Kaapaadu Shripadaraya

Composer : Shri Gurugovinda dasaru

By Smt.Shubhalakshmi Rao

ಕಾಪಾಡು – ಕಾಪಾಡು ಶ್ರೀಪಾದರಾಯ [ಪ]
ಪಾಪೌಘಗಳನಳಿದು ಶ್ರೀಪತಿಯ ತೋರೀ [ಅ.ಪ.]

ನಾಡಿನೊಳು ಪೆಸರಾದ ಮೂಡಲಾದ್ರಿಗೆ ಪೋಪ
ಮೂಡಲಬಾಗಿಲ ಕಾಯ್ವ ಪ್ರಾಣನಾಶ್ರಯಿಸೀ |
ಮೂಡಬಾಗಿಲ ಪುರದಿ ನರಸಿಂಹ ಕ್ಷೇತ್ರದಲಿ |
ಈಡು ಇಲ್ಲದೆ ಮೆರೆವ ಯತಿ ಸಾರ್ವಭೌಮಾ (೧)

ಹತ್ತಾರು ನಾಲ್ಕಾದ ಶಾಕಪ್ರತಿ ದಿನದಲ್ಲಿ
ಉತ್ತಮೋತ್ತಮನಿಗಿತ್ತು ಉಂಬ ಮಹಿಮಾ |
ಕೃತ್ರಿಮ ಸ್ವಭಾವ ನೃಪ ಪರಿಕಿಸಲು ಪೋಗೆ ಹರಿ
ಮತ್ತೊದಗಿಸಿದ ವ್ಯಾಳ್ಯಕ್ಕೆ ಹರಿಕೃಪಾ ಪಾತ್ರ (೨)

ವಿಪ್ರ ಬ್ರಹ್ಮ ಹತ್ಯವನು ಶಂಖದುದಕದಿ ಕಳೆಯೆ
ಅಪ್ರಬುದ್ಧರು ನಗಲು ಗೆರೇಣ್ಣೆ ವಸನಾ |
ಕ್ಷಿಪ್ರ ಶುದ್ದಿಯ ಗೈದೆ ಪ್ರೋಕ್ಷಿಸುತ ಶಂಖದಲಿ
ಅಪ್ರಮೇಯನ ಕರುಣ ನಿನ್ನೊಳೆಂತುಂಟೋ (೩)

ಅಹವು ರಾತ್ರಿಗಳಭಿಧ ಆದಿತ್ಯ ಸಂಸ್ಥಿತನು
ಅಹರ್ನಿಶೀ ನರನಾಡಿ ಸ್ಥಿತನಾಗಿಹಾ |
ಬೃಹತಿ ನಾಮಕಗನ್ನ ಋಗ್ರಹಸ್ಯನರುಪಿ
ಬೃಹತಿ ಸಾಸಿರಗಳಿಪ ಸಂಧಾನವಿತ್ತೂ (೪)

ವಾದಿಗಳ ಎದೆಶೂಲ ವಾದ ಗ್ರಂಥದಿ
ಪೂರ್ಣಬೋಧ ಶಿಷ್ಯರ ಹಿತವ ಕಾದು ಜಗದೀ |
ವೇದ ವೇದ್ಯನು ಗುರು ಗೋವಿಂದ ವಿಠ್ಠಲನ
ಪಾದಗೈವ ಧ್ಯಾನದಲಿ ಮೆರೆಯುತಿಹ ಗುರುವೇ (೫)


kApADu – kApADu SrIpAdarAya [pa]
pApauGagaLanaLidu SrIpatiya tOrI [a.pa.]

nADinoLu pesarAda mUDalAdrige pOpa
mUDalabAgila kAyva prANanASrayisI |
mUDabAgila puradi narasiMha kShEtradali |
IDu illade mereva yati sArvaBaumA (1)

hattAru nAlkAda SAkaprati dinadalli
uttamOttamanigittu uMba mahimA |
kRutrima svaBAva nRupa parikisalu pOge hari
mattodagisida vyALyakke harikRupA pAtra (2)

vipra brahma hatyavanu SaMKadudakadi kaLeye
aprabuddharu nagalu gerENNe vasanA |
kShipra Suddiya gaide prOkShisuta SaMKadali
apramEyana karuNa ninnoLeMtuMTO (3)

ahavu rAtrigaLaBidha Aditya saMsthitanu
aharniSI naranADi sthitanAgihA |
bRuhati nAmakaganna Rugrahasyanarupi
bRuhati sAsiragaLipa saMdhAnavittU (4)

vAdigaLa edeSUla vAda graMthadi
pUrNabOdha SiShyara hitava kAdu jagadI |
vEda vEdyanu guru gOviMda viThThalana
pAdagaiva dhyAnadali mereyutiha guruvE (5)

Leave a Reply

Your email address will not be published. Required fields are marked *

You might also like

error: Content is protected !!