Composer : Shri Jagannatha dasaru , Raga:Revati
ಶ್ರೀ ಜಗನ್ನಾಥದಾಸಾರ್ಯ ವಿರಚಿತ
ಶ್ರೀ ಲಕ್ಷ್ಮೀನೃಸಿಂಹ ಸುಳಾದಿ
ರಾಗ: ರೇವತಿ
ಧ್ರುವತಾಳ
ದುರಿತವನಕುಠಾರಿ ದುರ್ಜನ ಕುಲವೈರಿ
ಶರಣಾಗತವಜ್ರಪಂಜರ ಕುಂಜರ –
ವರಸಂರಕ್ಷಕ ಜನ್ಮಮರಣರಹಿತ ಮಹಿತ
ಪರಮಕರುಣಾ ಸಿಂಧು ಭಕುತಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರಪುರುಷೋತ್ತಮ
ಉರುಗಾಯ ವೈಕುಂಠವರಮಂದಿರ , ಚಂದಿರ –
ತರಣಿಕೋಟಿಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗನಡೆಸಿದ ಸಂ –
ಗರ ಭಯಂಕರ ಲೋಕೈಕವೀರ
ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ
ಮೊರೆಹೊಕ್ಕ ದಾಸಗೆ ಬಂದ ಭಯವ
ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ
ಸರ್ವರಂತರ್ಯಾಮಿ ಲೋಕಸ್ವಾಮಿ
ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀನೆಮ್ಮ ಪೊರೆವುದೀಗ
ಸರುವಕಾಮದ ಜಗನ್ನಾಥವಿಠ್ಠಲ ಭಕ್ತ –
ಪರಿಪಾಲಕನೆಂಬ ಬಿರುದು ನಿನ್ನದಲ್ಲವೇ || ೧ ||
ಮಟ್ಟತಾಳ
ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ
ಸಧನನಾಗಿ ಇಪ್ಪೆ ನಿನ್ನ ದಾಸರಿಗಾಗಿ
ಮಧುಸೂದನ ಜಗನ್ನಾಥವಿಠ್ಠಲರೇಯ
ನಿಧನನೆನಿಸಿಕೊಂಡೆ ನಿನ್ನ ದ್ವೇಷಿಗಳಿಗೆ || ೨ ||
ರೂಪಕತಾಳ
ಮೂರುಲೋಕಸ್ವಾಮಿ ಸರ್ವಜ್ಞ ಸುಖಪೂರ್ಣ
ಪ್ರೇರಣಸಾಕ್ಷಿ ಕಾರಣಕಾರ್ಯ ದೋಷವಿ-
ದೂರ ಸದ್ಗುಣಸಾಂದ್ರ ಸಜ್ಜನಾಂಬುಧಿಚಂದ್ರ
ಭಾರಕರ್ತ ಜಗಕೆ ನೀನಿರೆ ಎಮ್ಮ ಮ-
ನೋರಥ ಸಲಿಸುವುದೇನಸಾಧ್ಯವೊ ನಿನಗೆ;
ಕ್ರೂರಮಾನವರ ಸಂಹಾರ ಮಾಡಿಸು ಗುರು –
ಮಾರುತನಿಂದತಿ ಶೀಘ್ರವಾಗಿ
ನೀ ರಕ್ಷಿಸೆಂದು ಪ್ರಾರ್ಥಿಸುವ ಭಕ್ತಗೆ ಭೂರಿ
ಸಾರಭಾಗ್ಯವನಿತ್ತು ಕೃಪೆಮಾಡು ಅನುದಿನ
ಶೂರ ಜಗನ್ನಾಥವಿಠ್ಠಲ ನೀನಲ್ಲದಿ-
ನ್ನಾರು ಭಕ್ತರ ಕಾವ ಕರುಣಿಗಳು ಜಗದೀ || ೩ ||
ಝಂಪೆತಾಳ
ಪಿತನಿಂದ ನೊಂದ ಪ್ರಹ್ಲಾದನ ಕಾಯ್ದೆ , ದೇ-
ವತೆಗಳಿಗೆ ಬಂದ ಭಯ ಪರಿಹರಿಸಿ, ದಯದಿ ದ್ರೌ-
ಪತಿಯ ಮೊರೆಕೇಳಿ ದಿವ್ಯಾಂಬರವ ಕರುಣಿಸಿದೆ
ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ-
ವತಿಗೆ ಕರೆದೊಯ್ದು ಒಲಿದವರ ಪೋಷಿಸಿದೆ ; ಮಾ-
ರುತಿಯ ಕರದಿಂದ ಬೃಹದ್ರಥನ ಕುವರನ ಕೊಲಿಸಿ
ಪೃಥಿವಿಪರ ಬಿಡಿಸಿ ಪಾಲಿಸಿದೆ ಕರುಣದಲಿ ; ಕುರು-
ಪೃತನೆಯೊಳು ಪಾಂಡವರ ಗೆಲಿಸಿ ಕೀರ್ತಿಯನಿತ್ತೆ
ಶತಮೋದನಾಸ್ತ್ರದಿಂದಲಿ ಗರ್ಭದೊಳಗೆ ಪೀ-
ಡಿತನಾದ ಶಿಶುಪರೀಕ್ಷಿತನ ಸಂತೈಸಿದೆ
ಶಿತಿಕಂಠಗೊಲಿದು ಸಾಯಕನಾಗಿ ಮುಪ್ಪುರದ
ಸತಿಯರನು ಒಲಿಸಿ ಕೀರುತಿಯಿತ್ತೆ ಭಕುತನಿಗೆ
ಮಿತಿಯುಂಟೆ ನಿನ್ನ ಕರುಣಕ್ಕೆ ದೇವವರ್ಯ ಸಾಂ-
ಪ್ರತ ಬೇಡಿಕೊಂಬೆ ಬಿನ್ನಪಕೇಳಜಸ್ರ ಸಂ-
ಸ್ತುತಿಪ ಭಕುತರ ಮನೋರಥವ ಪೂರೈಸು ಸು-
ವ್ರತನಾಮ ಶ್ರೀಜಗನ್ನಾಥವಿಠ್ಠಲ ಭಾಗ-
ವತಜನಪ್ರೀಯ ನೀನೆ ಗತಿ ಎಮಗೆ ಇಹಪರದಿ || ೪ ||
ತ್ರಿವಿಡಿತಾಳ
ನೀ ಸಲಹಲಿನ್ಯಾರು ಬಂದ-
ಡ್ಡೈಸುವರು ಮೂಲೋಕದೊಳಹೊರ-
ಗೀ ಸಮಸ್ತ ದಿವೌಕಸರು ನಿನ –
ಗೆ ಸಮರ್ಪಕವಾದ ಕಾರ್ಯ ಮ-
ಹಾಸುಖದಿ ನಡೆಸುವರು ನಿರುತ ಲಕ್ಷ್ಮೀ
ದಾಸಿ ಎಂದೆನಿಪಳು ನಿನ್ನರಮನೆಯಲ್ಲಿ
ದೇಶಕಾಲಗುಣಕರ್ಮಾದಿಗಳು ನಿನಗಾ-
ವಾಸಯೋಗ್ಯಸ್ಥಾನವೆಂದೆನಿಪವು
ಈಶಲೋಕತ್ರಯಕೆ ಲೇಸಾಯಾಸ ಕಾಣೆನೋ ಕರು-
ಣಾಸಮುದ್ರನೆ ಒಲಿದು ಎಮ್ಮ ಅಭಿ-
ಲಾಷೆ ಪೂರೈಸೆಂದು ಬೇಡಿಕೊಂಬೆನೋ ; ವೇದ-
ವ್ಯಾಸ ಕೀಟಗೆ ನೀನೇ ಒಲಿದು ಕೊಟ್ಟೆ ಮ –
ಹಾಸಿಂಹಾಸನವನೇರಿಸಿ ಪೊರೆದೆಯೋ ಪ-
ರಾಶರಾತ್ಮಜ ನಿನ್ನ ಗುಣಗಣಬಣ್ಣಿಸೆ
ನಾ ಸಮರ್ಥನೆ ಎಂದಿಗಾದರು ದೇವ
ನೀ ಸುಲಭನೆಂದಾಶ್ರಯಿಸಿಂದು ನಾ ಬಿ –
ನ್ನೈಸಿದೆನೊ ಈ ರೀತಿಯಲ್ಲಿ ಸ-
ರ್ವಾಸುನಿಲಯ ಜಗನ್ನಾಥವಿಠಲರೇಯ
ಈಸು ಮಾತುಗಳ್ಯಾಕೆ ಮನ್ಮನ –
ದಾಸೆ ಪೂರ್ತಿಯ ಮಾಡಿ ಎಮ್ಮನು-
ದಾಸಿಸದೆ ದಯದಿಂದ ನೋಳ್ಪುದು || ೫ ||
ಅಟ್ಟತಾಳ
ನಿಗಮತತಿಗಳಿಗೆ ವೇದ್ಯವಾದ ನಿನ್ನ
ಅಗಣಿತ ಮಹಿಮೆ ಲಕುಮಿಬೊಮ್ಮಭವಾ –
ದಿಗಳು ತಾವರಿಯರು ಸಾಕಲ್ಯದಿ ಮಂದಜೀ –
ವಿಗಳಿಗೆ ಗೋಚರಿಸುವುದೆ ನಿನ್ನ ರೂಪ
ಭಗವಂತ ನೀನೆ ದಯಾಳು ಎಂದರಿದು ನಾ
ಪೊಗಳಿದೆನೊ ಯಥಾಮತಿಯೊಳಗೆ ಲೇಶ
ಬಗೆಯದಿರೆನ್ನಪರಾಧಕೋಟಿಗಳ
ಜಗತ್ಪತಿ ತನ್ನ ಮಗುವಿನ ತೊದಲು ಮಾ –
ತುಗಳನೆ ಕೇಳಿ ತಾ ನಗುತಲಿ ಕಾಮಿತ
ಬಗೆಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವನು
ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ –
ಯುಗನೆ ಬಿಡದೆ ಪಾಡಿ ಪೊಗುಳುವ ದಾಸಗೀ –
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ –
ಲ್ಮೊಗನಯ್ಯ ಅರ್ಥಕಾಮಗಳೊಳಗಿಪ್ಪ ಈ –
ರ್ವಗೆರೂಪ ಒಂದಾಗೆ ಆವುದಸಾಧ್ಯವೊ
ಗಗನಭೂಪಾತಾಳವ್ಯಾಪ್ತರೂಪನೆ ಕರ
ಮುಗಿವೆ ಗೋಚರಿಸೆನ್ನ ದೃಗುಯುಗಗಳಿಗಿಂದು
ಯುಗಕರ್ತ ಶ್ರೀಜಗನ್ನಾಥವಿಠಲ ನರ –
ಮೃಗನಾಗಿ ಸ್ತಂಭದಿಂದೊಗೆದು ಬಂದೊದಗಿದೆ || ೬ ||
ಏಕತಾಳ
ಶ್ರೀನಿಧಿ ಪ್ರತಿದೇಹಂಗಳಲ್ಲಿ ಗತಿ
ನೀನಲ್ಲದೆ ಎನಗಾರಿಹಪರದಲ್ಲಿ
ಆ ನಳಿನಭವಾದ್ಯನಿಮಿಷ –
ರಾ ನಿಜಾನಂದವರಿತು ಫಲಗಳ ಕೊಡುವಿ ಮ –
ಹಾನುಭಾವ ಎಮ್ಮಭಿಮತ ಸಲಿಸುವು
ದೇನಚ್ಚರಿ ನಿನ್ನರಸಿ ಲಕುಮಿ ಕಡೆ –
ಗಾಣಳು ಪರಮೈಶ್ವರ್ಯದ ಪ್ರಾಂತ ಚಿ –
ದಾನಂದಮಯನೆ ಪ್ರಣತರ ಅಧಿಕಾ –
ರಾನುಸಾರ ಸುಖವನಧಿಯೊಳೋಲ್ಯಾಡಿಸುವಿ
ದಾನಿಗಳರಸ ಮನಾದಿಕರಣಗಳಗಭಿ –
ಮಾನಿಗಳಿಗೊಡೆಯನೆನಿಸುವ ಮುಖ್ಯ –
ಪ್ರಾಣಪತಿಗೆ ನೂತನ ವಿಜ್ಞಾಪನ –
ವೇನುಂಟಿನ್ನನುದಿನದಲಿ ಮಾಳ್ಪುದು
ಮಾನದ ಗುರು ಜಗನ್ನಾಥವಿಠ್ಠಲ ಕರು –
ಣಾನಿಧಿ ಸರ್ವದಾ ಸುಲಭ ನೀನಲ್ಲವೆ || ೭ ||
ಜತೆ
ಚಟುಲಕಾರ್ಯಗಳ ಸಂಘಟನೆ ಮಾಡಿಸುವಿ ನಿ –
ಷ್ಕುಟಿಲ ಶ್ರೀಜಗನ್ನಾಥವಿಠ್ಠಲ ದೇವೋತ್ತಮ ||೮||
SrI jagannAthadAsArya viracita
SrI lakShmInRusiMha suLAdi
rAga: rEvati
dhruvatALa
duritavanakuThAri durjana kulavairi
SaraNAgatavajrapaMjara kuMjara –
varasaMrakShaka janmamaraNarahita mahita
paramakaruNA siMdhu BakutabaMdhu
svarata svataMtra jagadBarita citsuKapUrNa
hariye kSharAkSharapuruShOttama
urugAya vaikuMThavaramaMdira , caMdira –
taraNikOTisaMkASa vimalakESa
dhuradoLagarjunana turaganaDesida saM –
gara BayaMkara lOkaikavIra
narasiMha ninna pAdakkeragi binnaisuve
morehokka dAsage baMda Bayava
pariharisi sauKyava karuNisu dayadiMda
sarvaraMtaryAmi lOkasvAmi
smaraNe mAtradi ajAmiLage muktiyanitte
arideno nInemma porevudIga
saruvakAmada jagannAthaviThThala Bakta –
paripAlakaneMba birudu ninnadallavE || 1 ||
maTTatALa
vidhipita nInallade nidhipatigaLu uMTe
sadhananAgi ippe ninna dAsarigAgi
madhusUdana jagannAthaviThThalarEya
nidhananenisikoMDe ninna dvEShigaLige || 2 ||
rUpakatALa
mUrulOkasvAmi sarvaj~ja suKapUrNa
prEraNasAkShi kAraNakArya dOShavi-
dUra sadguNasAMdra sajjanAMbudhicaMdra
BArakarta jagake nInire emma ma-
nOratha salisuvudEnasAdhyavo ninage;
krUramAnavara saMhAra mADisu guru –
mArutaniMdati SIGravAgi
nI rakShiseMdu prArthisuva Baktage BUri
sAraBAgyavanittu kRupemADu anudina
SUra jagannAthaviThThala nInalladi-
nnAru Baktara kAva karuNigaLu jagadI || 3 ||
JaMpetALa
pitaniMda noMda prahlAdana kAyde , dE-
vategaLige baMda Baya pariharisi, dayadi drau-
patiya morekELi divyAMbarava karuNiside
kShitijanAlayadi baLaluva bAleyara dvArA-
vatige karedoydu olidavara pOShiside ; mA-
rutiya karadiMda bRuhadrathana kuvarana kolisi
pRuthivipara biDisi pAliside karuNadali ; kuru-
pRutaneyoLu pAMDavara gelisi kIrtiyanitte
SatamOdanAstradiMdali garBadoLage pI-
DitanAda SiSuparIkShitana saMtaiside
SitikaMThagolidu sAyakanAgi muppurada
satiyaranu olisi kIrutiyitte Bakutanige
mitiyuMTe ninna karuNakke dEvavarya sAM-
prata bEDikoMbe binnapakELajasra saM-
stutipa Bakutara manOrathava pUraisu su-
vratanAma SrIjagannAthaviThThala BAga-
vatajanaprIya nIne gati emage ihaparadi || 4 ||
triviDitALa
nI salahalinyAru baMda-
DDaisuvaru mUlOkadoLahora-
gI samasta divaukasaru nina –
ge samarpakavAda kArya ma-
hAsuKadi naDesuvaru niruta lakShmI
dAsi eMdenipaLu ninnaramaneyalli
dESakAlaguNakarmAdigaLu ninagA-
vAsayOgyasthAnaveMdenipavu
ISalOkatrayake lEsAyAsa kANenO karu-
NAsamudrane olidu emma aBi-
lAShe pUraiseMdu bEDikoMbenO ; vEda-
vyAsa kITage nInE olidu koTTe ma –
hAsiMhAsanavanErisi poredeyO pa-
rASarAtmaja ninna guNagaNabaNNise
nA samarthane eMdigAdaru dEva
nI sulaBaneMdASrayisiMdu nA bi –
nnaisideno I rItiyalli sa-
rvAsunilaya jagannAthaviThalarEya
Isu mAtugaLyAke manmana –
dAse pUrtiya mADi emmanu-
dAsisade dayadiMda nOLpudu || 5 ||
aTTatALa
nigamatatigaLige vEdyavAda ninna
agaNita mahime lakumibommaBavA –
digaLu tAvariyaru sAkalyadi maMdajI –
vigaLige gOcarisuvude ninna rUpa
BagavaMta nIne dayALu eMdaridu nA
pogaLideno yathAmatiyoLage lESa
bageyadirennaparAdhakOTigaLa
jagatpati tanna maguvina todalu mA –
tugaLane kELi tA nagutali kAmita
bagebageyiMda pUrtisi mige haruShadi
bigidappi mOdipanallade SiSuvanu
tegedu bisuTu matte hagegoMbanEnO trai –
yugane biDade pADi poguLuva dAsagI –
bage baDatanavyAko saMsAradoLage nA –
lmoganayya arthakAmagaLoLagippa I –
rvagerUpa oMdAge AvudasAdhyavo
gaganaBUpAtALavyAptarUpane kara
mugive gOcarisenna dRuguyugagaLigiMdu
yugakarta SrIjagannAthaviThala nara –
mRuganAgi staMBadiMdogedu baMdodagide || 6 ||
EkatALa
SrInidhi pratidEhaMgaLalli gati
nInallade enagArihaparadalli
A naLinaBavAdyanimiSha –
rA nijAnaMdavaritu PalagaLa koDuvi ma –
hAnuBAva emmaBimata salisuvu
dEnaccari ninnarasi lakumi kaDe –
gANaLu paramaiSvaryada prAMta ci –
dAnaMdamayane praNatara adhikA –
rAnusAra suKavanadhiyoLOlyADisuvi
dAnigaLarasa manAdikaraNagaLagaBi –
mAnigaLigoDeyanenisuva muKya –
prANapatige nUtana vij~jApana –
vEnuMTinnanudinadali mALpudu
mAnada guru jagannAthaviThThala karu –
NAnidhi sarvadA sulaBa nInallave || 7 ||
jate
caTulakAryagaLa saMGaTane mADisuvi ni –
ShkuTila SrIjagannAthaviThThala dEvOttama ||8||
Leave a Reply