Composer : Shri Vijayadasaru
ಶೇಷವಾಹನನಾಗಿ ಬಂದ ಶ್ರೀನಿವಾಸ |
ವಾಸುದೇವ ವಾಸವ ಪ್ರೀಯಾ ||ಪ||
ಅಜಭವ ಸುರಮುನಿ ವ್ರಜನಾನಾ ಬಗೆಯಲಿ |
ಭಜನೆ ಮಾಡುತ ಬಲು ನಿಜಮನದಲಿ ನೋಡೇ ||ಅ.ಪ||
ಛತ್ರಚಾಮರ ಜನರು ಸ್ತೋತ್ರ ಸಂಗೀತನಾದ |
ಧಾತ್ರಿ ತುಂಬಿರಲು ಸರ್ವತ್ರ ವ್ಯಾಪಕ ದೇವ ||೧||
ಗಂಧರ್ವಗಣ ನಲುವಿಂದ ಪಾಡಲು ಭೇರಿ
ದುಂದುಭಿ ವಾದ್ಯ ಆನಂದ ನುಡಿಯುತಿರೆ ||೨||
ಇಕ್ಕಿದ ವರಕಲ್ಪ ದಿಕ್ಕು ಬೆಳಗುತಿರೆ
ಬೊಕ್ಕ ದೈವವೇ ಶುದ್ಧ ಭಕ್ತರ ಒಡಗೂಡಿ ||೩||
ಇಷ್ಟ ಮೂರುತಿ ಮನೋಭೀಷ್ಟ ಪಾಲಿಪ
ವಿಜಯ ವಿಠ್ಠಲ ವೆಂಕಟೇಶ ಬೆಟ್ಟದೊಡೆಯ ಇಂದು ||೪||
SEShavAhananAgi baMda SrInivAsa |
vAsudEva vAsava prIyA ||pa||
ajaBava suramuni vrajanAnA bageyali |
Bajane mADuta balu nijamanadali nODE ||a.pa||
CatracAmara janaru stOtra saMgItanAda |
dhAtri tuMbiralu sarvatra vyApaka dEva ||1||
gaMdharvagaNa naluviMda pADalu BEri
duMduBi vAdya AnaMda nuDiyutire ||2||
ikkida varakalpa dikku beLagutire
bokka daivavE Suddha Baktara oDagUDi ||3||
iShTa mUruti manOBIShTa pAlipa
vijaya viThThala veMkaTESa beTTadoDeya iMdu ||4||
Leave a Reply