Pondi bhajiso niruta

Composer : Shri Shyamasundara dasaru

By Smt.Shubhalakshmi Rao

Shri Suvrateendra Tirtharu : 1926-1933
Rayara Matha , Vrundavana – Mantralaya
Aradhane : Vaishaka Shukla Ekadashi

ಸುಶೀಲೇಂದ್ರಕರಾಜ್ಯೋತ್ಯಂ ಸುಶಾಂತ್ಯಾದಿಗುಣಾರ್ಣವಂ |
ಸುಧಾಪ್ರವಚನಾಸಕ್ತಂ ಸುವತೀಂದ್ರಗುರುಂ ಭಜೇ ||

सुशीलेंद्रकराब्जोत्थं सुशांत्यादिगुणार्णवं ।
सुधाप्रवचनासक्तं सुव्रतींद्रगुरुं भजे ॥


ಪೊಂದಿ ಭಜಿಸೊ ನಿರುತಾ ಮಾನವ ಮಹಿ |
ವೃಂದಾರಕ ವ್ರಾತಾ || ಪ ||

ವಂದಿತ ಶ್ರೀ ಸುಯಮೀಂದ್ರರ | ಹೃದಯಾರ |
ವಿಂದ ಭಾಸ್ಕರುಪೇಂದ್ರರ ಪದಯುಗ || ಅ.ಪ ||

ಧರೆಯೊಳು ದ್ವಿಜನಿಕರ ಉದ್ಧರಿಸಲು |
ಗುರುವರ ಸುಶೀಲೇಂದ್ರರ |
ಕರದಿ ತುರ್ಯಾಶ್ರಮ ಧರಿಸುತ | ಶ್ರೀ ಮೂಲ |
ತರಣಿ ಕುಲೇಂದ್ರನ ಚರಣವ ಪೂಜಿಸಿ |
ಮರುತ ಶಾಸ್ತ್ರವ ಭಕ್ತಿ ಪೂರ್ವಕ |
ನಿರುತ ಪ್ರವಚನಗೈದು | ಶಿಷ್ಯರಿ |
ಗೊರೆದು ಕರುಣದಿ ಪೊರೆದ ಪಾವನ |
ಚರಿತರಡಿದಾವರೆಗಳ್ ಹರುಷದಿ || ೧ ||

ಸಲೆಭಕ್ತಿ ವಿರಕುತಿ ಸುಶಾಂತ್ಯಾದಿ |
ಹಲವು ಸದ್ಗುಣ ಪ್ರತತಿ |
ಕಲಿಯೊಳಿಳೆಯೊಳು ಸ್ಥಳವ ಕಾಣದೆ ವಿಧಿ |
ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ |
ಇಳೆಯೊಳಗೆ ಸುವ್ರತೀಂದ್ರತೀರ್ಥರ |
ಚಲುವ ಹೃದಯ ಸ್ಥಾನ ತೋರೆ |
ಬಳಿಕ ಸುಗುಣಾವಳಿಗಳಿವರೊಳು |
ನೆಲೆಸಿದವು ಇಂಥ ಅಲವು ಮಹಿಮರ || ೨ ||

ಶಿರಿಯಾಶ್ಯ ವತ್ಸರದಿ ಸುವೈಶಾಖ |
ವರ ಮಾಸ ಶಿತ ಪಕ್ಷದಿ |
ಹರಿದಿನದಲಿ ದಿವ ಮೂರನೆಯಾಮದಿ |
ವರ ಮಂತ್ರ ಮಂದಿರ ಪರಮ ಸುಕ್ಷೇತ್ರದಿ |
ಸಿರಿ ಮನೋಹರ ಶ್ಯಾಮಸುಂದರ |
ಸರಸಿಜಾಂಘ್ರಿಯ ಸ್ಮರಿಸುತಲಿ ಶುಭ |
ಕರ ಸುಲಯ ಚಿಂತನೆಯಗೈಯುತ |
ಹರಿಪುರಕೆ ಪೊರಮಟ್ಟ ಗುರುಪದ || ೩ ||


poMdi Bajiso nirutA mAnava mahi |
vRuMdAraka vrAtA || pa ||

vaMdita SrI suyamIMdrara | hRudayAra |
viMda BAskarupEMdrara padayuga || a.pa ||

dhareyoLu dvijanikara uddharisalu |
guruvara suSIlEMdrara |
karadi turyASrama dharisuta | SrI mUla |
taraNi kulEMdrana caraNava pUjisi |
maruta SAstrava Bakti pUrvaka |
niruta pravacanagaidu | SiShyari |
goredu karuNadi poreda pAvana |
caritaraDidAvaregaL haruShadi || 1 ||

saleBakti virakuti suSAMtyAdi |
halavu sadguNa pratati |
kaliyoLiLeyoLu sthaLava kANade vidhi |
baLige binnaisalu naLinaja yOcisi |
iLeyoLage suvratIMdratIrthara |
caluva hRudaya sthAna tOre |
baLika suguNAvaLigaLivaroLu |
nelesidavu iMtha alavu mahimara || 2 ||

SiriyAshya vatsaradi suvaiSAKa |
vara mAsa Sita pakShadi |
haridinadali diva mUraneyAmadi |
vara maMtra maMdira parama sukShEtradi |
siri manOhara SyAmasuMdara |
sarasijAMGriya smarisutali SuBa |
kara sulaya ciMtaneyagaiyuta |
haripurake poramaTTa gurupada || 3 ||

Leave a Reply

Your email address will not be published. Required fields are marked *

You might also like

error: Content is protected !!