Composer : Shri Yeri Sheshacharyaru
ಪೂಜೆ ಮಾಡಿದ ನೃಪನು ರಂಗಗೆ ಪೂಜೆ ಮಾಡಿದ |
ವರ ಪೂಜೆ ಮಾಡಿದ ನೃಪನು ರಂಗಗೆ ಪೂಜೆ ಮಾಡಿದ [ಪ]
ಪೂಜೆ ಮಾಡಿದ ಬಲು ಸಖಿ ಧರಣೀ
ರಾಜಿತನಾಗಿ ಗಗನ ರಾಜೇಂದ್ರನು ಹರಿಗೆ [ಅ.ಪ]
ಮುತ್ತು ಮೊದಲಾದ ನವರತ್ನ ಖಚಿತಧಾಮ
ಸತ್ಯ ಸಂಕಲ್ಪ ಪುರುಷೋತ್ತಮಗೆ [೧]
ಸಿಂಹಾಸನದ ಮೇಲೆ ಶ್ರೀ ಲಕ್ಷ್ಮೀ ಅರಸಗೆ
ಸಮ್ಮತವಾದ ಶ್ರೀ ತುಲಸೀ ಮಲ್ಲಿಗೆಯನಿಟ್ಟು [೨]
ಚಿತ್ರವಾದನೇಕ ವಸ್ತ್ರಗಳನೆ ಕೊಟ್ಟು
ಕ್ಷೇತ್ರ ಯೇರಿ ವೇಂಕಟ ಸತ್ಪಾತ್ರನೆಂದು [೩]
pooje mADida nRupanu raMgage pooje mADida |
vara pooje mADida nRupanu raMgage pooje mADida [pa]
pooje mADida balu sakhi dharaNI
rAjitanAgi gagana rAjEMdranu harige [a.pa]
muttu modalAda navaratna khachitadhAma
satya saMkalpa puruShOttamage [1]
siMhAsanada mEle shrI lakShmI arasage
sammatavAda shrI tulasI malligeyaniTTu [2]
chitravAdanEka vastragaLane koTTu
kShEtra yEri vEMkaTa satpAtraneMdu [3]
Leave a Reply