Composer : Shri Purandara dasaru
ಕೇಳಿದೆ ನಿನ್ನಯ ಸುದ್ದಿ , ಕೇಳಿದೆ |ಪ|
ನೀರೊಳು ಮುಳುಗಿದೆಯಂತೆ , ದೊಡ್ಡ
ಭರ ಗಿರಿಯ ಪೊತ್ತೆಯಂತೆ , ಗಡ್ಡೆ
ಬೇರು ಗೆಣಸು ಮೆದ್ದೆಯಂತೆ , ಅಹ
ಮೂರೆರಡರಿಯದ ಪೋರನ ಮಾತಿಗೆ
ಘೋರ ದಾನವನ ಸಂಹಾರ ಮಾಡಿದೆಯೆಂದು |೧|
ನಾರಿಯೊಬ್ಬಳ ಪೆತ್ತೆಯಂತೆ , ಪೆತ್ತ
ನಾರಿ ಒಬ್ಬಳ ಕೊಯ್ದೆಯಂತೆ ,ನಿನ್ನ
ನಾರಿಚೋರನ ಕೊಂದೆಯಂತೆ , ಅಹ ,
ಊರನಾರಿಯರಿಂದ ಬೈಸಿಕೊಳುತ ಪರ-
ನಾರಿಯರಭಿಮಾನ ಗಾರುಮಾಡಿದೆಯೆಂದು |೨|
ತುರಗರಾವುತನಾದೆಯಂತೆ , ನಿನ್ನ
ಕರದಿ ಕಡೆಗೋಲು ನೇಣಂತೆ , ನಿನ್ನ
ಸರಿ ಧರೆಯೊಳಗಿಲ್ಲವಂತೆ , ಅಹ
ವರದ ಪುರಂದರವಿಠ್ಠಲ ನಿನ್ನಯ
ಪರಿಪರಿ ಮಹಿಮೆಯ ಹರುಷದಿಂದಲಿ ನಾ |೩|
kELide ninnaya suddi , kELide |pa|
nIroLu muLugideyaMte , doDDa
Bara giriya potteyaMte , gaDDe
bEru geNasu meddeyaMte , aha
mUreraDariyada pOrana mAtige
GOra dAnavana saMhAra mADideyeMdu |1|
nAriyobbaLa petteyaMte , petta
nAri obbaLa koydeyaMte ,ninna
nAricOrana koMdeyaMte , aha ,
UranAriyariMda baisikoLuta para-
nAriyaraBimAna gArumADideyeMdu |2|
turagarAvutanAdeyaMte , ninna
karadi kaDegOlu nENaMte , ninna
sari dhareyoLagillavaMte , aha
varada puraMdaraviThThala ninnaya
paripari mahimeya haruShadiMdali nA |3|
Leave a Reply