರಮಣನ್ನ ನೋಡೆ ಸಖಿ (೧೦)


nArAyaNa nArAyaNa nArAyaNa nArAyaNa
nArAyaNanyAre pELe sakhi |pa|

kShIrasAgaradalli shayanava mADida
AdinArAyaNa nODe sakhi |a.pa.|

kAlilladale ODi eve ikkadale nODi
miMchinaMte hoLeyuvanyAre sakhi
vEdava taMdu surarige koTTaMtha
matsyAvatAranna nODe sakhi (1)

taleya taggisuvanu kaDaLoLu ADuva
kaDedare kaDagOlanyAre sakhi
suraru daityaru kUDi sharadhiya mathisalu
kUrmAvatArane iMdumukhi (2)

mAri taggisuvanu maNNu chimmi ADuva
kOredADeyava ivanyAre sakhi
duruLanna koMdu dharaNiya taMdaMtha
varAhAvatArane vArijAkShi (3)

kaMbadiMdali baMdu karuLanu bagedu
koraLoLu hAkidavanyAre sakhi
naramRuga rUpadi udarava sILida
nArasiMhana rUpa nODe sakhi (4)

puTTa pAdadiMda sRuShTiyannaLeva
diTTa brahmacAri yAre sakhi
koTTiddu sAlade meTTida shiravannu
puTTa vAmanarUpa nODe sakhi (5)

kOpadiMdali baMdu koDaliyanne piDidu
kulavannE savaridanyAre sakhi
raktadoLage snAna tarpaNa mADida
vipra bhArgava rAma nODe sakhi (6)

shIghradiMdali baMdu shabari eMjalanuMDu
sEtuve kaTTidavanyAre sakhi
kausalyeya udaradi shishuvAgi janisida
dasharatha rAmanna nODe sakhi (7)

brahmAMDadoLagella baMDiya hoDedonu
pArthasArathi ivanyAre sakhi
mathureyalli huTTi gOkuladi beLeda
gOpAlakRuShNanna nODe sakhi (8)

maradoLage niMtu mAnava kAydaMtha
mAdhava ivanyAre hELe sakhi
tripurara satiyara vrata bhaMga mADida
bauddhAvatArane chaMdramukhi (9)

hayavanEri baMdu dharaNiyella tirugi
giriyalli niMtavanyAre sakhi
vEdAMtavEdya shrI puraMdara viThalanna
lakShmIramaNanna nODe sakhi (10)

Leave a Reply

Your email address will not be published. Required fields are marked *

You might also like

error: Content is protected !!