Narasimhana pada bhajaneya

Composer : Shri Purandara dasaru

TSV Krishnan

ನರಸಿಂಹನ ಪಾದಭಜನೆಯ ಮಾಡೋ ||ಪ||

ನರಸಿಂಹನ ಪಾದಭಜನೆಯ ಮಾಡಲು
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||

ತರಳನ ಮೊರೆ ಕೇಳಿ
ತ್ವರಿತದಿಂದಲಿ ಬಂದು
ದುರುಳನ ಕರುಳ ತನ್ನ
ಕೊರಳಲ್ಲಿ ಧರಿಸಿದ |೧|

ಸುರರೆಲ್ಲ ನಡುಗಲು
ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ
ಸಿರಿ ನರಹರಿ ನಮ್ಮ |೨|

ಹರಿವಿರಿಂಚಾದ್ಯರು
ಕರವೆತ್ತಿ ಮುಗಿಯಲು
ಪರಮಶಾಂತನಾದ ಶ್ರೀ
ಪುರಂದರವಿಠಲ |೩|


narasiMhana pAdaBajaneya mADO ||pa||

narasiMhana pAdaBajaneya mADalu
durita parvatava KaMDisuva kuliSadaMte ||a||

taraLana more kELi
tvaritadiMdali baMdu
duruLana karuLa tanna
koraLalli dharisida |1|

surarella naDugalu
siridEvi moreyiDe
vara kaMBadiM baMda
siri narahari namma |2|

hariviriMcAdyaru
karavetti mugiyalu
paramaSAMtanAda SrI
puraMdaraviThala |3|

Leave a Reply

Your email address will not be published. Required fields are marked *

You might also like

error: Content is protected !!