Kolu Kolenna kole

Composer : Shri Mahipati dasaru

By Smt.Shubhalakshmi Rao

ಕೋಲು ಕೋಲೆನ್ನ ಕೋಲೆ
ಕೋಲು ಕೋಲೆನ್ನ ಕೋಲೆ
ಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ||

ಶಿಕ್ಷಿಸಿ ನಿಗಮಗೋಚರ ರಾಕ್ಷಶರ ಕೊಂದು
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧||

ಧರ್ಮ ನಡೆಯಲಾಗಿ ಮರ್ಮವ ತಾಳಿದ
ಕರ್ಮಹರ ಶ್ರೀಮೂರ್ತಿಯ ಕೋಲೆ
ಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತ
ಕೂರ್ಮಾವತಾರನ ಬಲಗೊಂಬೆ ಕೋಲೆ ||೨||

ಧರೆಯ ಕದ್ದಸುರನಾ ಕೋರೆದಾಡಿಂದ ಸೀಳಿ
ಹೋರಿಹೊಯಿದಾಡಿದ ನರಹರಿ ಕೋಲೆ
ಹೋರಿಹೊಯಿದಾಡಿದ ನರಹರಿ ಧರೆಯಾ ಗೆದ್ದ
ವರಹಾವತಾರನ ಬಲಗೊಂಬೆ ಕೋಲೆ ||೩||

ತರಳ ಪ್ರಹ್ಲಾದಗಾಗಿ ದುರುಳ ದೈತ್ಯನ ಕೊಂದು
ಕರುಳ ವನಮಾಲೆಯ ಧರಿಸಿದ ಕೋಲೆ
ಕರುಳ ವನಮಾಲೆಯ ಧರಿಸಿದಾ ಹರಿ
ನರಸಿಂಹಾವತಾರನ ಬಲಗೊಂಬೆ ಕೋಲೆ ||೪||

ನೇಮಿಸಿ ಮೂರುಪಾದ ಭೂಮಿಯ ಬೇಡಿದ
ಹೆಮ್ಮೆಯಿಂ ಪರಿಹರಿಸಿದ ಕೋಲೆ
ಹೆಮ್ಮೆಯಿಂ ಪರಿಹರಿಸಿದ ಬ್ರಾಹ್ಮಣನಾಗಿ
ವಾಮನಾವತಾರನ ಬಲಗೊಂಬೆ ಕೋಲೆ ||೫||

ಆಜ್ಞೆಯ ಮೀರದೆ ಅಗ್ರಜಳಾ ಶಿರವ
ಶೀಘ್ರದಿಂದಲಿ ಇಳುಹಿದ ಕೋಲೆ
ಶೀಘ್ರದಿಂದಲಿ ಇಳುಹಿದಾ ಶಿರವನು
ಭಾರ್ಗವರಾಮನ ಬಲಗೊಂಬೆ ಕೋಲೆ ||೬||

ಕಾಮದಿಂದೊಯ್ದು ಸೀತೆ ತಾಮಸದವನ ಕೊಂದು
ನೇಮಸ್ಥಾಪಿಸಿದ ಇಳೆಯೊಳು ಕೋಲೆ
ನೇಮಸ್ಥಾಪಿಸಿದ ಇಳೆಯೊಳು ಶ್ಯಾಮವರ್ಣ
ರಾಮಾವತಾರನ ಬಲಗೊಂಬೆ ಕೋಲೆ ||೭||

ದುಷ್ಟ ದೈತ್ಯರನೆಲ್ಲ ಕುಟ್ಟಿ ಮಡುಹಿದ
ನೆಟ್ಟನೆ ಗಿರಿಯನೆತ್ತಿದ ಕೋಲೆ
ನೆಟ್ಟನೆ ಗಿರಿಯನೆತ್ತಿದ ಬೆಟ್ಟಿಲಿ
ಕೃಷ್ಣಾವತಾರನ ಬಲಗೊಂಬೆ ಕೋಲೆ ||೮||

ಕದ್ದು ತ್ರಿಪುರರ ಕೊಂದು ಇದ್ದ ಸತಿಯರ ವ್ರತವ
ಸಿದ್ಧಿಯ ತಾನು ಅಳಿದನು ಕೋಲೆ
ಸಿದ್ಧಿಯ ತಾನು ಅಳಿದನು ಬುದ್ಧಿಯಲಿ
ಬೌದ್ಧಾವತಾರನ ಬಲಗೊಂಬೆ ಕೋಲೆ ||೯||

ಮಲ್ಲ ಮಾನ್ಯರನೆಲ್ಲ ಹಲ್ಲು ಮುರಿಯಲಾಗಿ
ನಲ್ಲ ತೇಜಿಯನೇರಿದ ಕೋಲೆ
ನಲ್ಲ ತೇಜಿಯನೇರಿದ ಬಲ್ಲಿದನಾಗಿ
ಕಲ್ಕ್ಯಾವತಾರನ ಬಲಗೊಂಬೆ ಕೋಲೆ ||೧೦||

ವಸ್ತು ಪರಾತ್ಪರ ವಿಸ್ತಾರ ತೋರಲಾಗಿ
ಹತ್ತಾವತಾರ ಧರಿಸಿದ ಕೋಲೆ
ಹತ್ತಾವತಾರ ಧರಿಸಿದ ಮಹಿಪತಿ
ಅಂತರಾತ್ಮನ ಬಲಗೊಂಬೆ ಕೋಲೆ ||೧೧||


kOlu kOlenna kOle
kOlu kOlenna kOle
kOle SrIguruvinA balagoMbe kOle ||pa||

SikShisi nigamagOcara rAkShashara koMdu
rakShisi vEdavanuLuhida kShitiyoLu
rakShisi vEdavanuLuhida kShitiyoLu
matsyAvatArana balagoMbe kOle ||1||

dharma naDeyalAgi marmava tALida
karmahara SrImUrtiya kOle
karmahara SrImUrtiyu dhareya potta
kUrmAvatArana balagoMbe kOle ||2||

dhareya kaddasuranA kOredADiMda sILi
hOrihoyidADida narahari kOle
hOrihoyidADida narahari dhareyA gedda
varahAvatArana balagoMbe kOle ||3||

taraLa prahlAdagAgi duruLa daityana koMdu
karuLa vanamAleya dharisida kOle
karuLa vanamAleya dharisidA hari
narasiMhAvatArana balagoMbe kOle ||4||

nEmisi mUrupAda BUmiya bEDida
hemmeyiM pariharisida kOle
hemmeyiM pariharisida brAhmaNanAgi
vAmanAvatArana balagoMbe kOle ||5||

Aj~jeya mIrade agrajaLA Sirava
SIGradiMdali iLuhida kOle
SIGradiMdali iLuhidA Siravanu
BArgavarAmana balagoMbe kOle ||6||

kAmadiMdoydu sIte tAmasadavana koMdu
nEmasthApisida iLeyoLu kOle
nEmasthApisida iLeyoLu SyAmavarNa
rAmAvatArana balagoMbe kOle ||7||

duShTa daityaranella kuTTi maDuhida
neTTane giriyanettida kOle
neTTane giriyanettida beTTili
kRuShNAvatArana balagoMbe kOle ||8||

kaddu tripurara koMdu idda satiyara vratava
siddhiya tAnu aLidanu kOle
siddhiya tAnu aLidanu buddhiyali
bauddhAvatArana balagoMbe kOle ||9||

malla mAnyaranella hallu muriyalAgi
nalla tEjiyanErida kOle
nalla tEjiyanErida ballidanAgi
kalkyAvatArana balagoMbe kOle ||10||

vastu parAtpara vistAra tOralAgi
hattAvatAra dharisida kOle
hattAvatAra dharisida mahipati
aMtarAtmana balagoMbe kOle ||11||

Leave a Reply

Your email address will not be published. Required fields are marked *

You might also like

error: Content is protected !!