Composer : Shri Shri Gurugovinda dasaru
ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ)
ಕಾವುದೋ ಹರಿ | ಕಾವುದೋ ಹರಿ
ಕಾವುದೊ ಕರುಣಾರ್ಣವ [ಪ]
ಜೀವರಂತರ ಬಾಹ್ಯ ನೆಲಸಿಹ
ಶ್ರೀವರಾ ಶ್ರೀ ಭೂಧರಾ [ಅ.ಪ]
ನಿತ್ಯ ನೂತನ | ನಿರ್ವಿಕಾರನೆ |
ಸತ್ಯನೆ ನೀ ನಿತ್ಯನೇ
ಭೃತ್ಯ ವತ್ಸಲ | ಭವವನಾನಲ |
ಕೃತ್ಯನೆ ದಯ ಪೂರ್ಣನೇ ||
ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ |
ಕರ್ತನೇ ನಿರ್ಲಿಪ್ತನೇ
ಸತ್ಯ ಕಾಮ ಶರಣ ಶಾಶ್ವತ |
ಸ್ತುತ್ಯನೇ ಜಗದ್ ವ್ಯಾಪ್ತನೇ [೧]
ಸರ್ವ ಪ್ರೇರಕ ಸರ್ವ ಚೇಷ್ಟಕ |
ಸರ್ವ ನಿಯಮನ ಮಾಳ್ಪನೇ
ಸರ್ವ ವಾಚ್ಯನೆ ಅಮಿತ ತೇಜನೆ |
ಸರ್ವರನ ಸಲಹೂವನೇ ||
ಸರ್ವ ಶಬ್ದ ಪ್ರವೃತಿ ಕಾರಣ |
ಸರ್ವಗುಣ ಪರಿಪೂರ್ಣನೆ
ಸರ್ವತೊಮುಖ ಬಾಹು ಚರಣನೆ |
ಶರ್ವ ವಂದ್ಯ ಸುಮಹಿಮನೆ [೨]
ವೀತಭಯ ವಿಶ್ವೇಶ ವಿಧಿಪಿತ |
ಮಾತುಳಾಂತಕ ಪಾಲಕಾ
ಭೂತ ಭಾವನನಂತ ಭಾಸ್ಕರ |
ದ್ಯೋತಕ ಮಹಕೌತುಕ ||
ಗೌತಮ ಪ್ರಿಯ ಮಡದಿ ಕಾಯ್ದಾ |
ನಾಥ ರಕ್ಷಕ ಶಿಕ್ಷಕಾ
ಖ್ಯಾತ ರಾವಣ ಕುಂಭಕರ್ಣನ |
ಹಂತಕ ವಿಶ್ವಾಸಕ [೩]
ಪ್ರಣತ ಕಾಮದ ಮಣಿ ವಿಭೂಷಿತ |
ಭಕ್ತ ಭಯಹರ ಶ್ರೀಧರ
ಘೃಣಿ ಗುಣತ್ರಯ ದೂರ ವರ್ಜಿತ |
ಬಂಧಕ ಭವ ಮೋಚಕ
ಅಣು ಮಹದ್ಗತ ವ್ಯಾಪ್ತ ವ್ಯಾಪಕ |
ಸಾಧಕ ಖಲ ಬಾಧಕ |
ತೃಣ ಮೊದಲು ಬ್ರಹ್ಮಾಂತ ಜೀವರ |
ಪಾಲಕ ಪರಿಪೋಷಕ [೪]
ಮೀನ ಕೂರ್ಮ ಕಮಠನೆ
ಕೋಲ ನರಹರಿ ವಾಮನಾ
ರೇಣುಕಾತ್ಮಜ ರಾವಣಾಂತಕ |
ದಾಶರಥಿ ನರ ಸಾರಥೀ ||
ಧೇನುಕಾಸುರ ಮಥನ ತ್ರಿಪುರವ |
ಹಾನಿಗೈದನೆ ಬುದ್ಧನೆ
ಮಾನುಷಾಕೃತಿಲ್-ಹಯವನೇರಿದ |
ಕಲ್ಕಿಯೇ ಕಲಹ ಪ್ರಿಯನೆ [೫]
ಉದಿತ ಭಾಸ್ಕರನಂತ ತೇಜನೆ |
ಉದರ ನಾಮಕ ಪಾಚಕ
ಸುದತಿಯರು ಹದಿನಾರು ಸಾವಿರ |
ವಾಳ್ದನೇ ಬ್ರಹ್ಮಚರ್ಯನೇ ||
ಮಧು ವಿರೋಧಿಯೆ ಮಧ್ವಮಾನಸ |
ಮಂದಿರ ಬಹುಸುಂದರ
ಹೃದಯದಲಿ ನೀ ಬದಿಗನೆನಿಸುತ |
ಪೂಜಿತ ಸುರ ಪೂಜಿತ [೬]
ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ |
ಕರ್ತೃಕ ಪ್ರಾವರ್ತಕ
ಅಷ್ಟದಳ ಸತ್ಕಮಲಧಿಷ್ಠಿತ |
ಪ್ರಾಜ್ಞನೇ ವಿಶ್ವಜ್ಞನೇ
ಜಿಷ್ಣು ಸಖ ಶ್ರೀಕೃಷ್ಣ ಕೃಪೆಯ |
ಭೀಷ್ಟದಾ ಶಿಷ್ಟೇಷ್ಟದಾ
ಪುಷ್ಟ ಮಹಿಮಾ ಪ್ರವಿಷ್ಟ ರೂಪನ |
ವಿಷ್ಟನೇ ನಿವಿಷ್ಟನೇ [೭]
ಗೋವಿದಾಂಪತಿ ಗೋವಪಾಲಕ |
ಮಾವ ಮಾರಕ ಕಾರಕ |
ಭೂವರಾಹ ಸುಭಾವ ಜಾರಿಜ |
ಷಣ್ಮುಖ ಪರಿಪಾಲಕ ||
ಗೋವಿಂದ ಗುರು ಗೋವಿಂದವಿಠಲ |
ಗೋವ್ಗಳ್ವರ್ಧನ ಗಿರಿಧರ
ಪಾವಮಾನಿಯ ಪ್ರೀಯ ಸಿರಿಧರ |
ಕಾವ ಶರಣರ ಭವಹರಾ [೮]
SrI viShNvAShTaka (pAlayAcyuta eMbate)
kAvudO hari | kAvudO hari
kAvudo karuNArNava [pa]
jIvaraMtara bAhya nelasiha
SrIvarA SrI BUdharA [a.pa]
nitya nUtana | nirvikArane |
satyane nI nityanE
BRutya vatsala | BavavanAnala |
kRutyane daya pUrNanE ||
mRutyu varjita | pratyagAtmane |
kartanE nirliptanE
satya kAma SaraNa SASvata |
stutyanE jagad vyAptanE [1]
sarva prEraka sarva cEShTaka |
sarva niyamana mALpanE
sarva vAcyane amita tEjane |
sarvarana salahUvanE ||
sarva Sabda pravRuti kAraNa |
sarvaguNa paripUrNane
sarvatomuKa bAhu caraNane |
Sarva vaMdya sumahimane [2]
vItaBaya viSvESa vidhipita |
mAtuLAMtaka pAlakA
BUta BAvananaMta BAskara |
dyOtaka mahakautuka ||
gautama priya maDadi kAydA |
nAtha rakShaka SikShakA
KyAta rAvaNa kuMBakarNana |
haMtaka viSvAsaka [3]
praNata kAmada maNi viBUShita |
Bakta Bayahara SrIdhara
GRuNi guNatraya dUra varjita |
baMdhaka Bava mOcaka
aNu mahadgata vyApta vyApaka |
sAdhaka Kala bAdhaka |
tRuNa modalu brahmAMta jIvara |
pAlaka paripOShaka [4]
mIna kUrma kamaThane
kOla narahari vAmanA
rENukAtmaja rAvaNAMtaka |
dASarathi nara sArathI ||
dhEnukAsura mathana tripurava |
hAnigaidane buddhane
mAnuShAkRutil-hayavanErida |
kalkiyE kalaha priyane [5]
udita BAskaranaMta tEjane |
udara nAmaka pAcaka
sudatiyaru hadinAru sAvira |
vALdanE brahmacaryanE ||
madhu virOdhiye madhvamAnasa |
maMdira bahusuMdara
hRudayadali nI badiganenisuta |
pUjita sura pUjita [6]
sRuShTi sthiti modalAda aShTaka |
kartRuka prAvartaka
aShTadaLa satkamaladhiShThita |
prAj~janE viSvaj~janE
jiShNu saKa SrIkRuShNa kRupeya |
BIShTadA SiShTEShTadA
puShTa mahimA praviShTa rUpana |
viShTanE niviShTanE [7]
gOvidAMpati gOvapAlaka |
mAva mAraka kAraka |
BUvarAha suBAva jArija |
ShaNmuKa paripAlaka ||
gOviMda guru gOviMdaviThala |
gOvgaLvardhana giridhara
pAvamAniya prIya siridhara |
kAva SaraNara BavaharA [8]
Leave a Reply