Narasimha Namisuveno

Composer : Shri Vyasatatvajnaru

By Smt.Shubhalakshmi Rao

Shri Vyasatatvajnaru: 1704 to 1800
Ankita – Vasudeva Vittala
Aradhana day – Shravana Krishna Ashtami
Vrundavana – Veni Somapura
Ashrama Gurugalu – Sri Bhuvanendra Tirtharu
Vidya Shishyaru – Madanooru Vishnu Tirtharu
ಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |
ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||
प्रकटीकृतटीकॊक्तिर्मकटीकृतमायिराट् ।
चकृताव्यासतत्वज्ञमकरींद्र कृपामयि ||
prakaTIkRutaTIkOktirmakaTIkRutamAyirAT |
cakRutAvyAsatatvaj~jamakarIMdra kRupAmayi ||


ಅನ್ಯರಿಂದಲಿ ಸುಖವಾಯಿತೆಂಬುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯಾ |
ಪುಣ್ಯ ಪಾಪವರಿಯದೆ ಬದುಕುವ ಮನುಜನಿಗಿಂತ |
ನಾಯಿ ಕುನ್ನಿ ಲೇಸಯ್ಯಾ |
ಕುಲ ಹೀನನಾದರು ಸುಖ ದುಃಖಗಳು
ನಿನ್ನಿಂದಾಯಿತೆಂಬ ಮತಿ |
ಚೆನ್ನಾಗಿ ತಿಳಿಸಯ್ಯ ಗೋಪಾಲ ವಿಠ್ಠಲ ||

ನರಸಿಂಹ ನರಸಿಂಹ ನಮಿಸುವೆನೊ, ಘೋರ
ದುರಿತ ಬೆನ್ನ ಬಿದ್ದಿದೆ ಪರಿಹರಿಸೋ ಶ್ರೀ ನರಸಿಂಹ [ಪ]

ಪರಮೇಷ್ಠಿ ಹರ ಸುರಪತಿ ಮುಖರಾ
ಸುರನಿಕರ ಪೊರೆವ ಪ್ರಭೊ ಪ್ರವರ
ದುರಿತವು ಅವರನ್ನ ಬಾಧಿಸದಂತೆ
ಪೊರೆವ ಪರಿಯಿಂದ ಎನ್ನ ಪೊರೆಯೊ [೧]

ಕಾಯ್ದು ತನ್ನಯ ತನ್ನ ತಂದೆಯ ಬಾಧೆ
ಭಯದಿಂದ ಮನದಲ್ಲಿ ನಿನ್ನ ನೆನಿಯೆ
ದಯದಿಂದ ನೀ ಕಂಭದಲಿ ಬಂದು ಪೊರೆದಂತೆ
ಎನ್ನ ಭಯ ಪರಿಯೆ ಶ್ರೀ ನರಸಿಂಹ [೨]

ನಿನ್ನ ಪೆಸರಂದರೆ ದುರಿತಂಗಳು
ತನ್ನಿಂದ ತಾನೆ ಜರಿಯುವವು
ಚನ್ನಾಗಿ ಶರಣರ ಪೊರೆದದಕೆ
ನಿನ್ನವರೆಂದು ಕೇಳಿ ಬಲ್ಲೆ ಶ್ರೀ ನರಸಿಂಹ [೩]

ನಖ ಮುಖ ಶಿಖಿ ತನ್ನ ನೆನೆಯೆ
ಸುಖಿತರವಾಹೋದು ಶರಣರಿಗೆ
ಮಖಭುಜ ರವಿ ಸಾಕ್ಷಿ ಇದಕಾಗಿರೆ
ವಿಖನಸಾರ್ಚಿತ ಪಾದ
ಸುಖಮಯನೆ ಶ್ರೀ ನರಸಿಂಹ [೪]

ಅರಿದರೀಧರ ವರ ಕರಯುಗನೆ
ಕರಯುಗ ಜಾನು ಶಿಖರದಲ್ಲಿಪ್ಪನೆ
ಶಿರದಿಂದೊಪ್ಪುವ ಕರತಳನೆ
ವರ ವಾಸುದೇವ ವಿಠಲ ಪೊರೆಯೊ
ಶ್ರೀ ನರಸಿಂಹ [೫]


anyariMdali suKavAyiteMbudakkiMta
ninniMdAyiteMba klESa mElayya
ninnanariyade anyara balleneMbudakkiMta
kaNNilladiruva kuruDa mElayyA |
puNya pApavariyade badukuva manujanigiMta |
nAyi kunni lEsayyA |
kula hInanAdaru suKa duHKagaLu
ninniMdAyiteMba mati |
cennAgi tiLisayya gOpAla viThThala ||

narasiMha narasiMha namisuveno, GOra
durita benna biddide pariharisO SrI narasiMha [pa]

paramEShThi hara surapati muKarA
suranikara poreva praBo pravara
duritavu avaranna bAdhisadaMte
poreva pariyiMda enna poreyo [1]

kAydu tannaya tanna taMdeya bAdhe
BayadiMda manadalli ninna neniye
dayadiMda nI kaMBadali baMdu poredaMte
enna Baya pariye SrI narasiMha [2]

ninna pesaraMdare duritaMgaLu
tanniMda tAne jariyuvavu
cannAgi SaraNara poredadake
ninnavareMdu kELi balle SrI narasiMha [3]

naKa muKa SiKi tanna neneye
suKitaravAhOdu SaraNarige
maKaBuja ravi sAkShi idakAgire
viKanasArcita pAda
suKamayane SrI narasiMha [4]

aridarIdhara vara karayugane
karayuga jAnu Sikharadallippane
SiradiMdoppuva karataLane
vara vAsudEva viThala poreyo
SrI narasiMha [5]

Leave a Reply

Your email address will not be published. Required fields are marked *

You might also like

error: Content is protected !!