Composer : Shri Indiresha ankita
ಮೀನಾತ್ಮನಾಗಿ ಭವ ದೀನಾತ್ಮ ಜನಗಳಿಗೆ
ಜ್ಞಾನಾರ್ಥವಾಗಿ ನದಿಯೋಳ್
ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತ
ಪಾಣೀಲಿ ಬಂದು ಭರದೀ
ಮಾನವರಂತೆ ಮೃದು ವಾಣೀಲಿ ತನಗೆ
ಭೂಸ್ಥಾನವಾ ಬೇಡಿ ಬೆಳೆದೂ
ಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿ
ರವಿ ಸೂನುನ ಮಾಡಿಹನು [೧]
ವೃಂದಾರಕಾರು ಬಲ ವೃಂದಾವ
ಕೂಡಿ ಗಿರಿಯಿಂದಾಲೆ ಕ್ಷೀರಧಿಯನೂ
ವಂದಾಗಿ ಮಥಿಸುತಿರೆ ಸಿಂಧೂವಿನೋಳ್
ಜರಿದು ಪೊಂದೀತು ತತ್ತಳವನೂ
ಮಂದಾತ್ಮರಾದು ಭಯ ಮಂದೀಯ ನೋಡಿ
ಬೆನ್ನಿಂದಾಲೆಯೆತ್ತಿ ಸುಧೆಯಾ
ತಂದ್ಯೋರು ರೂಪನಮರಿಂದ್ರಾರಿಗಿತ್ತು
ದಿತಿಜೇಂದ್ರಾರ ಮೋಹಿಸಿದನು [೨]
ಕ್ಷೋಣೀಶ ಕ್ಷೋಣೀಯನೆತ್ತಿ ಪಥಿ
ದಾನಾವ ತಡಿಯುತಿರಲೂ
ನಾಸವಾತ್ಮನ ವನ್ಹಾನೀಯ ಮಾಡಿ
ನಿಜ ಸೂನೂಗೆ ಒಪ್ಪಿಸಿದನು
ಣೇಶ ಜಾತ ನಿಜಮಾನಿನೀ ಸಹಿತ
ಸಂಸ್ಥಾನಾದಿ ಕೂತು ಸುಖದೀ
ತಾನವರಾನ ಪಡಿಸಿದಾನಂದ
ಭೋಗಿಸಲು ತಾ ನೋಡಿ ಮೋದಿಸಿದನು [೩]
ತಾನಕೊಂದ ರಿಪು ಘಾತದಿ ಮಾಡಿ
ಮನಧಾತಾನವರವ ಪಡೆದೂ
ತ್ರಾದಿಗಳಿಗ್ಹರಿನಾಥಾರಿಗಿತ್ತು
ಭಯ ಪೋತಾನ ಬಾಧಿಸಿದನೂ
ಪೂತಾತ್ಮ ಬಾಲಕನ ಮಾತನ ಕೇಳಿ
ಸಭೆಯಾಸ್ಥೂಣರ ಬಿರಿದು ಬಂದೂ
ಘಾತೀಸುತವನ ಶುಭ ಭರಾತೀಯ
ತತ್ಸುತಗೆ ಪ್ರೀತೀಲಿ ಪಾಲಿಸಿದನೂ [೪]
ದುಷ್ಟಾತ್ಮರಿಂದ ಬಹು ದುಷ್ಟಾತ್ಮರಾಗಿ
ಸುರರಿಷ್ಟಾವ ಸ್ವರ್ಗ ಸುಖವಾ
ಬಿಟ್ಟಾವನಲ್ಲ ನಿಜ ಪೊಟ್ಟೀಯಗೋಸುಗದಿ
ಕಷ್ಟಾದಿ ಸಂಚರಿಸಲೂ
ದೃಷ್ಟಿಂದ ಕಂಡದಿತಿ
ತುಷ್ಟೀಸುತಿರಲವಳ ಪೊಟ್ಟೀಯೊಳವತರಿಸಲೂ
ಪುಟ್ಟಾತ್ಮ ಬಲಿಗೆ ಸುತಲಿಷ್ಟಾವ ನೀಡಿ
ಸುರರಿಷ್ಟಾವ ಪಾಲಿಸಿದನೂ [೫]
ಭೂತೇಶನೊಬ್ಬ ತನ ತಾತಾನ ಕೊಂದು
ನವ ಮಾತೇಯನಪಹರಿಸಲೂ
ಭೀತೀಲಿ ತಾಯಿಯುರ ಘಾತಕ್ಕ ಸದೃಶ
ಭುವಿ ಧಾತ್ರೀಶ ದುಷ್ಕಲವನೂ
ಘಾತೀಶಿ ಪೂರ್ವಜರ ಪ್ರೀತೀಯ ಪಡೆದು ಮುನಿ
ಪೋತಾನ ರಕ್ಷಿಸುತಲೇ
ಪಾಥೋದಿ ತಟದಿ ರಘುನಾಥೇಷ್ಟದಾತ
ನಿಜ ಶಾಪಾವ ಭೋಗಿಸುವನೂ [೬]
ಮಾತೇಯ ಗೇಹದಲಿ ತಾತಾನ ತಾಪ
ರಘುನಾಥಾನು ನೋಡಿ ವಿಥಿಲಾ
ಜಾತಾ ಸಮೇತ ಸಹಜಾತಾನ ಕೂಡಿ
ವನಜಾತಾದಿ ಸಂಚರಿಸುತಾ
ಘಾತೀಸಿ ರಾಕ್ಷಸರ ಪ್ರಿಯನಿತ್ತು ಮುನಿ
ಪಾತ್ಮರಿಗೆಲ್ಲ ಪುರದೀ
ಸೀತಾ ಸಮೇತ ಕಪಿ ಪೋತಾನ ಕೂಡಿ
ನಿಜ ಭೂತಿಯ ಭೋಗಿಸಿದನು [೭]
ಕಾರಾಳಯಾದಿ ನಿಜ ನಾರೀಯ ಕೂಡುತಲೆ
ಶೂರಾತ್ಮಜಾತನಿರಲೂ
ನಾರಾಯಣಾತ್ಮತನು ತೋರೀಸಿ ಬಾಲವಪು
ಗೋರಾಜನಾಲಯದಲೀ
ಶೀರೀಯ ಕೂಡಿ ಸುರವೈರಿಗಳಳಿದು ನದಿ
ತೀರಾದಿಕೊಳಲನೂದಿ
ನಾರೇರಿಗೆಲ್ಲ ನಿಜ ಜಾರಾಟ ಸೌಖ್ಯವನು
ತೋರೀಸಿ ತೋಷಿಸಿದನು [೮]
ವೃಷ್ಣೀಯ ಮಧುರೆಯಲಿ ಪುಟ್ಟೂತ ಗಾರ್ಗ
ಸುತನಟ್ಟೂಳಿಗಾಗಿಜಲದೀ
ಪಟ್ಟಣ ನಿರ್ಮಿಸುತಲಿಷ್ಟಾಪ್ತ ಜನರುಗಳ
ನಿಟ್ಟಲ್ಲೆ ಪಾಲಿಸಿದನು
ಸೃಷ್ಟೀಶ ಮಕ್ಕಳನು ಮುಟ್ಟೂತ ಕರದಿ
ತದಭಿಷ್ಟಾರ್ಥಗಳನು ಸುರಿದೂ
ತೃಷ್ಣೇಶ ಪಾಂಡವರ ಕಷ್ಟಾವ
ಕಳಿದು ಗಜ ಪಟ್ಟಣವ ಸಾಧಿಸಿದನು [೯]
ಪಾರ್ಥಾರ ಶಾಲೆಯೊಳು ಪೂತಾತ್ಮರಿಂದ ಹರಿ
ಭೂತೀಶು ಕೇಳಿ ಮನದೀ
ಪ್ರಾತಃ ಸಮಾರಭಿಸಿ ರಾತ್ರೀಯತನಕ ಹರಿ
ಮೂರ್ತೀಯ ಪೂಜಿಸುತಿಹಾ
ದೈತ್ಯಾರ ನೋಡಿ ಸುರನಾಥರ ಜಯಿಸಿ
ಜಿನ ಪೋತಾತ್ಮ ಮಲಗಿ ತೊಡಿಯೋಳ್
ಶಾಸ್ತ್ರಾವ ಬೋಧಿಶ್ಚವರಾತ್ಮಾವ
ಕೆಡಿಸಿ ಸುರ ವೈತಾವ ತೋಷಿಸಿದನೂ [೧೦]
ಸೃಷ್ಟಾತ್ಮಾ ಭೂಸುರರಭೀಷ್ಟಾವ
ಕಳೆದು ಶುಭ ಭೃಷ್ಟಾರ ಮಾಡುತಿರಲೂ
ತುಷ್ಟಾತ್ಮಾ ಮ್ಲೆಂಛರನ ದೃಷ್ಟೀಲಿ ನೋಡಿ ಸತಿ
ಮಿಷ್ಟಾತ್ಮಹಯವ ಮಾಡಿ
ಅಷ್ಟಾಷ್ಟ ಖಡ್ಗವನು ಮುಷ್ಟೀಲಿ ಪಿಡಿದು
ಬಹು ಶಿಟ್ಟೀಲಿ ಸುತ್ಲೆ ಚರಿಸೀ
ವಿಪ್ಲವಾತ್ಮಕ ಕಲ್ಕಿ
ಖಳರ್ಹೊಟ್ಟೀಯ ವಡೆದು ಶುಭ ಪಾಲಿಸಿದನು [೧೧]
ವೆಂಕಟನಾಥ ಭವಪರಿಕವ ಹರಿಸೂತ
ಕಿಂಕರನಾಗಿರುವೆನೂ
ಶಂಬಾಸುರೋದರಜ ಶಂಖಾವ ಪಿಡಿದು ಮುಖ
ಪಂಕೇಜದಿಂದೂದುತಾ
ಹುಂಕಾರ ಮಾಡುತಲೆ ಕಿಂಕಿರನೆಂದು ಭುವಿ
ಸಂಕರ್ಷಣದಿ ಸುರರೂ
ಶಂಕೀತರಾಗುತ ಭಯಂಕಾರವೆಂದು
ಮಹಾತಂಕಾದಿ ಸಂಸ್ಮರಿಪರೂ [೧೨]
ದಂಷ್ಟ್ರೇಶ ಬ್ರಹ್ಮಾನಾಸಿ ಪುಟ್ಟೂತ
ವಾರಿನಿಧಿ ಮೆಟ್ಟೂತ ಘರ್ಘವಿಸಲೂ
ದೃಷ್ಟೀಲಿ ನೋಡಿ ಕಿವಿಗೊಟ್ಟಾಲಿಸೂತ ನಿಜ
ಪೊಟ್ಟೀಯರಾಂತರದಲೀ
ಯಷ್ಟೇನೊ ಸನ್ನಾವಿದು ಪುಟ್ಟೂತಲ್ ಹಂದಿ ಮರಿ
ಬೆಟ್ಟೇಶದಂತಿರುವದೂ
ಧಿಷ್ಟ್ಯಾದಿ ಕೂತು ಪರಮೇಷ್ಠೀಯ
ಮಹಿಮೆಯನು ತುಷ್ಟಿಸಿ ಪಾಡುತಿಹನು [೧೩]
ತರೂನ ಮೂಲದಿ ಕೂತು ಬೋರೆಯಾ
ಹರಿಯ ಶಾಸ್ತ್ರವ ಪೇಳೆ ಮುನಿಪನ
ಸ್ವರವ ಸ್ಮರಿಸಿರಿ ಮನುಜರೇ
ಭವದರವು ಪೋಗುವದು [೧೪]
ಚಿಕ್ಕ ಹುಡುಗೆಯು ತನ್ನಾಗತ ಚಕ್ರದಲಿ
ಬ್ರಹ್ಮಾಂಡ ಕಟಹವ ಟೊಕ್ಕ ವೆನಿಸುತ
ಜೀವ ಸಂಸ್ಕಾರ ಮುಕ್ಕು ಮಾಡುವಳು
ಮೋಘ ಸೌಖ್ಯ ನೀಡುವಳು [೧೫]
ಪ್ರಾಣಸೂನುನು ಯುದ್ಧ ಭೂಮಿಲಿ ಧ್ವಾನ
ಮಾಡಲು ಧರ್ಮರಾಜಗೆ ಮಾನವಾದಿಗಳೆಲ್ಲ
ಮುಖಭವ ಶೋಣಿತಾಗುವದು [೧೬]
ತತ್ವ ದಿವಿಜರು ನಮ್ಮ ದೇಹದಿ
ನಿತ್ಯದಲಿ ಹರಿಸ್ಮರಿಸಿ ತುತಿಸುತ
ಸತ್ವ ದಿವಿಜರಿಗೆತ್ತುವೆನು ಕರವಾ [೧೭]
ಸುರಮುನೀಶನು ತನ್ನ ವಾದ್ಯ ಕರದಿ
ಬಾರಿಸಿ ಹರಿಯ ತುತಿಯನು
ಸ್ಮರಣೆ ಮಾಡಲು ಜನರ ದುರ್ಧರ
ದುರಿತ ಹರಿಸುವನೂ [೧೮]
ಯಲ್ಲಿ ಬ್ರಹ್ಮಾಂಡದಲಿ ಶಿರಿ ವರ
ವಲ್ಲಭವ ಸಂಸ್ಮರಿಸಿ ಹಿಗ್ಗುವ
ಫುಲ್ಲ ನಾಭನ ಭಕ್ತರನು
ಮನದಲ್ಲಿ ಸ್ಮರಿಸುವೆನೂ [೧೯]
ಶ್ರೀಶಾನು ಭಕ್ತ ಜನದಾಶೀಯ
ಪೂರೈಸಲು ಕೂಸಾಗಿ ದೇವಕಿ ಸುತಾ
ಯೇಷಾದಿಗಳ ದಿಶುಭರಾಶೀಲಿ
ಪುಟ್ಟುತವನೀಶಾರ ವಂಶಬೆಳೆಸಿ [೨೦]
ದೋಷಾತ್ಮಾ ದೈತ್ಯಕುಲ ಘಾಶೀಶಿ
ಭೂದೇವಿ ಕ್ಲೇಶಾವನೆಲ್ಲ ಕಳೆದೂ
ದಾಶೀಜ ನಾಗಿ ನಿಜ ಕೋಶಾದಿ ಮೋಕ್ಷಾ
ಪದಮೀರೇಶ ತೋರಿಸಿದನು
ಇಂದಿರೇಶನ ಸಾಧಿಸಿದನು [೨೧]
ನಾರದರ್ಷಿಯ ಕರುಣದಲಿ ಶನಿವಾರ
ಮಾಡೀದ ಪರಮ ತುತಿಯನು
ಭೂರಿ ಪಠಿಸಲು ಇಂದಿರೇಶನುದಾರ ನೋಡುವನು ||
mInAtmanAgi Bava dInAtma janagaLige
j~jAnArthavAgi nadiyOL
snAnArtha muNagiruva SONIta satyavRuta
pANIli baMdu BaradI
mAnavaraMte mRudu vANIli tanage
BUsthAnavA bEDi beLedU
pAnIya pAtrasva viShANAdi dharisi
ravi sUnuna mADihanu [1]
vRuMdArakAru bala vRuMdAva
kUDi giriyiMdAle kShIradhiyanU
vaMdAgi mathisutire siMdhUvinOL
jaridu poMdItu tattaLavanU
maMdAtmarAdu Baya maMdIya nODi
benniMdAleyetti sudheyA
taMdyOru rUpanamariMdrArigittu
ditijEMdrAra mOhisidanu [2]
kShONISa kShONIyanetti pathi
dAnAva taDiyutiralU
nAsavAtmana vanhAnIya mADi
nija sUnUge oppisidanu
NESa jAta nijamAninI sahita
saMsthAnAdi kUtu suKadI
tAnavarAna paDisidAnaMda
BOgisalu tA nODi mOdisidanu [3]
tAnakoMda ripu GAtadi mADi
manadhAtAnavarava paDedU
trAdigaLig~harinAthArigittu
Baya pOtAna bAdhisidanU
pUtAtma bAlakana mAtana kELi
saBeyAsthUNara biridu baMdU
GAtIsutavana SuBa BarAtIya
tatsutage prItIli pAlisidanU [4]
duShTAtmariMda bahu duShTAtmarAgi
surariShTAva svarga suKavA
biTTAvanalla nija poTTIyagOsugadi
kaShTAdi saMcarisalU
dRuShTiMda kaMDaditi
tuShTIsutiralavaLa poTTIyoLavatarisalU
puTTAtma balige sutaliShTAva nIDi
surariShTAva pAlisidanU [5]
BUtESanobba tana tAtAna koMdu
nava mAtEyanapaharisalU
BItIli tAyiyura GAtakka sadRuSa
Buvi dhAtrISa duShkalavanU
GAtISi pUrvajara prItIya paDedu muni
pOtAna rakShisutalE
pAthOdi taTadi raGunAthEShTadAta
nija SApAva BOgisuvanU [6]
mAtEya gEhadali tAtAna tApa
raGunAthAnu nODi vithilA
jAtA samEta sahajAtAna kUDi
vanajAtAdi saMcarisutA
GAtIsi rAkShasara priyanittu muni
pAtmarigella puradI
sItA samEta kapi pOtAna kUDi
nija BUtiya BOgisidanu [7]
kArALayAdi nija nArIya kUDutale
SUrAtmajAtaniralU
nArAyaNAtmatanu tOrIsi bAlavapu
gOrAjanAlayadalI
SIrIya kUDi suravairigaLaLidu nadi
tIrAdikoLalanUdi
nArErigella nija jArATa sauKyavanu
tOrIsi tOShisidanu [8]
vRuShNIya madhureyali puTTUta gArga
sutanaTTULigAgijaladI
paTTaNa nirmisutaliShTApta janarugaLa
niTTalle pAlisidanu
sRuShTISa makkaLanu muTTUta karadi
tadaBiShTArthagaLanu suridU
tRuShNESa pAMDavara kaShTAva
kaLidu gaja paTTaNava sAdhisidanu [9]
pArthAra SAleyoLu pUtAtmariMda hari
BUtISu kELi manadI
prAtaH samAraBisi rAtrIyatanaka hari
mUrtIya pUjisutihA
daityAra nODi suranAthara jayisi
jina pOtAtma malagi toDiyOL
SAstrAva bOdhiScavarAtmAva
keDisi sura vaitAva tOShisidanU [10]
sRuShTAtmA BUsuraraBIShTAva
kaLedu SuBa BRuShTAra mADutiralU
tuShTAtmA mleMCarana dRuShTIli nODi sati
miShTAtmahayava mADi
aShTAShTa KaDgavanu muShTIli piDidu
bahu SiTTIli sutle carisI
viplavAtmaka kalki
KaLarhoTTIya vaDedu SuBa pAlisidanu [11]
veMkaTanAtha Bavaparikava harisUta
kiMkaranAgiruvenU
SaMbAsurOdaraja SaMKAva piDidu muKa
paMkEjadiMdUdutA
huMkAra mADutale kiMkiraneMdu Buvi
saMkarShaNadi surarU
SaMkItarAguta BayaMkAraveMdu
mahAtaMkAdi saMsmariparU [12]
daMShTrESa brahmAnAsi puTTUta
vArinidhi meTTUta GarGavisalU
dRuShTIli nODi kivigoTTAlisUta nija
poTTIyarAMtaradalI
yaShTEno sannAvidu puTTUtal haMdi mari
beTTESadaMtiruvadU
dhiShTyAdi kUtu paramEShThIya
mahimeyanu tuShTisi pADutihanu [13]
tarUna mUladi kUtu bOreyA
hariya SAstrava pELe munipana
svarava smarisiri manujarE
Bavadaravu pOguvadu [14]
cikka huDugeyu tannAgata cakradali
brahmAMDa kaTahava Tokka venisuta
jIva saMskAra mukku mADuvaLu
mOGa sauKya nIDuvaLu [15]
prANasUnunu yuddha BUmili dhvAna
mADalu dharmarAjage mAnavAdigaLella
muKaBava SONitAguvadu [16]
tatva divijaru namma dEhadi
nityadali harismarisi tutisuta
satva divijarigettuvenu karavA [17]
suramunISanu tanna vAdya karadi
bArisi hariya tutiyanu
smaraNe mADalu janara durdhara
durita harisuvanU [18]
yalli brahmAMDadali Siri vara
vallaBava saMsmarisi higguva
Pulla nABana Baktaranu
manadalli smarisuvenU [19]
SrISAnu Bakta janadASIya
pUraisalu kUsAgi dEvaki sutA
yEShAdigaLa diSuBarASIli
puTTutavanISAra vaMSabeLesi [20]
dOShAtmA daityakula GASISi
BUdEvi klESAvanella kaLedU
dASIja nAgi nija kOSAdi mOkShA
padamIrESa tOrisidanu
iMdirESana sAdhisidanu [21]
nAradarShiya karuNadali SanivAra
mADIda parama tutiyanu
BUri paThisalu iMdirESanudAra nODuvanu ||
Leave a Reply