Bagilanu teradu

Composer : Shri Kanakadasaru

Shri TSV Krishnan

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ [ಪ]

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರ ವಾರಿಧಿಯೊಳಿರಲು
ಕರಿರಾಜ ಕಷ್ಟದಲ್ಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ [೧]

ಕಡು ಕೋಪದಿಂ ಖಳನು ಖಡ್ಗವನು ಹಿಡಿದು
ನಿನ್ನೊಡೆಯ ಎಲ್ಲಿಹನೆಂದು ನುಡಿಯೇ
ದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಬದಿಂದೊಡೆದೆಯೋ ನರಹರಿಯೇ [೨]

ಯಮಸುತನ ರಾಣಿಗೆ ಅಕ್ಷಯ ವಸನವನಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ [೩]


bAgilanu teredu sEveyanu koDo hariyE
kUgidaru dhvani kELalillavE narahariyE [pa]

paramapadadoLage viShadharana talpadali nI
sirisahita kShIra vAridhiyoLiralu
karirAja kaShTadalli AdimUlA eMdu
kareyalAkShaNa baMdu odagideyO narahariyE [1]

kaDu kOpadiM khaLanu khaDgavanu hiDidu
ninnoDeya ellihaneMdu nuDiyE
dRuDha bhakutiyali shishuvu biDade ninnanu bhajise
saDagaradi kaMbadiMdoDedeyO narahariyE [2]

yamasutana rANige akShaya vasanavanitte
samayadali ajamiLana porede
samayAsamayavuMTe bhaktavatsala ninage
kamalAkSha kAgineleyAdi kEshavane [3]

Leave a Reply

Your email address will not be published. Required fields are marked *

You might also like

error: Content is protected !!