Composer : Shri Helavanakatte Giriyamma
ಇಂಥಾವಗ್ಹ್ಯಾಂಗ ಮನಸೋತೆ ಬಹು
ಪಂಥವಾಡಿದ ಜಗನ್ಮಾತೆ [ಪ]
ಆವಾಗ ನಾರುವ ಮೈಯ್ಯ ಬಿಚ್ಚಿ
ತೋರಿ ನಲಿಯುವ ಕಾಲು ಕೈಯ್ಯ
ಕೋರೆಯ ಮಸಿಯುತ ಕೊಸರಿಕೊಂಡಸುರನ
ಉದರವ ಬಗೆದಂಥ ಅದ್ಭುತ ಮಹಿಮ ತಾ [೧]
ಬಡ ಬ್ರಾಹ್ಮಣನಾಗಿ ತಿರಿದ ಅಲ್ಲೆ
ಹಡೆದ ತಾಯೀ ಶಿರ ಕಡಿದ
ಮಡದಿಗಾಗಿ ದೊಡ್ಡಡವಿಯೊಳ್ಮನಿ ಕಟ್ಟಿ
ಬಿಡದೆ ಗೋಕುಲದೊಳು ಭಕ್ತರ ಪೊರೆದಾತ [೨]
ಬತ್ತಲೆ ನಿಂತಿದ್ದನಾಗ ತೇಜಿ
ಹತ್ತಿ ಮೆರೆಯೊದೊಂದು ಯೋಗ
ಉತ್ತಮ ಹೆಳವನಕಟ್ಟಿ ಶ್ರೀರಂಗಯ್ಯ
ಭಕ್ತವತ್ಸಲ ಸ್ವಾಮಿ ದೇವ ಕೃಪಾಳು [೩]
iMthAvag~hyAMga manasOte bahu
paMthavADida jaganmAte [pa]
AvAga nAruva maiyya bicci
tOri naliyuva kAlu kaiyya
kOreya masiyuta kosarikoMDasurana
udarava bagedaMtha adButa mahima tA [1]
baDa brAhmaNanAgi tirida alle
haDeda tAyI Sira kaDida
maDadigAgi doDDaDaviyoLmani kaTTi
biDade gOkuladoLu bhaktara poredAta [2]
battale niMtiddanAga tEji
hatti mereyodoMdu yOga
uttama heLavanakaTTi SrIraMgayya
Baktavatsala svAmi dEva kRupALu [3]
Leave a Reply