Composer : Shri Vijayadasaru
ಭಳಿರೆ ಭಳಿರೆ ನಾರಸಿಂಹ ಮಹಸಿಂಹ,
ಮಲಮಲಮಲತವರ ವೈರಿ ಉರಿಮಾರೀ [ಪ]
ನಗನಗನಗಳಲ್ಲಾಡೆ ಚತುರ್ದಶ,
ಜಗಜಗಜಗವೆಲ್ಲ ಕಂಪಿಸಿ ಕೆಂಪಾಗೆ,
ಹಗೆಹಗೆಹಗೆ ಬಲವ ದೆಶೆ ಗೆಡಿಸಿ ರೋಷಗಿಡಿ,
ಉಗುಉಗುಉಗುಳುತ್ತ ಬಂದ ನರಸಿಂಹ [೧]
ಬಿಗಿಬಿಗಿಬಿಗಿಬಿಗಿದು ಹುಬ್ಬು ಗಂಟನೆ ಹಾಕಿ,
ಹೊಗೆಹೊಗೆಹೊಗೆಸುತ್ತೆ ಸರ್ವರಂಜಿ
ನೆಗೆನೆಗೆನೆಗೆನೆಗೆದು ಕುಪ್ಪಳಿಸಿ ಅಸುರನ್ನ,
ಮಗುಮಗುಮಗು ಬೇಡಿಕೊಂಡ ನರಸಿಂಹ [೨]
ಉಗುಉಗುಉಗುರಿಂದ ಕ್ರೂರನ್ನ ಹೇರೊಡಲ,
ಬಗೆಬಗೆಬಗೆಬಗೆದು ರಕುತ ವನ್ನು,
ಉಗಿಉಗಿಉಗಿಉಗಿದು ಚೆಲ್ಲಿ ಕೊರಳಿಗೆ ಕರುಳ,
ತೆಗೆತೆಗೆತೆಗೆದಿಟ್ಟ ನಾರಸಿಂಹ [೩]
ಯುಗಯುಗಯುಗದೊಳಗೆ ಪ್ರಣತಾರ್ತಿಹರನೆಂದು,
ಝಗಝಗಝಗಝಗಿಪ ಮುಕುಟ ತೂಗೇ,
ನಗುನಗುನಗುನಗುತ ಸುರರು ಗಗಗನದಿ ನೆರೆದು,
ಮಿಗಿಮಿಗಿಮಿಗಿಲೆನೆ ನಾರಸಿಂಹ [೪]
ಒಂದೊಂದೊಂದೊಂದೊಂದು ಮುನಿಗಳಿಗೆ ಒಲಿದು,
ಅಂದಂದಂದಂದದಿಗಾಯ ತಾ ಒಲಿದು,
ಅಂದಂದಂದವಕಾವ ಚೋಳಂಗಿರಿ,
ಮಂದಿರನೆ ವಿಜಯ ವಿಠ್ಠಲ ನಾರಸಿಂಹ [೫]
bhaLire bhaLire nArasiMha mahasiMha,
malamalamalatavara vairi urimArI [pa]
naganaganagaLallADe chaturdasha,
jagajagajagavella kaMpisi keMpAge,
hagehagehage balava deshe geDisi rOShagiDi,
uguuguuguLutta baMda narasiMha [1]
bigibigibigibigidu hubbu gaMTane hAki,
hogehogehogesutte sarvaraMji
negenegenegenegedu kuppaLisi asuranna,
magumagumagu bEDikoMDa narasiMha [2]
uguuguuguriMda krUranna hEroDala,
bagebagebagebagedu rakuta vannu,
ugiugiugiugidu celli koraLige karuLa,
tegetegetegediTTa nArasiMha [3]
yugayugayugadoLage praNatArtiharaneMdu,
jhagajhagajhagajhagipa mukuTa tUgE,
nagunagunagunaguta suraru gagaganadi neredu,
migimigimigilene nArasiMha [4]
oMdoMdoMdoMdoMdu munigaLige olidu,
aMdaMdaMdaMdadigAya tA olidu,
aMdaMdaMdavakAva cOLaMgiri,
maMdirane vijaya viThThala nArasiMha [5]
Leave a Reply