Mangala snanava maadelo

Composer : Shri Anantadreesharu

By Smt.Shubhalakshmi Rao

ಮಂಗಳ ಸ್ನಾನವ ಮಾಡೇಳೋ
ಜಗನ್ ಮಂಗಳದಾಯಕ ಹರಿಯೇ ದಯಾಳೋ [ಪ]

ಸಣ್ಣ ನಾಮವ ಬರೆದಿಟ್ಟು ಬಹು
ಬಣ್ಣದ ಕುಂಕುಮ ಮಧ್ಯದಲಿಟ್ಟು
ಸಣ್ಣಿಟ್ಟು ಕಸ್ತೂರಿ ಬೊಟ್ಟು
ಮಾಡು ಪುಣ್ಯಾಹವಾಚನ ಪೀತಾಂಬರುಟ್ಟು [೧]

ದೇವರಿಗೊಂದನೆ ಮಾಡು
ಕುಲ ದೇವತೆ ಸ್ಥಾಪನೆ ಮನೆಯಲ್ಲಿ ಮಾಡು
ಕೇವಲ ಲೌಕಿಕ ನೋಡು
ಭೂ ದೇವರಿಗೆ ವಂದಿಸಿ ವರಗಳ ಬೇಡು [೨]

ನಾನಾ ದೇಶದಿ ಬಂದ ಜನರು ನಿನ್ನ
ಆನಂದೋತ್ಸವವಿದು ನೋಡೇವೆಂಬರು
ಸ್ನಾನ ಮಾಡಿಸುವ ಸೇವಕರು
ಅಚ್ಯುತಾನಂತಾದ್ರೀಶನೆ ಸಿದ್ಧರಾಗಿಹರು [೩]


maMgaLa snAnava mADELO
jagan maMgaLadAyaka hariyE dayALO [pa]

saNNa nAmava barediTTu bahu
baNNada kuMkuma madhyadaliTTu
saNNiTTu kastUri boTTu
maaDu puNyAhavAchana pItAMbaruTTu [1]

dEvarigoMdane mADu
kula dEvate sthApane maneyalli mADu
kEvala loukika nODu
bhU dEvarige vaMdisi varagaLa bEDu [2]

nAnA dESadi baMda janaru ninna
AnaMdOtsavavidu nODEveMbaru
snAna mADisuva sEvakaru
achyutAnaMtAdrIshane siddharAgiharu [3]

Leave a Reply

Your email address will not be published. Required fields are marked *

You might also like

error: Content is protected !!