Devi namma dyavaru

Composer : Shri Kanakadasaru

By Smt.Shubhalakshmi Rao

ದೇವಿ ನಮ್ಮ ದ್ಯಾವರು ಬಂದೌರೆ
ಬನ್ನೀರೆ, ನೋಡ ಬನ್ನಿರೆ [ಪ]

ಕೆಂಗಣ್ಣ ಮೀನನಾಗಿ ನಮ ರಂಗ
ಗುಂಗಾಡಿ ಸೋಮನ ಕೊಂದಾನ್ಯಾ
ಗುಂಗಾಡಿ ಸೋಮನ ಕೊಂದು ವೇದವ
ಬಂಗಾರದೊಡಲನಿಗಿತ್ತಾನ್ಯಾ [೧]

ದೊಡ್ಡ ಮಡುವಿನೊಳು ನಮ್ಮ ರಂಗ
ಗುಡ್ಡವ ಹೊತುಕೊಂಡು ನಿಂತಾನ್ಯಾ
ಗುಡ್ಡವ ಹೊತುಕೊಂಡು ನಿಂತು
ಸುರರನ್ನು ದೊಡ್ಡವರನ್ನು ಮಾಡ್ಯಾನ್ಯಾ [೨]

ಚೆನ್ನ ಕಾಡಿನ ಹಂದ್ಯಾಗಿ ನಮ ರಂಗ
ಚಿನ್ನದ ಕಣ್ಣನ ಕೊಂದಾನ್ಯಾ
ಚಿನ್ನದ ಕಣ್ಣನ ಕೊಂದು ಭೂಮಿಯ
ವನ್ನಜ ಸಂಭವಗೆ ಇತ್ತಾನ್ಯಾ (೩)

ಸಿಟ್ಟಿಂದ ಸಿಂಹನಾಗಿ ನಮ ರಂಗ
ಹೊಟ್ಟೆಯ ಕರುಳ ಬಗೆದಾನ್ಯಾ
ಹೊಟ್ಟೆಯ ಕರುಳ ಹಾರವ ಮಾಡಿ
ಪುಟ್ಟಗೆ ವರವ ಕೊಟ್ಟಾನ್ಯಾ (೪)

ಹುಡುಗ ಹಾರುವನಾಗಿ ನಮ ರಂಗ
ಬೆಡಗಲಿ ಮುಗಿಲಿಗೆ ಬೆಳೆದಾನ್ಯಾ
ಬೆಡಗಲಿ ಮುಗಿಲಿಗೆ ಬೆಳೆದು
ಬಲಿಯನ್ನು ಅಡಿಯಿಂದ ಪಾತಾಳಕೊತ್ತಾನ್ಯಾ (೫)

ತಾಯ ಮಾತನು ಕೇಳಿ ಸಾಸಿರ ತೋಳಿನ
ಆವಿನ ಕಳ್ಳನ ಕೊಂದಾನ್ಯಾ
ಆವಿನ ಕಳ್ಳನ ಕೊಂದು
ಭೂಮಿಯ ಅವನಿಯ ಸುರರಿಗಿತ್ತಾನ್ಯಾ (೬)

ಪಿಂಗಳ ಕಣ್ಣಿನ ಕೊಂಗಗಳ ಕೂಡಿ
ಛಂಗನೆ ಲಂಕೆಗೆ ಪೋದಾನ್ಯಾ
ಛಂಗನೆ ಲಂಕೆಗೆ ಪೋಗಿ ನಮ್ಮ
ರಂಗ ಹೆಂಗಸು ಗಳ್ಳನ ಕೊಂದಾನ್ಯಾ (೭)

ಕರಿಯ ಹೊಳೆಯ ಬಳಿ ತುರುಗಳ ಕಾಯುತ್ತ
ಉರುಗನ ಮಡುವ ಧುಮುಕಾನ್ಯಾ
ಉರುಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗ
ಯಾರ್ಯಾರ್ಗೊ ಯೇನೇನೊ ಕೊಟ್ಟಾನ್ಯಾ (೮)

ಭಂಡ ತನಂದಲ್ಲಿ ಕುಂಡೆಯ ಬಿಟುಕೊಂಡು
ಕಂಡ ಕಂಡಲ್ಲಿ ತಿರುಗಾನ್ಯಾ
ಕಂಡ ಕಂಡಲ್ಲಿ ತಿರುಗಿ ತ್ರಿಪುರರ
ಹೆಂಡಿರನೆಲ್ಲ ಕೆಡಿಸಾನ್ಯಾ (೯)

ಚೆಲುವ ಹೆಂಡತಿಯ ಕುದುರೆಯ ಮಾಡಿ
ಒಳ್ಳೆಯ ರಾಹುತನಾದಾನ್ಯಾ
ಒಳ್ಳೆ ರಾಹುತನಾಗಿ ಮ್ಲೇಂಚ್ಛರ ಡೊಳ್ಳ
ಹೊಟ್ಟೆಯ ಮ್ಯಾಲೆ ಒದ್ದಾನ್ಯಾ (೧೦)

ಡೊಳ್ಳಿನ ಮೇಲ್ ಕೈ ಭರಮಪ್ಪ ಹಾಕ್ಯಾನು
ತಾಳವ ಶಿವನಪ್ಪ ತಟ್ಟಾನ್ಯಾ
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ಯಾ (೧೧)


dEvi namma dyAvaru baMdaure
bannIre, nODa bannire [pa]

keMgaNNa mInanAgi nama raMga
guMgADi sOmana koMdAnyA
guMgADi sOmana koMdu vEdava
baMgAradoDalanigittAnyA [1]

doDDa maDuvinoLu namma raMga
guDDava hotukoMDu niMtAnyA
guDDava hotukoMDu niMtu
surarannu doDDavarannu mADyAnyA [2]

cenna kADina haMdyAgi nama raMga
cinnada kaNNana koMdAnyA
cinnada kaNNana koMdu BUmiya
vannaja saMBavage ittAnyA (3)

siTTiMda siMhanAgi nama raMga
hoTTeya karuLa bagedAnyA
hoTTeya karuLa hArava mADi
puTTage varava koTTAnyA (4)

huDuga hAruvanAgi nama raMga
beDagali mugilige beLedAnyA
beDagali mugilige beLedu
baliyannu aDiyiMda pAtALakottAnyA (5)

tAya mAtanu kELi sAsira tOLina
Avina kaLLana koMdAnyA
Avina kaLLana koMdu
BUmiya avaniya surarigittAnyA (6)

piMgaLa kaNNina koMgagaLa kUDi
CaMgane laMkege pOdAnyA
CaMgane laMkege pOgi namma
raMga heMgasu gaLLana koMdAnyA (7)

kariya hoLeya baLi turugaLa kAyutta
urugana maDuva dhumukAnyA
urugana heDe mEle hArhAri kuNivAga
yAryArgo yEnEno koTTAnyA (8)

BaMDa tanaMdalli kuMDeya biTukoMDu
kaMDa kaMDalli tirugAnyA
kaMDa kaMDalli tirugi tripurara
heMDiranella keDisAnyA (9)

celuva heMDatiya kudureya mADi
oLLeya rAhutanAdAnyA
oLLe rAhutanAgi mlEMcCara DoLLa
hoTTeya myAle oddAnyA (10)

DoLLina mEl kai Baramappa hAkyAnu
tALava Sivanappa taTTAnyA
oLLoLLe padagaLa hanumappa hADyAnu
celuva kanakappa kuNidAnyA (11)

Leave a Reply

Your email address will not be published. Required fields are marked *

You might also like

error: Content is protected !!