Composer : Shri Venugopala vittala [Panganaama timmanna dasaru]
ರಾಗ: ಸಿಂಧುಭೈರವಿ, ಖಂಡಛಾಪುತಾಳ
ಕರಿಸೋ ಧಿಕ್ಕರಿಸೋ ಆದರಿಸೋ
ಹೇಗಾದರೂ ಬರುವೆ , ನಿನ್ನಡಿಗೆ ನಾ ಬರುವೆ ॥ ಪ ॥
ತಿರುಮಲೇಶನೆ ನಿನ್ನ ಪದ ಸಂ –
ದರುಶನವು ಇಲ್ಲದಲೆ ಇಂದಿಗೆ
ವರುಷ ಸಂಪೂರ್ತಾಯ್ತು ಮನ ಎ –
ದ್ಹರಿದರಿದು ನಿನಗೆರಗುತಿದೆ ಶಿರ ॥ ಅ.ಪ ॥
ಪಿಡಿದು ತಾಳಗಳ ತಮ್ಮಡಿಗಳೊಳಗೆ ಗೆಜ್ಜೆಕಟ್ಟಿ
ಗೆಜ್ಜೆಕಟ್ಟಿ ಆರ್ಭಟಿಸಿ ಮನಮುಟ್ಟಿ ॥
ಜಡೆಗರೆಯೆ ಸುಖಭಾಷ್ಫ ಪುಂಖಸ
ಒಡಲಗಂಟಲ ಬಿಗಿದು ಮೃದು ತೊದ –
ಲ್ನುಡಿಗಳನು ನುಡಿಸುವರ ಕಾಣದೆ
ಒಡಹುತಿದೆ ಎನ್ನ ಕಂಗಳೀ ಕೊನೆ ॥ 1 ॥
ದುರ್ವಾದಿಗಳು ನಿನ್ನ ಸರ್ವೋತ್ತಮತವ ಧಿಕ್ಕರಿಸಿ
ಧಿಕ್ಕರಿಸಿ ದುರ್ಮತವ ಕಿಕ್ಕರಿಸಿ ॥
ಹರಿಯೆ ನೀ ಸರ್ವೋತ್ತಮನು ಎಂ –
ದರಿತು ಡಂಗುರ ಹೊಯ್ಸಿ ಸಾರುವ
ಪರಮ ಭಾಗವತರಂಘ್ರಿ ಪಾಂಸಕೆ
ತೊರಬಡುತಲಿದೆ ಎನ್ನ ಈ ಮನ ॥ 2 ॥
ಬಗೆಬಗೆ ರತುನಗಳ್ ಬಿಗಿದ ವಾಹನಗಳನೇರಿ
ರಥವೇರಿ ಊದಿಸಲು ತುತ್ತೂರಿ ॥
ಹಗಲು ಪಂಜಿನ ಬೆಳಕಿನಲಿ
ಝಗಝಗಿಪ ಹಾರಾವಳಿಯ ಬಿಳಿ ಛ –
ತ್ರಿಗಳ ನೆರಳಲಿ ಬರುವ ಚೆಲುವ ಚೆ –
ನ್ನಿಗನೆ ವೇಣುಗೋಪಾಲವಿಠ್ಠಲ ॥ 3 ॥
karisO dhikkarisO AdarisO
hEgAdarU baruve , ninnaDige nA baruve || pa ||
tirumalESane ninna pada saM –
daruSanavu illadale iMdige
varuSha saMpUrtAytu mana e –
d~haridaridu ninageragutide Sira || a pa ||
piDidu tALagaLa tammaDigaLoLage gejjekaTTi
gejjekaTTi ArBaTisi manamuTTi ||
jaDegareye suKaBAShPa puMKasa
oDalagaMTala bigidu mRudu toda –
lnuDigaLanu nuDisuvara kANade
oDahutide enna kaMgaLI kone || 1 ||
durvAdigaLu ninna sarvOttamatava dhikkarisi
dhikkarisi durmatava kikkarisi ||
hariye nI sarvOttamanu eM –
daritu DaMgura hoysi sAruva
parama BAgavataraMGri pAMsake
torabaDutalide enna I mana || 2 ||
bagebage ratunagaL bigida vAhanagaLanEri
rathavEri Udisalu tuttUri ||
hagalu paMjina beLakinali
JagaJagipa hArAvaLiya biLi Ca –
trigaLa neraLali baruva celuva ce –
nnigane vENugOpAlaviThThala || 3 ||
Leave a Reply