Composer : Shri Guru Shrisha vittala
ಶ್ರೀನಿವಾಸನೆ ಏನು ಬೇಡಲಿ ನಿನ್ನ … ಧ್ಯಾನದೊಳಿರಿಸೆನ್ನ [ಪ]
ನಾನಾವಿಷಯದಿ ಪೋಗಲಿಸದೆ ಮನಸು – ನಿನ್ನಲ್ಲೇ ನಿಲಿಸು |
ನಾನು ನನ್ನದು ಎಂಬ ದುರಭಿಮಾನ-ದಿಂದಲಿ ಹೀನ – |
ಯೋನಿ ಎಂಭತ್ತುನಾಲ್ಕು ಲಕ್ಷಗಳೆತ್ತಿ – ಬಂದೆನು ಸುತ್ತೀ |
ಏನು ಹೇಳಲಿ ಇನ್ನು ಅದರ ಸಂಗ – ಬಹುಮಾನವು ಭಂಗ [೧]
ಎಲ್ಲಿ ನೋಡಿದರು ಅಲ್ಲಿ ನಿನ್ನ ರೂಪ – ತೋರಯ್ಯ ಭೂಪ |
ಸೊಲ್ಲು ಸೊಲ್ಲಿಗೆ ನಿನ್ನ ದಿವ್ಯನಾಮ – ನುಡಿಸಯ್ಯ ಸುಧಾಮ |
ಪುಲ್ಲನಾಭ ನಿನ್ನ ಮಂಗಳ ಕಥೆಗಳನ್ನ – ಕೇಳಿಸೊ ಅನುದಿನ |
ಎಲ್ಲ ಕಾಲದಿ ನಿನಗರ್ಪಿತ ಶ್ರೀತುಳಸೀ – ಆಘ್ರಾಣಿಸುವೆ ಸುಖಿಸೀ [೨]
ಶ್ರೀಶ ನಿನ್ನ ನಿಜದಾಸರ ಸಹವಾಸ – ದಲ್ಲಿರಿಸೋ ಈಶ |
ಏಸು ಜನ್ಮಗಳು ಬಂದರೆ ಬರಲಯ್ಯಾ – ಪರಿಹರಿಸೋ ಜೀಯಾ |
ಭೂಸುರದೇಹವು ಇತ್ತದಕೆ ಪಾರ್ಥ – ಸಖ ಗುಣ ಪುರುಷಾರ್ಥ
ವಾಸುದೇವ ಗುರುಶ್ರೀಶವಿಠ್ಠಲ ಸ್ವಾಮಿ – ಸರ್ವಾಂತರ್ಯಾಮಿ [೩]
SrInivAsane Enu bEDali ninna … dhyAnadoLirisenna [pa]
nAnAviShayadi pOgalisade manasu – ninnallE nilisu |
nAnu nannadu eMba duraBimAna-diMdali hIna – |
yOni eMBattunAlku lakShagaLetti – baMdenu suttI |
Enu hELali innu adara saMga – bahumAnavu BaMga [1]
elli nODidaru alli ninna rUpa – tOrayya BUpa |
sollu sollige ninna divyanAma – nuDisayya sudhAma |
pullanABa ninna maMgaLa kathegaLanna – kELiso anudina |
ella kAladi ninagarpita SrItuLasI – AGrANisuve suKisI [2]
SrISa ninna nijadAsara sahavAsa – dallirisO ISa |
Esu janmagaLu baMdare baralayyA – pariharisO jIyA |
BUsuradEhavu ittadake pArtha – saKa guNa puruShArtha
vAsudEva guruSrISaviThThala svAmi – sarvAMtaryAmi [3]
Leave a Reply