Composer : Shri Purandara dasaru
Toravi Rathotsava – Vaishaka Pournima
ದಾನವನ ಕೊಂದದ್ದಲ್ಲ ಕಾಣಿರೋ ||ಪ||
ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ||
ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳು
ಬಿಚ್ಚಿ ನೋಡಿದರಿನ್ನೆಷ್ಟು ಇದ್ದಾವೊ ಎಂದು [೧]
ನೆಂಟತನವು ಬೆಳೆಯ ಬೇಕೆಂದು ಕರುಳ ಕೊರಳೊಳು
ಗಂಟು ಹಾಕಿ ಕೊಂಡನೆಷ್ಟೊ ದೇಹ
ಸಂಬಂಧದಿಂದ [೨]
ತೊರವೆಯ ನಾರಸಿಂಹ ಪ್ರಹ್ಲಾದ ಪಾಲಕ
ಉರಿಮೋರೆ ದೇವ ನಮ್ಮ ಪುರಂದರ ವಿಠಲ [೩]
dAnavana koMdaddalla kANirO ||pa||
gAna vinOdi namma toreveya narasiMha ||a.pa||
acca puruShaneMba svacca ratna oDaloLu
bicci nODidarinneShTu iddAvo eMdu [1]
neMTatanavu beLeya bEkeMdu karuLa koraLoLu
gaMTu hAki koMDaneShTo dEha
saMbaMdhadiMda [2]
toraveya nArasiMha prahlAda pAlaka
urimOre dEva namma puraMdara viThala [3]
Leave a Reply