Composer : Shri Pradyumna Tirtharu [Sagarakatte Matha]
ಬಾದರಾಯಣ ಮದದಿ ಮರೆತೆನೊ
ಸದಯದಿಂ ಮುದ ಪಾಲಿಸೊ (ಪ)
ಬೋಧ ಮೂರುತೆ ಭಕ್ತರಾ ನುಡಿ
ಸಾದರದಿ ನೀನಾಲಿಸೋ (ಅ.ಪ)
ವೇದಭಾಗವ ಮಾಡಿ
ವೇದವ್ಯಾಸನೆಂದೆನಿಸಿದಿ
ಸದಮಲಾಭಾವದಲಿ ನಿನ್ನಯ
ಪಾದ ಕಮಲವ ತೋರಿದಿ [೧]
ಮೋದ ಚಿನ್ಮಯ ಗಾತ್ರ
ಎನ್ನಯ ಖೇದ ಭಾವವನೋಡಿಸೊ
ಮೋದತೀರ್ಥ ಹೃದಾಬ್ಜ ಮಂದಿರ
ಸಾಧು ಸಂಗವ ಮಾಡಿಸೋ [೨]
ತರ್ಕ ಮುಧ್ರಾಧರನೆ ಎನ್ನ
ಕುತರ್ಕ ಬುದ್ಧಿಯ ನೋಡಿಸೋ
ಅರ್ಕ ಸನ್ನಿಭ ಬ್ರಹ್ಮ ಸುತರ್ಕ
ಮಾರ್ಗವ ಬೋಧಿಸೋ [೩]
ಅಭಯ ಪ್ರದಕರ ಎನ್ನಭವ
ಭಯ ತ್ರಿಭುವನೇಶ್ವರ ಓಡಿಸೀ
ಇಭವರದ ಮಧ್ವೇಶ ಸಂತತ
ಸಭೆಯ ಸಹನೀ ತೋರೆಲೊ [೪]
ಯೋಗ ಪೀಠನೆ ನೀಗಿಸೆನ್ನಯ
ಭೋಗ ಬುದ್ಧಿಯ ಸರ್ವದಾ
ಯೋಗಿಕುಲವರ ಬಾಗಿ ನಮಿಸುವೆ
ಯೋಗಮಾರ್ಗವ ತೋರಿಸೊ [೫]
ಮಾ ಕಮಲಜ ಭವೇಂದ್ರವಂದಿತ
ಮಾಕಳತ್ರ ನಮೋಸ್ತುತೇ
ಯಾಕೆ ಎನ್ನಲಿ ನಿರ್ದಯವು
ನೀ ಸಾಕಲಾರದ ಪಾಪಿಯೇ [೬]
ಸನ್ನುತಿಸಿ ನಾ ನಿನ್ನ ಬೇಡುವೆ
ಸನ್ನುತಾಂಘ್ರಿಯ ಸೇವೆಯಾ
ಸನ್ಮುನೀವರ ಶ್ರೀ ನರಹರೆ
ದಾಸದಾಸರ ದಾಸ್ಯವಾ [೭]
bAdarAyaNa madadi mareteno
sadayadiM muda pAliso (pa)
bOdha mUrute BaktarA nuDi
sAdaradi nInAlisO (a.pa)
vEdaBAgava mADi
vEdavyAsaneMdenisidi
sadamalABAvadali ninnaya
pAda kamalava tOridi [1]
mOda cinmaya gAtra
ennaya KEda BAvavanODiso
mOdatIrtha hRudAbja maMdira
sAdhu saMgava mADisO [2]
tarka mudhrAdharane enna
kutarka buddhiya nODisO
arka sanniBa brahma sutarka
mArgava bOdhisO [3]
aBaya pradakara ennaBava
Baya triBuvanESvara ODisI
iBavarada madhvESa saMtata
saBeya sahanI tOrelo [4]
yOga pIThane nIgisennaya
BOga buddhiya sarvadA
yOgikulavara bAgi namisuve
yOgamArgava tOriso [5]
mA kamalaja BavEMdravaMdita
mAkaLatra namOstutE
yAke ennali nirdayavu
nI sAkalArada pApiyE [6]
sannutisi nA ninna bEDuve
sannutAMGriya sEveyA
sanmunIvara SrI narahare
dAsadAsara dAsyavA [7]
Leave a Reply