Narayana Varma – Sharanara Sharanya

Composer : Shri Uragadri vittala, Raga:Saveri

By Smt.Nandini Sripad , Blore

ಶ್ರೀ ಉರಗಾದ್ರಿವಾಸ ವಿಠಲ ದಾಸಾರ್ಯ ವಿರಚಿತ
ಶ್ರೀ ನಾರಾಯಣವರ್ಮ
ರಾಗ: ಸಾವೇರಿ

ಶರಣರ ಶರಣ್ಯ ನಾರಾಯಣ|
ಭಕುತರ ಸಂರಕ್ಷಣಾ ನಾರಾಯಣ || ಪ. ||

ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ
ಸ್ವಗತ ಭೇದ ಶೂನ್ಯ ಸರ್ವಾವಸ್ಥೆಯೊಳೆನ್ನ
ವಿಗತ ಕ್ಲೇಶನ ಮಾಡಿ ಸತತ ಕಾಪಾಡಲಿ
ನಿಗಮವಿನುತ ಜಗದಾದಿ ವಂದ್ಯನೆ ದೇವಾ || ೧ ||

ವರುಣಪಾಶಂಗಳಂ ಜಲಚರ ಜಂತುಗಳು | ಮತ್ಸ್ಯ
ಮೂರುತಿ ತಾ ರಕ್ಷಕನಾಗಿರಲಿ
ಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿ
ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ || ೨ ||

ದುರ್ಗರಣಾಗ್ರವನ ಅರಿವರ್ಗಗಳಲಿ
ನರಹರಿದೇವ ಸಂರಕ್ಷಕನಾಗಿರಲಿ
ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ
ದುರ್ಗಮ ಶೈಲದೊಳು ಶ್ರೀ ಭಾರ್ಗವ ರಕ್ಷಿಸಲಿ || ೩ ||

ದಾಶರಥಿ ಪ್ರವಾಸದಲಿ ನಿತ್ಯ
ದೇಶಾಂತರಗಳಲ್ಲಿದ್ದರು ಕಾಯಲಿ
ಈಶ ಶ್ರೀಮನ್ನಾರಾಯಣ ಎನ್ನ
ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ
ನರಾವತಾರ ಎನ್ನ ಗರುವಿನಿಂ ರಕ್ಷಿಸಲಿ || ೪ ||

ವಿರೋಧಿ ವರ್ಗದಿ ದತ್ತಾತ್ರೇಯ ಕಾಯಲಿ
ಸರ್ವ ಕರ್ಮ ಬಂಧ ಜ್ಞಾನದಿಂದ ಕಪಿಲಾ
ಮೂರ್ತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕು-
ಮಾರನು ಎನ್ನ ಕಾಯಲಿ ಕಾಮದಲ್ಲಿ || ೫ ||

ದಾನವ ಮಧುಕೈಟಭ ಹರಿ ಹಯವದನ
ಘನ್ನಪರಾಧದಿ ರಕ್ಷಕನಾಗಿರಲಿ
ಮನ್ನಿಸಿ ದೇವತೆಗಳು ಸಾಧನವೀಯಲಿ
ಸನ್ನುತಾಂಗ ಧನ್ವಂತ್ರಿಮೂರುತಿ ಹರಿ
ಎನ್ನ ರಕ್ಷಕನಾಗಿರಲಿ ರುಜೆಯೊಳು || ೬ ||

ಜ್ಞಾನರೂಪಿ ಋಷಭ ಸೀತಾತಪದಿಂದ ಎ-
ನ್ನನುದಿನ ಈ ದ್ವಂದ್ವದಿ ಕಾಯಲಿ
ಯಜ್ಞಮೂರುತಿ ಲೋಕಾಪವಾದದಿ ಕಾಯಲಿ
ಸುಜ್ಞ ಬಲರಾಮನು ದುರ್ಜನರ ಭಯದಿಂ
ಅಜ್ಞಾನಿಯೆಂದೆನ್ನ ಅನುದಿನ ರಕ್ಷಿಸಲಿ || ೭ ||

ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ
ಜ್ಞಾನದಾತೃ ಹರಿಸೇವೆಗೆ ಬರುತಿಹ
ನಾನಾ ವಿಘ್ನಗಳಿಂದ ರಕ್ಷಿಸುತಿರಲಿ
ಘನ್ನ ಮಹಾ ನರಕ ಬಾಧೆಯಿಂ ತಪ್ಪಿಸಲಿ
ಕೂರ್ಮ ಮೂರುತಿ ಕಾಪಾಡಲಿ ನಿತ್ಯ || ೮ ||

ವೇದವ್ಯಾಸರು ಶುಧ್ಧ ಜ್ಞಾನವನೀಯಲಿ
ಬುದ್ಧಿಮೋಹದಿಂದ ಬುದ್ಧನುದ್ಧರಿಸಲಿ
ಹೃದಯದ ಕಲಬಾಧೆ ಕಲ್ಕಿ ತಾ ಹರಿಸಲಿ || ೯ ||

ಉದಯಕಾಲದಿ ಶ್ರೀಕೇಶವ ರಕ್ಷಿಸಲಿ | ವೇಣು
ಹಸ್ತ ಗೋವಿಂದ ಸಂಗಮದಲ್ಲಿ |
ಪೂರ್ಣ ಕರುಣೆಯಿಂದ ಎನ್ನ ಕಾಪಾಡಲಿ
ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ || ೧೦ ||

ವಿಷ್ಣುಮೂರುತಿ ಮಧ್ಯಾಹ್ನದಿ ಕಾಯಲಿ
ಮಾಧವ ಅಪರಾಹ್ನದಲೆನ್ನ ರಕ್ಷಿಸಲಿ
ಬಾಧೆಯಿಂ ಸಾಯಂಕಾಲದಿ ರಕ್ಷಿಸಲಿ || ೧೧ ||

ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ
ಪದುಮನಾಭಿ ಅರ್ಧರಾತ್ರಿಯೊಳು ಸಲಹಲಿ
ಶ್ರೀಧರನೆನ್ನ ಅಪರಾತ್ರಿಯೊಳು ಸಲಹಲಿ || ೧೨ ||

ಜನಾರ್ಧನನು ಎನ್ನನು ಉಷಃಕಾಲದಲಿ
ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ
ಕಾಲನಾಮಕ ಬೆಳಗಿನ ಝಾವದಿ ಕಾಯಲಿ || ೧೩ ||

ನಕ್ರನ ಹರಿಸಿದ ಚಕ್ರಾಯುಧವು ಎನ್ನ
ಶತ್ರುಬಾಧೆಗಳಿಂದ ರಕ್ಷಿಸುತಿರಲಿ
ವಿಕ್ರಮ ಗದೆಯು ಆಶ್ರಿತರುಪದ್ರ –
ದುರಾಗ್ರಹ ನಿಗ್ರಹ ಮಾಡಲಿ ಅನುದಿನ || ೧೪ ||

ಪ್ರಮಥ ಭೂತ ಪಿಶಾಚ ಪ್ರೇತ ಭಯದಿ
ಪಾಂಚಜನ್ಯ ಶಂಖರಾಜ ರಕ್ಷಿಸಲಿ
ದುಮ್ಮನ ಶತ್ರು ಬಾಧೆಗಳಿಂದ ಖಡ್ಗವು
ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ || ೧೫ ||

ಅವನ ನಾಮರೂಪ ದಿವ್ಯಾಯುಧದ ಸ್ಮರಣೆ
ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ
ನಿವಾರಣೆಯಾಗಿ ನಿವೃತ್ತಿ ಮಾರ್ಗಕ್ಕೆ ಶುಧ್ಧ
ಭಾವ ಭಕುತಿಗೆ ಕಾರಣವು ಸತ್ಯ
ಗರುಡ ವಿಷ್ಟಕ್ಸೇನ ಕಷ್ಟದಿಂದ ರಕ್ಷಿಸಲಿ || ೧೬ ||

ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ
ಸರ್ವರಂತರ್ಯಾಮಿ ನಿನ್ನ ನಂಬಿರಲು
ಸರ್ವ ಬಾಧೆಗಳಲ್ಲಿ ಪರಿಹಾರವಾಗಲಿ || ೧೭ ||

ಸರ್ವದೇಶ ಕಾಲ ಸರ್ವಾವಸ್ಥೆಯೊಳೆನ್ನ
ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ
ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ
ಕರುಣ ಕವಚವು ಎನಗಿರಲನುದಿನ || ೧೮ ||

ಬಹಿರಾಂತರದಿ ಮೇಲೆ ಕೆಳಗು
ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು
ನಿರುತ ರಕ್ಷಕ ನರಹರಿಯೆ
ನೀ ಪೊರೆ ಶ್ರೀ ವೇಂಕಟೇಶಾಭಿನ್ನ
ಉರಗಾದ್ರಿವಾಸವಿಠಲ ಸ್ವಾಮಿ || ೧೯ ||


SrI uragAdrivAsa viThala dAsArya viracita
SrI nArAyaNavarma
rAga: sAvEri

SaraNara SaraNya nArAyaNa|
Bakutara saMrakShaNA nArAyaNa || pa. ||

Kagapana skaMdarOha aGadUra aBayahasta
svagata BEda SUnya sarvAvastheyoLenna
vigata klESana mADi satata kApADali
nigamavinuta jagadAdi vaMdyane dEvA || 1 ||

varuNapASaMgaLaM jalacara jaMtugaLu | matsya
mUruti tA rakShakanAgirali
dhAruNi neladoLu SrI vAmana kAyali
sarvAkASadoLu trivikrama kAyali || 2 ||

durgaraNAgravana arivargagaLali
naraharidEva saMrakShakanAgirali
mArgagaLalli hiraNyAkSha vairiyu kAyali
durgama SailadoLu SrI BArgava rakShisali || 3 ||

dASarathi pravAsadali nitya
dESAMtaragaLalliddaru kAyali
ISa SrImannArAyaNa enna
krUra karmagaLiMda rakShisalanudina
narAvatAra enna garuviniM rakShisali || 4 ||

virOdhi vargadi dattAtrEya kAyali
sarva karma baMdha j~jAnadiMda kapilA
mUrti rakShisali anudinadali enna sanatku-
mAranu enna kAyali kAmadalli || 5 ||

dAnava madhukaiTaBa hari hayavadana
GannaparAdhadi rakShakanAgirali
mannisi dEvategaLu sAdhanavIyali
sannutAMga dhanvaMtrimUruti hari
enna rakShakanAgirali rujeyoLu || 6 ||

j~jAnarUpi RuShaBa sItAtapadiMda e-
nnanudina I dvaMdvadi kAyali
yaj~jamUruti lOkApavAdadi kAyali
suj~ja balarAmanu durjanara BayadiM
aj~jAniyeMdenna anudina rakShisali || 7 ||

Gannamahima SESha sarpabAdhegaLiMda
j~jAnadAtRu harisEvege barutiha
nAnA viGnagaLiMda rakShisutirali
Ganna mahA naraka bAdheyiM tappisali
kUrma mUruti kApADali nitya || 8 ||

vEdavyAsaru Sudhdha j~jAnavanIyali
buddhimOhadiMda buddhanuddharisali
hRudayada kalabAdhe kalki tA harisali || 9 ||

udayakAladi SrIkESava rakShisali | vENu
hasta gOviMda saMgamadalli |
pUrNa karuNeyiMda enna kApADali
pUrvAhnadali nArAyaNa rakShisali || 10 ||

viShNumUruti madhyAhnadi kAyali
mAdhava aparAhnadalenna rakShisali
bAdheyiM sAyaMkAladi rakShisali || 11 ||

pradOShadali hRuShIkESa rakShisalenna
padumanABi ardharAtriyoLu salahali
SrIdharanenna aparAtriyoLu salahali || 12 ||

janArdhananu ennanu uShaHkAladali
saMdhyAkAladi dAmOdara rakShisali
kAlanAmaka beLagina JAvadi kAyali || 13 ||

nakrana harisida cakrAyudhavu enna
SatrubAdhegaLiMda rakShisutirali
vikrama gadeyu ASritarupadra –
durAgraha nigraha mADali anudina || 14 ||

pramatha BUta piSAca prEta Bayadi
pAMcajanya SaMKarAja rakShisali
dummana Satru bAdhegaLiMda KaDgavu
KETavu sarva aniShTadiM rakShisali || 15 ||

avana nAmarUpa divyAyudhada smaraNe
sarva baMdhagaLella takShaNadalli
nivAraNeyAgi nivRutti mArgakke Sudhdha
BAva Bakutige kAraNavu satya
garuDa viShTaksEna kaShTadiMda rakShisali || 16 ||

hariya vAhanAdigaLu vipattugaLa harisali
sarvaraMtaryAmi ninna naMbiralu
sarva bAdhegaLalli parihAravAgali || 17 ||

sarvadESa kAla sarvAvastheyoLenna
sarvOttama dEva sarvadA rakShisali
sarvaroDeya SrImannArAyaNa ninna
karuNa kavacavu enagiralanudina || 18 ||

bahirAMtaradi mEle keLagu
madhyadalli dikkuvidikkinoLu
niruta rakShaka narahariye
nI pore SrI vEMkaTESABinna
uragAdrivAsaviThala svAmi || 19 ||

Leave a Reply

Your email address will not be published. Required fields are marked *

You might also like

error: Content is protected !!