Composer : Shri Vyasa vittala [Kalluru Subbanacharya]
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ|
ಪೊಳೆವ ನೀರೊಳು ಗೆಲುವ ಮೋರೆಯ
ನೆಲವ ನೋಡುವ ಸುಳಿವ ಕಂಬದಿ
ಇಳೆಯನಳೆಯುವ ಭಳಿರೆ ಭಾರ್ಗವ
ಖಳನ ಛೇಧಿಸಿ ಕೊಳಲಧ್ವನಿಗೆ
ನಳಿನ ಮುಖಿಯರ ನಾಚಿಸುವ ಬಲು
ಹಯದಳದ ಬಹು ಹವಣೆಗಾರನೆ |ಅ.ಪ್.|
ಆರು ಬಲ್ಲರು ನಿನ್ನ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮ
ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ
ನೀರೊಳಗೆ ಮನೆ ಭಾರ ಬೆನ್ನಿಲಿ ಕೋರೆದಾಡೆಯ ನಾರಸಿಂಹನೆ
ಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆ
ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ |೧|
ಸಕಲಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು
ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು
ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ
ಯುಕುತಿಯಲಿ ನೆಲನಳೆದ ಭಾರ್ಗವ ಮುಕುತಿಗೋಸುಗ ಫಲವ ಸವಿದನೆ
ರುಕುಮನನುಜೆಯ ರಮಣ ಬೌದ್ಧನೆ ಲಕುಮಿರಮಣನೆ ಕಲ್ಕಿರೂಪಿಯೆ |೨|
ನಿನ್ನ ರೂಪಿನ ಲೀಲಾ ನೋಡುವ ಜನಕೆ ಕಣ್ಣು ಸಾವಿರವಿಲ್ಲ
ನಾ ಪಾಡಿ ಪೊಗಳಲು ಪನ್ನಗಾಧಿಪನಲ್ಲ ನೀನರಿಯದಿಲ್ಲ
ಕಣ್ಣುಮುಚ್ಚದೆ ಬೆನ್ನು ತೋರುವಿ ಮಣ್ಣು ಕೆದರುವಿ ಚಿಣ್ಣಗೊಲಿದನೆ
ಸಣ್ಣವಾಮನ ಅಣ್ಣರಾಮನೆ ಪುಣ್ಯಪುರುಷನೆ ಬನ್ನ ಬಡಕನೆ
ಹೆಣ್ಣುಗಳ ವ್ರತಕೆಡಿಸಿ ತೇಜಿಯ ಬೆನ್ನನೇರಿದ ವ್ಯಾಸವಿಠಲ |೩|
tiLiyadO ninnATa tirupatiya veMkaTa |pa|
poLeva nIroLu geluva mOreya
nelava nODuva suLiva kaMbadi
iLeyanaLeyuva BaLire BArgava
KaLana CEdhisi koLaladhvanige
naLina muKiyara nAcisuva balu
hayadaLada bahu havaNegArane |a.p.|
Aru ballaru ninna SrI lakumiya manasige tOruviyo parabomma
uLidavaru ballare nIrajAsana bomma idu ninna marma
nIroLage mane BAra bennili kOredADeya nArasiMhane
dhareya bEDida dhIrapuruShane vAribaMdhana mArajanakane
nAriyara vratavaLidu kudureyanEri mereyuva suMdarAMgane |1|
sakalamAyavidEnu vRukana vAyu saKana salahide nInu
BakutiyiMdali tutiparige suradhEnu surakAmadhEnu
niKiLa vEdOddhAra giridhara aKiLa BUmiya taMda narahari
yukutiyali nelanaLeda BArgava mukutigOsuga Palava savidane
rukumananujeya ramaNa bauddhane lakumiramaNane kalkirUpiye |2|
ninna rUpina lIlA nODuva janake kaNNu sAviravilla
nA pADi pogaLalu pannagAdhipanalla nInariyadilla
kaNNumuccade bennu tOruvi maNNu kedaruvi ciNNagolidane
saNNavAmana aNNarAmane puNyapuruShane banna baDakane
heNNugaLa vratakeDisi tEjiya bennanErida vyAsaviThala |3|
Leave a Reply