Composer : Shri Gurujagannatha dasaru
ಇಂದು ನೋಡಿದೆ ನಂದತೀರ್ಥ ಮು –
ನೀಂದ್ರವಂದಿತ ಚರಣನಾ [ಪ]
ವಂದಿಸುವ ಭಕ್ತರಿಗೆ ನಿತ್ಯಾ –
ನಂದ ಫಲದ ಮುಕುಂದನಾ [ಅ.ಪ]
ತಮನವೈರಿಯ ಮಂದರಾದ್ರಿಯ
ಕಮಠರೂಪದಿ ಪೊತ್ತನಾ
ಕಮಲ ಸಂಭವ ಭವನ ಕಶ್ಯಪಿ ದಮನ,
ವಾಮನಮೂರ್ತಿಯಾ [೧ ]
ಭೂಮಿಪರ ಸಂಹರಿಸಿ,
ದಶರಥ ರಾಮನಾಮದಿ ಮೆರೆದನಾ
ಸೋಮಬಾಧಿಪ ವನಸುತನಿಗೊಲಿದು ಸು –
ಗ್ರಾಮದೊಳು ರಕ್ಷಿಸಿದನಾ [೨]
ಬುದ್ಧರೂಪದಿ ತ್ರಿಪುರ ಸತಿಯರ
ಬುಧ್ಧಿ ಭೇದವ ಮಾಡ್ದರಾ
ಯುದ್ಧದಲಿ ಕಲಿಮುಖ್ಯ ಯವನರ
ಗೆದ್ದ ಗಾನವಿಲೋಲನಾ [೩]
ದೇವಕೀ ವಸುದೇವ ತನಯನ
ದೇವಗಣ ಸಂಸೇವ್ಯನಾ
ಈ ವಸುಂಧರೆಯೊಳಗೆ ಮಧ್ವ ಸ –
ರೋವರ ನಿವಾಸನಾ [೪]
ಪೋತವೇಷನ ವೀತಶೋಕನ
ಪೂತನಾದಿ ವಿಘಾತನಾ
ಮಾತರಿಶ್ವ ಪ್ರಿಯ ಗುರುಜಗನ್ನಾಥ
ವಿಠ್ಠಲರಾಯನಾ [೫]
iMdu nODide naMdatIrtha mu –
nIMdravaMdita caraNanA [pa]
vaMdisuva Baktarige nityA –
naMda Palada mukuMdanA [a.pa]
tamanavairiya maMdarAdriya
kamaTharUpadi pottanA
kamala saMBava Bavana kaSyapi damana,
vAmanamUrtiyA [1 ]
BUmipara saMharisi,
daSaratha rAmanAmadi meredanA
sOmabAdhipa vanasutanigolidu su –
grAmadoLu rakShisidanA [2]
buddharUpadi tripura satiyara
budhdhi BEdava mADdarA
yuddhadali kalimuKya yavanara
gedda gAnavilOlanA [3]
dEvakI vasudEva tanayana
dEvagaNa saMsEvyanA
I vasuMdhareyoLage madhva sa –
rOvara nivAsanA [4]
pOtavEShana vItaSOkana
pUtanAdi viGAtanA
mAtariSva priya gurujagannAtha
viThThalarAyanA [5]
Leave a Reply