Indu ninna moreyahokke

Composer : Shri Purandara dasaru

By Smt.Shubhalakshmi Rao

ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆ
ಎಂದಿಗಾದರೆಮ್ಮ ಕಾಯೊ ಶ್ರೀನಿವಾಸನೆ ||ಪ||

ಶೇಷಗಿರಿಯವಾಸ ಶ್ರೀಶ ದೋಷರಹಿತನೆ
ಏಸು ದಿನಕು ನಿನ್ನ ಪಾದ ದಾಸನು ನಾನೆ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||೧||

ಕಮಲನಯನ ಕಾಮಜನಕ ಕರುಣವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರೊ ಪಾರ್ಥಸಾರಥೇ ||೨||

ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ
ಶರಣಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆಮಗೆ ಮುಕುತಿಯನ್ನು ಪುರಂದರವಿಠಲನೆ ||೩||


iMdu ninna moreya hokke veMkaTESane
eMdigAdaremma kAyo SrInivAsane ||pa||

SEShagiriyavAsa SrISa dOSharahitane
Esu dinaku ninna pAda dAsanu nAne
klESagaisadiru enna svAmiyu nIne ||1||

kamalanayana kAmajanaka karuNavAridhE
rameyanALva kamalanABa hE dayAnidhE
yamana puradi SikShisadiro pArthasArathE ||2||

uragaSayana surarigoDeya siriya ramaNane
SaraNapAla birudu tOri poreva dEvane
karuNisemage mukutiyannu puraMdaraviThalane ||3||

Leave a Reply

Your email address will not be published. Required fields are marked *

You might also like

error: Content is protected !!