Raga: Mohana
ಶ್ರೀ ವಿಜಯದಾಸರ ಕೃತಿ
ಶ್ರೀ ವೇದವ್ಯಾಸ ದೇವರ ಸ್ತೋತ್ರ ಸುಳಾದಿ
ರಾಗ: ಮೋಹನ
ಧ್ರುವತಾಳ
ಯತಿಗಳ ಶಿರೋರತುನಾ ಸತಿಯು ಅವಿಯೋಗಿ |
ರತಿಪತಿ ಜನಕಾ ಸ್ವರತ ಸ್ವಪ್ರಕಾಶಿತ |
ಅತಿತಾದ್ಭುತ ಮಹಿಮ ಪತಿತ ಪಾವನನಾಮಾ |
ನತಜನ ಸುರಧೇನು ದಿತಿಜ ತಿಮಿರ ಭಾನು
ಅತಿ ದೂರ ದೂರ ಸಂತತ ದಯಾಪರ
ಚತುರ ನಾನಾ ಸುರತತಿ ಕರ ಕಮಲಾ –
ರ್ಚಿತಪಾದ ಸುಂದರ ದೀನ ಮಂದಾರ
ಪ್ರತರ್ದನ ನಾಮ ನಮ್ಮ ವಿಜಯವಿಠ್ಠಲ ಸತ್ಯ –
ವತಿ ಸೂನು ಜಗದೊಳು ಪ್ರತಿಯಿಲ್ಲದ ದಾತಾ || ೧ ||
ಮಟ್ಟತಾಳ
ಜ್ಞಾನಮಯಾಕಾರ ಜ್ಞಾನಮಯಾನಂದ
ಜ್ಞಾನಮಯೈಶ್ವರ್ಯ ಜ್ಞಾನಮಯವರ್ಣ
ಜ್ಞಾನಮಯ ತೇಜಾ ಜ್ಞಾನಮಯ ಶಕ್ತಿ
ಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ-
ಮಾನಿ ವಿಜಯವಿಠ್ಠಲನೆ ನಿನಗೆ ಸಮಾ
ಮೌನಿ ವೃತ ಧೃತನೆ ಜ್ಞಾನ ಸುಖಸಾಂದ್ರಾ || ೨ ||
ತ್ರಿವಿಡಿತಾಳ
ಕಲಿಯ ವ್ಯಾಪಾರ ವೆಗ್ಗಳವಾಗಿ ವ್ಯಾಪಿಸಿ
ಸಲೆ ಧರ್ಮಾವಳಿಗಳು ಅಳಿದು ಪೋಗಿರಲಾಗಿ
ಸುಲಭ ಜ್ಞಾನವೆಲ್ಲ ಮಲಿನದಿಂದಲಿ ಕೆಟ್ಟು
ಇಳಿಯೊಳು ಉತ್ತಮ ಸಂಪ್ರದಾಯಕದಾ
ಸುಳುವು ಕಾಣದೆ ಪೋಗಿ ಅಳಲಿ ಗೀರ್ವಾಣರು
ಜಲಜ ಸಂಭವನು ಒಂದಾಗಿ ನಿಂದೂ
ತಲೆವಾಗಿ ಉಸುರಲು ಬಲವಾಗಿ ವಶಿಷ್ಠ
ಕುಲದಲ್ಲಿ ಜನಿಸೀದ ಬಲದೈವವೇ
ನಳಿನಾಕ್ಷ ಮಹಸಿರಿ ವಿಜಯವಿಟ್ಠಲ ಬದರಿ –
ನಿಲಯ ನಿನ್ನ ಲೀಲೆಗೆ ನೆಲೆಯಾವದೋ ಜೀಯಾ || ೩ ||
ಅಟ್ಟತಾಳ
ಪರಾಶರನ ಉದರದಲ್ಲಿ ಬಂದು
ಮೂರಾರು ಪುರಾಣ ವಿರಚಿಸಿ ಅದರೊಳು
ಆರು ಸತ್ವ ಆರು ರಾಜಸ ತರುವಾಯ
ಆರು ತಾಮಸ ಇನಿತಷ್ಟ ದಶವೆಂದು
ಧಾರುಣಿ ತುಂಬಲು ಕರುಣದಿಂದ
ಸೂರಿ ಮುಕ್ತರಿಗೆ ನಿತ್ಯ ಸಂಸಾರಿಗೆ
ಘೋರ ತಮಸಿಗೆ ಈ ಮೂರು ಪರಿ ಮಾಡಿ
ಕಾರಣವೆನಿಸಿ ಪ್ರತಿಸೃಷ್ಟಿಸಿ ಕಲಿಯ ನಿ –
ವಾರಣವನು ಮಾಡಿದ ಭಾರ ಕರ್ತನೆ ಸುಜ –
ನರಿಗೆ ಜ್ಞಾನವ ಬೋಧಿಸಿ ಸುಕೃತಧ
ದಾರಿಯ ತೋರಿದ ದ್ವಯಪಾಯನ ಮುನಿ
ಈರೇಳು ಭುವನದೊಳಾರು ನಿನಗೆ ಎಣೆ
ಕಾರುಣ್ಯನಿಧಿ ಪುಣ್ಯ ವಿಜಯವಿಟ್ಠಲ ಮುನಿ –
ವರೇಣ್ಯ ಸುರರಗ್ರಗಣ್ಯ ನಿರ್ವಿಣ್ಯಾ || ೪ ||
ಆದಿತಾಳ
ತಮ ಸಂಬಂಧವ ಕಳೆದು ವಿಮಲ ಸುಜ್ಞಾನವನ್ನು
ಅಮರರಿಗೆ ಪಾಲಿಸಿದೆ ಅಮಿತ ತೇಜಸದಿಂದ
ಕಮಂಡಲು ದಂಡಕಾಷ್ಠ ಸಮೀಚಿನವಾದ ಕರ –
ಕಮಲದಲ್ಲಿ ಧರಿಸಿದ ಅಮಲ ಕಾಷಾಯಾಂಬರ ಆ –
ಗಮದರ್ಥ ಶಿಷ್ಯರಿಗೆ ಪ್ರಮೇಯಗಳ ಪೇಳುತ
ಕ್ರಮ ನೂರಾರು ಮಾಡಿದ ಕುಮತಿಯ ಪರಿಹರಿಸಿ
ದಮಯತೆ ನಾಮ ಯತಿ ವಿಜಯವಿಠಲ ನನು
ಪಮಚಿತ್ರ ರಾಜ್ಯವನು ಕ್ರಿಮಿಯಿಂದ ಆಳಿಸಿದೆ || ೫ ||
ಜತೆ
ಬಾದರಾಯಣ ಸುಖ ಕಾರಣ ಭಕುತರಿಗೆ
ವೇದವ್ಯಾಸನೆ ವಿಷ್ಣುವಿಜಯವಿಠ್ಠಲ ವ್ಯಾಸ ||೬||
SrI vijayadAsara kRuti
SrI vEdavyAsa dEvara stOtra suLAdi
raaga: mOhana
dhruvatALa
yatigaLa SirOratunA satiyu aviyOgi |
ratipati janakA svarata svaprakASita |
atitAdButa mahima patita pAvananAmA |
natajana suradhEnu ditija timira BAnu
ati dUra dUra saMtata dayApara
catura nAnA suratati kara kamalA –
rcitapAda suMdara dIna maMdAra
pratardana nAma namma vijayaviThThala satya –
vati sUnu jagadoLu pratiyillada dAtA || 1 ||
maTTatALa
j~jAnamayAkAra j~jAnamayAnaMda
j~jAnamayaiSvarya j~jAnamayavarNa
j~jAnamaya tEjA j~jAnamaya Sakti
j~jAna mayAMbudhi j~jAnavilOla nA-
mAni vijayaviThThalane ninage samA
mauni vRuta dhRutane j~jAna suKasAMdrA || 2 ||
triviDitALa
kaliya vyApAra veggaLavAgi vyApisi
sale dharmAvaLigaLu aLidu pOgiralAgi
sulaBa j~jAnavella malinadiMdali keTTu
iLiyoLu uttama saMpradAyakadA
suLuvu kANade pOgi aLali gIrvANaru
jalaja saMBavanu oMdAgi niMdU
talevAgi usuralu balavAgi vaSiShTha
kuladalli janisIda baladaivavE
naLinAkSha mahasiri vijayaviTThala badari –
nilaya ninna lIlege neleyAvadO jIyA || 3 ||
aTTatALa
parASarana udaradalli baMdu
mUrAru purANa viracisi adaroLu
Aru satva Aru rAjasa taruvAya
Aru tAmasa initaShTa daSaveMdu
dhAruNi tuMbalu karuNadiMda
sUri muktarige nitya saMsArige
GOra tamasige I mUru pari mADi
kAraNavenisi pratisRuShTisi kaliya ni –
vAraNavanu mADida BAra kartane suja –
narige j~jAnava bOdhisi sukRutadha
dAriya tOrida dvayapAyana muni
IrELu BuvanadoLAru ninage eNe
kAruNyanidhi puNya vijayaviTThala muni –
varENya suraragragaNya nirviNyA || 4 ||
AditALa
tama saMbaMdhava kaLedu vimala suj~jAnavannu
amararige pAliside amita tEjasadiMda
kamaMDalu daMDakAShTha samIcinavAda kara –
kamaladalli dharisida amala kAShAyAMbara A –
gamadartha SiShyarige pramEyagaLa pELuta
krama nUrAru mADida kumatiya pariharisi
damayate nAma yati vijayaviThala nanu
pamacitra rAjyavanu krimiyiMda ALiside || 5 ||
jate
bAdarAyaNa suKa kAraNa Bakutarige
vEdavyAsane viShNu vijayaviThThala vyAsa ||6||
Leave a Reply