Neeniruleliddi helayya

Composer : Shri Purandara dasaru

By Smt.Shubhalakshmi Rao

ನೀನಿರುಳೆಲ್ಲಿದ್ದಿ ಹೇಳಯ್ಯ|| ಪ ||
ಶ್ರೀನಿವಾಸಮೂರುತಿ ಗೋವಳರಾಯ || ಅ.ಪ ||

ಪಾಲಸಾಗರದಿ ಹಾವಿನ ಮ್ಯಾಲೆ ತಳಿ – |
ರಾಲದೆಲೆಯ ಮ್ಯಾಲೆ ಯಶೋದೆಯ ||
ತೋಳಿನ ಮ್ಯಾಲೆ ಗೋಪಿಯರಲ್ಲಿ ಕ್ರತು – |
ಶಾಲೆಯೊಳರಸಿ ನೋಡಿದರಿಲ್ಲ || ೧ ||

ಕಡೆವಲ್ಲಿ ತುರುವಿಂಡುಗಳಲ್ಲಿ ಸತ್ಯ |
ನುಡಿವಲ್ಲಿ ಎಡೆಗಾಣಿಸದಲ್ಲಿ ||
ಮಡದಿ ರುಗ್ಮಿಣಿ ಜಾಂಬವತಿಯರಲ್ಲಿ ನಿ – |
ನ್ನಡಿಗಡಿಗರಸಿ ನೋಡಿದರಿಲ್ಲ || ೨ ||

ಏಕಾದಶಿಯ ಜಾಗರದಲ್ಲಿ ಪುಣ್ಯ – |
ಲೋಕಪಾವನ ಭಾಗವತರಲ್ಲಿ ||
ವ್ಯಾಖ್ಯಾನ ತೆಗೆದು ನೋಡಿದರಿಲ್ಲ ಜಗ – |
ದೇಕ ಪುರಂದರವಿಠ್ಠಲ || ೩ ||


nIniruLelliddi hELayya|| pa ||
SrInivAsamUruti gOvaLarAya || a.pa ||

pAlasAgaradi hAvina myAle taLi – |
rAladeleya myAle yaSOdeya ||
tOLina myAle gOpiyaralli kratu – |
SAleyoLarasi nODidarilla || 1 ||

kaDevalli turuviMDugaLalli satya |
nuDivalli eDegANisadalli ||
maDadi rugmiNi jAMbavatiyaralli ni – |
nnaDigaDigarasi nODidarilla || 2 ||

EkAdaSiya jAgaradalli puNya – |
lOkapAvana BAgavataralli ||
vyAKyAna tegedu nODidarilla jaga – |
dEka puraMdaraviThThala || 3 ||

Leave a Reply

Your email address will not be published. Required fields are marked *

You might also like

error: Content is protected !!